china: ಶಿಶುವಿಹಾರದಲ್ಲಿ ವ್ಯಕ್ತಿಯೋರ್ವನಿಂದ ಚಾಕು ಇರಿತ! ಮಕ್ಕಳು ಸೇರಿ ಆರು ಮಂದಿ ಸಾವು

Latest news man stabbed to death six people including children in a kindergarten

china: ಶಿಶುವಿಹಾರದಲ್ಲಿ ವ್ಯಕ್ತಿಯೋರ್ವ ಚಾಕುವಿನಿಂದ ದಾಳಿ ನಡೆಸಿದ್ದು, ಶಿಕ್ಷಕರು ಸೇರಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಚೀನಾದ (china)  ಗುವಾಂಗ್‌ಡಾಂಗ್‌ ಪ್ರಾಂತ್ಯದ ಶಿಶುವಿಹಾರದಲ್ಲಿ ನಡೆದಿದೆ. ಓರ್ವ ಶಂಕಿತನನ್ನು ಬಂಧಿಸಲಾಗಿದ್ದು, ಈ ದಾಳಿಯ ಬಗ್ಗೆ ಮಾಧ್ಯಮಗಳು ವರದಿ ಮಾಡಿದೆ.

ಓರ್ವ ಶಿಕ್ಷಕ, ಇಬ್ಬರು ಪೋಷಕರು, ಮೂವರು ವಿದ್ಯಾರ್ಥಿಗಳು ಮೃತಪಟ್ಟವರು. ಪೊಲೀಸರ ಪ್ರಕಾರ ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಹೇಳಿದ್ದಾರೆ. ಎಪ್ರಿಲ್‌ 2022 ರಲ್ಲಿ ಆಗ್ನೇಯ ಜಿಯಾಂಗ್ಕ್ಸಿ ಪ್ರಾಂತ್ಯದ ಶಿಶುವಿಹಾರದಲ್ಲಿ ಕೂಡಾ ಇದೇ ರೀತಿ ದಾಳಿ ನಡೆದಿದ್ದು, ಮೂವರು ಸಾವು, ಆರು ಮಂದಿ ಗಾಯಗೊಂಡ ಘಟನೆ ನಡೆದಿತ್ತು. ಈ ತರಹದ ಕೆಲವು ಘಟನೆಗಳು ಚೀನಾದ ಹಲವು ಶಾಲೆಗಳಲ್ಲಿ ನಡೆದಿತ್ತು.

Leave A Reply

Your email address will not be published.