Mysore: ಹನುಮ ಜಯಂತಿ ವೇಳೆ ಘರ್ಷಣೆ!! ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ

Karnataka latest murder news clash between two groups Yuva brigade activist murdered in mysore

Mysore: ಮೈಸೂರಿನ (Mysore) ಟಿ.ನರಸೀಪುರ ಪಟ್ಟಣದ ಹೊರವಲಯದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಿಂದ ಯುವ ಬ್ರಿಗೇಡ್‌ ಕಾರ್ಯಕರ್ತ ಕೊಲೆಯಾಗಿದ್ದಾನೆ. ಮೃತ ಕಾರ್ಯಕರ್ತ ವೇಣುಗೋಪಾಲ್‌ ನಾಯಕ್‌(32) ಎಂದು ಗುರುತಿಸಲಾಗಿದೆ. ಶ್ರೀರಾಂಪುರ ಕಾಲೋನಿ ನಿವಾಸಿಯಾಗಿದ್ದ ಈತ, ಹನುಮಜಯಂತಿ ವೇಳೆ ಗುಂಪುಗಳ ಮಧ್ಯೆ ನಡೆದ ವಾಗ್ವಾದ, ಕೊನೆಯಲ್ಲಿ ಕೊಲೆಯಲ್ಲಿ ಅಂತ್ಯವಾಗಿದೆ.

ಡಿವೈಎಸ್‌ಪಿ ಗೋವಿಂದರಾಜು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಟಿ.ನರಸೀಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರಿಂದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಮೃತದೇಹವನ್ನು ಟಿ ನರಸೀಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆ ಮುಂದೆ ನೂರಾರು ಕಾರ್ಯಕರ್ತರು ಬಂದಿದ್ದು, ಅಲ್ಲಿಗೆ ಚಿಂತಕ, ವಾಗ್ಮಿ ಸೂಲಿಬೆಲೆ ಭೇಟಿ ನೀಡಿದ್ದಾರೆ. ಹಾಗೂ ಮೃತ ಯುವಕನ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Leave A Reply

Your email address will not be published.