Pet Passport: ಬೀದಿನಾಯಿಗೂ ಬಂತು ಪಾಸ್ಪೋರ್ಟ್‌! ಇಟಲಿಗೆ ಹಾರಲಿರುವ ಮೋತಿ, ಅಂದ ಹಾಗೆ ಪೆಟ್‌ ಪಾಸ್ಪೋರ್ಟ್‌ ಎಂದರೇನು? ಇದಕ್ಕಿರುವ ನಿಯಮವೇನು ಗೊತ್ತೇ?

Latest news intresting news What is Pet Passport passport for dogs

Pet Passport: ಬೀದಿನಾಯಿಗಳಿಗೆ ಫಾರಿನ್‌ ಟ್ರಿಪ್‌ ಭಾಗ್ಯ ಲಭಿಸಿದೆ. ಈ ಸುದ್ದಿ ಕೇಳಿ ನಿಮಗೆ ಆಶ್ಚರ್ಯವಾಗಿರಬಹುದು. ಹೌದು, ಈ ಸುದ್ದಿ ನಿಜ. ವಾರಣಾಸಿಯ ಬೀದಿ ಬದಿಯ ನಾಯಿಗಳು ಇನ್ನು ಮುಂದೆ ಇಟಲಿಗೆ ಪ್ರಯಾಣ ಬೆಳೆಸಲಿದೆ. ಇಟಲಿಯನ್‌ ಬರಹಗಾರ ವರಾ ಲಝಾರೆಟ್ಟಿ ಇದನ್ನು ಮಾಡಲಿದ್ದಾರೆ. ಇವರು ಕಳೆದ ಹತ್ತು ವರ್ಷಗಳಿಂದ ಭಾರತಕ್ಕೆ ಬರುತ್ತಿದ್ದು, ಈ ಕ್ರಮ ಕೈಗೊಂಡಿದ್ದಾರೆ. ಅಂದ ಹಾಗೆ ಈ ಬೀದಿ ನಾಯಿಗಳಿಗೆ ತರಬೇತಿ, ಮತ್ತು ದಾಖಲೆಗಳ ಕೆಲಸ ಪೂರ್ಣಗೊಂಡಿದ್ದು, ಪಾಸ್‌ಪೋರ್ಟ್‌ ಕೂಡಾ ಸಿದ್ಧವಾಗಿದೆ.

ನಿಮಗೆ ಗೊತ್ತಿದೆಯೇ ಪಿಇಟಿ (PET Passport) ಪಾಸ್‌ಪೋರ್ಟ್‌ ಬಗ್ಗೆ ಗೊತ್ತಿದೆಯೇ? ಇದು ವಿದೇಶಕ್ಕೆ ಹೋಗುವ ಯಾವುದೇ ಸಾಕುಪ್ರಾಣಿಗಳಿಗೆ ಇದು ಬೇಕಾಗಿರುವಂತಹ ಪಾಸ್‌ಪೋರ್ಟ್‌. ಈ ಪಾಸ್‌ಪೋರ್ಟ್‌ ಇಲ್ಲದೆ ಕೂಡಾ ಪ್ರಾಣಿಗಳನ್ನು ಪ್ರವೇಶ ನೀಡುವ ಅನೇಕ ದೇಶಗಳಿವೆ. ಆದರೆ ಕೆಲವು ದೇಶಗಳಲ್ಲಿ ಈ ಪಾಸ್‌ಪೋರ್ಟ್‌ ಅನಿವಾರ್ಯ.

ಇಟಲಿಯ ಲೇಖಕಿ ವೆರಾ ಲಝರೆಟ್‌ ಅವರು ವಾರಣಾಸಿಗೆಂದು ಬಂದಾಗ ʼಮೋತಿʼ ಎಂಬ ಬೀದಿ ನಾಯಿಯ ಜೊತೆ ಒಲವು ತೋರಿದ್ದರು. ಆದರೆ ಮೋತಿ ಮೇಲೆ ಕೆಲವು ಹಿಂಸಾತ್ಮಕ ರೂಪದಲ್ಲಿ ಹಲ್ಲೆ ಮಾಡಿದ ವಿಷಯ ತಿಳಿದು ಅವರು ಮರುಗಿ, ಅದನ್ನು ದತ್ತು ತೆಗೆದುಕೊಂಡು ಇಟಲಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಅದಕ್ಕಾಗಿ ಮೋತಿಗೆ ಪಾಸ್‌ಪೋರ್ಟ್‌, ಜೊತೆಗೆ ವಾಕ್ಸಿನೇಷನ್‌ ಸೇರಿದಂತೆ ಹಲವು ದಾಖಲೆಗಳು ರೆಡಿಯಾಗಿದೆ. ಜುಲೈ 13ರಂದು ಮೋತಿ ದಿಲ್ಲಿಯಿಂದ ಇಟಲಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಲಿದೆ.

ನೀವೇನಾದರೂ ನಿಮ್ಮ ಸಾಕುಪ್ರಾಣಿಗಳನ್ನು ವಿದೇಶಕ್ಕೆ ಕರೆದೊಯ್ಯಲು ನೀವೇನಾದರೂ ಬಯಸಿದರೆ ನೀವು ನಿಮ್ಮ ಸಾಕುಪ್ರಾಣಿಯ ಪಾಸ್ಪೋರ್ಟ್‌ ಹೊಂದಿರಬೇಕು. ಇದು ಸಾಕುಪ್ರಾಣಿಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ದಾಖಲಿಸುವ ದಾಖಲೆಯಾಗಿದೆ. ಎರಡು ದೇಶಗಳ ನಡುವೆ ಪ್ರಾಣಿಗಳ ಪ್ರಯಾಣವನ್ನು ಸುಖಕರವಾಗಿ ಪೂರ್ಣಗೊಳಿಸುವುದು ಇದರ ಮುಖ್ಯ ಉದ್ದೇಶ. ಕೆಲವು ದೇಶಗಳು ಪಾಸ್‌ಪೋರ್ಟ್‌ ಅಂದರೆ ಪ್ರಾಣಿಗಳ ಪಾಸ್‌ಪೋರ್ಟ್‌ ಬಗ್ಗೆ ಏನೂ ಕೇಳದಿದ್ದರೂ, ಸಾಕುಪ್ರಾಣಿಗಳ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ದೇಶಕ್ಕೆ ನೀಡಬೇಕು.

