Niharika Konidela: ಮೆಗಾಸ್ಟಾರ್‌ ಕುಟುಂಬದಲ್ಲಿ ಮುಂದುವರಿದ ವಿಚ್ಛೇದನ ಪ್ರಕ್ರಿಯೆ! ನಿಹಾರಿಕಾ ವಿಚ್ಛೇದನಕ್ಕೆ ಮುಖ್ಯ ಕಾರಣ ಏನೆಂದು ಹೇಳಿದ ಮಾವ!

Father-in-law said the main reason for Niharika Konidela divorce

Niharika Konidela: ಚಿರಂಜೀವಿ ತಮ್ಮ ನಾಗ ಬಾಬು ಅವರ ಮಗಳು ನಿಹಾರಿಕಾ. ನಿಹಾರಿಕಾ ಕೊನಿಡೆಲಾ ಹಾಗೂ ಚೈತನ್ಯ ಜೆವಿ ಪರಸ್ಪರ ಪ್ರೀತಿಸಿ ಮದುವೆಯಾದವರು. ಹಲವು ವರ್ಷಗಳ ಕಾಲ ಪ್ರೀತಿಗೆ ಈ ಜೋಡಿ ಮದುವೆ ಎಂಬ ಬಂಧನಕ್ಕೆ ಜಂಟಿಯಾಗಿ ಭಾಗಿಯಾಗಿ 2020ರ ಡಿಸೆಂಬರ್ ನಲ್ಲಿ ಉದಯಪುರದಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿದರು. ಆದರೆ, ಮದುವೆಯಾಗಿ ವರ್ಷ ಕಳೆಯುವುದರೊಳಗೆ ದಾಂಪತ್ಯ ಜೀವನಕ್ಕೆ ವಿದಾಯ ಹೇಳಲು ಇಬ್ಬರು ನಿರ್ಧಾರ ಮಾಡಿದ್ದಾರೆ. ಹೀಗಾಗಿ, ಚಿರಂಜೀವಿ ಕುಟುಂಬದ ಮಗಳು ನಿಹಾರಿಕಾ ಕೊನಿಡೆಲಾ (Niharika Konidela) ಹಾಗೂ ವೆಂಕಟ್ ಚೈತನ್ಯ ಜೊನ್ನಲಗಡ್ಡ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.

ನಿಹಾರಿಕ ಮತ್ತು ವೆಂಕಟ್ ಚೈತನ್ಯ ದೂರ ಆಗುತ್ತಿರುವ ವಿಚಾರವನ್ನು ನಿಹಾರಿಕ ತಮ್ಮ ಸಾಮಾಜಿಕ ಜಾಲಾ ತಾಣದಲ್ಲಿ ಬರೆದುಕೊಂಡಿದ್ದರು. ಅಷ್ಟೆ ಅಲ್ಲದೇ, ತಮ್ಮ ಖಾಸಗಿ ಜೀವನಕ್ಕೆ ಪ್ರೈವೆಸಿಗೆ ಕೊಡಿ ಎಂದು ಮನವಿ ಕೂಡ ಮಾಡಿಕೊಂಡಿದ್ದರು. ಹೀಗಾಗಿ, ಸಹಜವಾಗಿ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ದೂರವಾಗುತ್ತಿರುವುದೇಕೆ ಎಂಬ ಪ್ರಶ್ನೆ ಜನ ಮಾನಸದಲ್ಲಿ ಉದ್ಭವವಾಗಿದೆ.ಕೆಲ ತೆಲುಗು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ಮದುವೆಗೆ ಮೊದಲಿದ್ದ ಹೊಂದಾಣಿಕೆ ಮದುವೆ ಬಳಿಕ ಕಾಣಿಸುತ್ತಿಲ್ಲ. ಹಲವು ವ್ಯತ್ಯಾಸಗಳು ಎದುರಾಗಿದ್ದರಿಂದ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಚೈತನ್ಯ ಅವರ ತಂದೆ ತಮ್ಮ ಮಗನ ವಿಚ್ಛೇದನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು,ಇವು ಚೈತನ್ಯ ಅವರ ತಂದೆ ಪ್ರಭಾಕರ್ ರಾವ್ (Prabhakar Rao) ಈ ಕುರಿತು ತಮ್ಮ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದು ಎಷ್ಟರಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ.

ನಿಹಾರಿಕಾಗೆ ನಮ್ಮ ಕುಟುಂಬದ ಬಗ್ಗೆ ಯಾವುದೇ ರೀತಿಯ ಗೌರವ ಎಂಬುದೇ ಇಲ್ಲ. ಕ್ಲಬ್ಬು, ಪಬ್ಬು ಎಂದುಕೊಂಡು ಸುತ್ತಾಡೋದನ್ನು ಬಿಟ್ಟರೆ ಆಕೆಗೆ ಕುಟುಂಬದ ಬಗ್ಗೆ ಕಾಳಜಿ ಯೇ ಇರಲಿಲ್ಲ. ಈಎಲ್ಲಕ್ಕಿಂತ ಹೆಚ್ಚಾಗಿ ಆಕೆಗೆ ತನ್ನ ಗಂಡನ ಜೊತೆಗೆ ಜೀವನ ಕಳೆಯುವಂತಹ ಉತ್ಸಾಹವೂ ಇರಲಿಲ್ಲ. ಹೀಗಿದ್ದರೂ ಕೂಡ ನಾವು ಸಹಿಸಿಕೊಂಡು ಬಂದಿದ್ದೇವೆ. ಆದರೆ, ಇದು ಅತಿರೇಕವಾಗುತ್ತಿದೆ ಎಂಬ ಅರಿವಾದಾಗ ದೂರ ಆಗುವುದಕ್ಕೆ ತೀರ್ಮಾನ ಮಾಡಿದ್ದು, ಆದರೆ, ಮೆಗಾಸ್ಟಾರ್ ಕುಟುಂಬದವರು ನಮ್ಮ ಮೇಲೆ ಗೂಬೆ ಕೂರಿಸುತ್ತಿರುವುದು ನೋವು ತಂದಿದೆ ಎಂದು ಆಪ್ತರ ಮುಂದೆ ಪ್ರಭಾಕರ್ ರಾವ್ ಹೇಳಿಕೊಂಡಿದ್ದಾರೆ ಎಂಬ ಸುದ್ದಿ ತೆಲುಗು ಚಿತ್ರೋದ್ಯಮದಲ್ಲಿ ದೊಡ್ದ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

Leave A Reply

Your email address will not be published.