Death news: ಯುವ ಬ್ರಿಗೇಡ್ ಸಂಚಾಲಕನ ಹತ್ಯೆ ಪ್ರಕರಣ; ಆರು ಮಂದಿ ಅರೆಸ್ಟ್, ಕಾರಣ ಬಹಿರಂಗ

Death news Six people arrested case of the killing of the youth brigade organizer

Death news:  ಮೈಸೂರಿನಲ್ಲಿ ಶನಿವಾರ ಹನುಮ ಜಯಂತಿ ಮೆರವಣಿಗೆ ನಡೆಯುತ್ತಿದ್ದ ಸಂದರ್ಭ ಕ್ಷುಲ್ಲಕ ಕಾರಣಕ್ಕಾಗಿ ಎರಡು ಬಣಗಳ ನಡುವೆ ಗಲಾಟೆ ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ಗಲಾಟೆ ಜೋರಾಗಿ ಯುವ ಬ್ರಿಗೇಡ್ ಸಂಚಾಲಕನ ಹತ್ಯೆಯ (Death news) ಮೂಲಕ ಪ್ರಕರಣ ಮುಗಿದ ಘಟನೆ ನಡೆದಿದೆ.

ಮೈಸೂರು ಟಿ.ನರಸೀಪುರ ಪಟ್ಟಣದ ಹೊರ ವಲಯದ ಸಂತಮಾಳದ ಸಮೀಪದ ಸರ್ವಿಸ್ ಸೆಂಟರ್‌ನ ಬಳಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದ ಪರಿಣಾಮ ಪಟ್ಟಣದ ಶ್ರೀರಾಂಪುರ ಕಾಲನಿ ನಿವಾಸಿಯಾದ ಯುವ ಬ್ರಿಗೇಡ್‌ನ ಸಂಚಾಲಕ ವೇಣುಗೋಪಾಲ್ ನಾಯಕ್ (32) ಅವರನ್ನು ಕೊಲೆಗೈದ ಘಟನೆ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮೈಸೂರು ಪಟ್ಟಣದಲ್ಲಿ ಹನುಮ ಜಯಂತಿ ವೇಳೆ ಮೆರವಣಿಗೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಹಾಕಲಾಗಿದೆ. ಇದಕ್ಕೆ ಕೆಲವರಿಂದ ವಿರೋಧ ಉಂಟಾಗಿದ್ದರಿಂದ ವೇಣುಗೋಪಾಲ್ ಹನುಮ ಜಯಂತಿ ಮೆರವಣಿಗೆಯಲ್ಲಿ ಪುನೀತ್ ಫೋಟೋ ಬೇಡವೆಂದು ತೆಗೆಸಿದ್ದಾರೆ. ಇದರಿಂದ ಆರಂಭವಾದ ಜಗಳ ಶನಿವಾರ ತಣ್ಣಗೆ ಆಗಿದ್ದು,ಆದರೆ ಮರುದಿನ ಪುನಃ ಈ ವಿಚಾರ ಪ್ರಸ್ತಾಪವಾಗಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಅವರ ಕೊಲೆಯಲ್ಲಿ ಅಂತ್ಯ ಕಂಡಿದೆ.ಈ ಹಿನ್ನೆಲೆ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈ ಪ್ರಕರಣದ ಕುರಿತಾಗಿ ಆರೋಪಿಗಳಾದ ಮಣಿಕಂಠ(33), ಆರೋಪಿ ಸಂದೇಶ್ (36) ಅವರನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ಭಾಗವಾಗಿ ಇಂದು ಅನಿಲ್, ಶಂಕರ್ ಅಲಿಯಾಸ್ ತುಪ್ಪ, ಮಂಜು ಮತ್ತು ಹ್ಯಾರಿಸ್ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣದ ತನಿಖೆ ನಡೆಯುತ್ತಿದ್ದು ಇನ್ನೂ ಹೆಚ್ಚು ಮಂದಿಯನ್ನು ಬಂಧಿಸುವ ಸಾಧ್ಯತೆಗಳಿವೆ.

Leave A Reply

Your email address will not be published.