ನಿಮಗಿದು ಗೊತ್ತೇ? ಈ ಪೆಟ್‌ಪಾಸ್ಪೋರ್ಟ್‌ ಯಾವ ರೀತಿಯಲ್ಲಿ ಇರುತ್ತದೆಯೆಂದು? ಇದು ಮುಖ್ಯವಾಗಿ ಒಂದು ಪೇಪರ್‌ ಅಥವಾ ಸಣ್ಣ ಕಿರುಪುಸ್ತಕದ ರೀತಿಯಲ್ಲಿ ಇರುತ್ತದೆ. ಇಲ್ಲಿ ಮುಖ್ಯವಾದುದೇನೆಂದರೆ ಪ್ರವಾಸದ ವೇಳೆ ಬೇಕಾದ ಸಾಕು ಪ್ರಾಣಿಗಳಿಗೆ ಕುತ್ತಿಗೆಗೆ ಅಥವಾ ಚರ್ಮದ ಒಳಗೆ ಇರಿಸಲಾಗುವ ಮೈಕ್ರೋಚಿಪ್‌ ಸಂಖ್ಯೆ ಇದು ಮುಖ್ಯ ಗುರುತು. ಇದಲ್ಲದೇ ಸಾಕುಪ್ರಾಣಿಗೆ ಯಾವಾಗ, ಎಷ್ಟು ದಿನಗಳ ಹಿಂದೆ ರೇಬಿಸ್‌ ಚುಚ್ಚುಮದ್ದು ನೀಡಲಾಯಿತು? ಇದನ್ನು ದಾಖಲಿಸಬೇಕು. ಪರವಾನಗಿ ಪಡೆದ ಪಶುವೈದ್ಯರು ಮಾತ್ರ ಪಿಇಟಿ ಪಾಸ್‌ಪೋರ್ಟ್‌ ನೀಡುತ್ತಾರೆ.

ವಿದೇಶದಿಂದ ಭಾರತಕ್ಕೆ ಪ್ರಾಣಿಗಳನ್ನು ತರಲು ಇರುವ ನಿಯಮಗಳೇನು?
ಹೊರಗಿನಿಂದ ಬರುವ ಸಾಕುಪ್ರಾಣಿಗಳಿಗೆ ಮೈಕ್ರೋಚಿಪ್ ಅಳವಡಿಸಬೇಕು.
ಪ್ರವಾಸಿಗರು ತನ್ನೊಂದಿಗೆ ತಾತ್ಕಾಲಿಕವಾಗಿ ಪ್ರಾಣಿಯನ್ನು ತಂದರೆ, ಅವರು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಿಂದ ಪರವಾನಗಿ ತೆಗೆದುಕೊಳ್ಳಬೇಕಾಗುತ್ತದೆ.
ಭಾರತಕ್ಕೆ ಪ್ರವೇಶಿಸುವ 31 ದಿನಗಳ ಮೊದಲು ರೇಬೀಸ್ ಲಸಿಕೆ ಕಡ್ಡಾಯವಾಗಿದೆ.
ಒಂದು ಪ್ರಾಣಿಯು ಕಾರ್ಗೋ ಮೂಲಕ ಬಂದರೆ, ಅದನ್ನು ತೆಗೆದುಕೊಳ್ಳಲು ಕನಿಷ್ಠ ಮೂವತ್ತು ದಿನ ಬೇಕಾಗುತ್ತದೆ.

ಪಿಇಟಿ ಪಾಸ್‌ಪೋರ್ಟ್‌ಗೆ ಇರುವ ಮುಖ್ಯವಾದ ಷರತ್ತುಗಳು ಯಾವುದು?
ಮೈಕ್ರೋಚಿಪ್‌ನ ಅಳವಡಿಕೆ, ಇದು ಪ್ರಾಣಿಗಳ ಮುಖ್ಯ ಗುರುತಿಸುವಿಕೆ. ಸಾಕುಪ್ರಾಣಿ ಪಾಸ್‌ಪೋರ್ಟ್‌ಗೆ ಮೊದಲ ಅಗತ್ಯ ಇದಾಗಿದೆ.
ರೇಬೀಸ್ ವ್ಯಾಕ್ಸಿನೇಷನ್ ದಿನಾಂಕ ಮತ್ತು ರೇಬೀಸ್ ಪ್ರತಿಕಾಯ ಪರೀಕ್ಷಾ ವರದಿ.
ಪ್ರಾಣಿಗಳ ಮೇಲೆ ಚಿಗಟಗಳು, ಉಣ್ಣಿ ಮತ್ತು ಇತರ ಕೀಟಗಳಿಗೆ ಚಿಕಿತ್ಸೆಯ ಪುರಾವೆಗಳು
ಪ್ರಾಣಿ ರೋಗ ಮುಕ್ತವಾಗಿದೆ ಎಂದು ಪಶುವೈದ್ಯರ ಖಚಿತಪಡಿಸುವಿಕೆ

Leave A Reply

Your email address will not be published.