Intagram Reels: ನಾನೇ ಡಾನ್‌ ಎಂದು ರೀಲ್ಸ್‌ ಮಾಡಿ, ಅತ್ಯಂತ ಕೆಟ್ಟದಾಗಿ ಬೈದ ಯುವಕನ ಅಪಹರಣ, ಬೆತ್ತಲೆ ಮಾಡಿ ಹಲ್ಲೆ ಮಾಡಿದ ಆರೋಪಿಗಳು!!

Latest news Intagram Reels If the boy who called himself don was kidnapped

Intagram Reels: ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ (Intagram Reels) ಮಾಡಿ ಹುಬ್ಬಳ್ಳಿಗೆ ನಾನೇ ಡಾನ್‌ ಎಂದು ಹೇಳುತ್ತಿದ್ದ ಯುವಕನನ್ನು ಕೆಲವೊಂದು ರೌಡಿಗಳು ಅಪಹರಣ ಮಾಡಿ, ಬೆತ್ತಲೆಗೊಳಿಸಿರುವ ಘಟನೆಯೊಂದು ನಡೆದಿದೆ. ಈ ಘಟನೆ ಧಾರವಾಡದ ನಿವಾಸಿ ಸಂದೀಪ್‌ ಎಂಬಾತನಿಗೆ ಪುಡಿ ರೌಡಿಗಳು ಹಲ್ಲೆ ಮಾಡಿದ್ದಾರೆ.

ಸಂದೀಪ್‌ ರೀಲ್ಸ್‌ ಮಾಡುವ ಸಂದರ್ಭದಲ್ಲಿ ಪ್ರಜ್ವಲ್‌ ಎಂಬಾತನ ತಾಯಿಗೆ ಅತ್ಯಂತ ಕೆಟ್ಟದಾಗಿ ಬೈದಿರುವುದಾಗಿ, ಇದರಿಂದ ಪ್ರಜ್ವಲ್‌ ಸಿಟ್ಟಿಗೆದ್ದು, ತನ್ನ ಕೆಲವೊಂದು ಸಹಚರರೊಂದಿಗೆ ಸೇರಿ ಆತನನ್ನು ಅಪಹರಿಸಿ ಹಲ್ಲೆ ಮಾಡಿದ್ದಾರೆ.

ಆರೋಪಿ ಪ್ರಜ್ವಲ್‌ ತಾಯಿಗೆ ರೀಲ್ಸ್‌ ಮೂಲಕ ಸಂದೀಪ್‌ ಬೈದಿದ್ದ. ಈ ಘಟನೆ ನಡೆದು ಮೂರ್ನಾಲ್ಕು ತಿಂಗಳು ಕಳೆದಿದ್ದು, ಈ ಬಗ್ಗೆ ಸಂದೀಪ್‌ ದೂರು ಕೊಟ್ಟಿಲ್ಲ. ಹಾಗೆನೇ ಎರಡು ವೀಡಿಯೋ ಮೂಲಕ ಈ ವಿಷಯಕ್ಕೆ ಬಂದಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ಸಂತೋಷ್‌ ಬಾಬು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪ್ರಜ್ವಲ್‌, ಗಣೇಶ್‌, ಶಾಚಿನ್‌, ಮಂಜು ಎಂಬುವವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.