Aishwarya Rajinikanth marriage: ನಟ ಧನುಶ್‌ ಮಾಜಿ ಪತ್ನಿ ಐಶ್ವರ್ಯ ಮತ್ತೆ ಪ್ರೀತಿಯ ಬಲೆಯಲ್ಲಿ! ಶೀಘ್ರ ಮದುವೆ

Latest cinema news actor Dhanush wife Aishwarya Rajinikanth second marriage news

Aishwarya Rajanikanth marriage: ತಮಿಳು ಚಿತ್ರರಂಗದ ಖ್ಯಾತ ನಟ ರಜನಿಕಾಂತ್‌ ಯಾರಿಗೆ ಗೊತ್ತಿಲ್ಲ ಹೇಳಿ. ಇವರಿಗೆ ಇಬ್ಬರು ಹೆಣ್ಣುಮಕ್ಕಳು. ಇತ್ತೀಚೆಗಷ್ಟೇ ರಜನಿಯವರ ಹಿರಿಯ ಮಗಳಾದ ಐಶ್ವರ್ಯಾ ಹಾಗೂ ನಟ ಧನುಶ್‌ ಡಿವೋರ್ಸ್‌ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಸೂಪರ್‌ ಸ್ಟಾರ್‌ ಪುತ್ರಿಯ ಮರು ಮದುವೆಯ( Aishwarya Rajinikanth marriage) ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಧನುಶ್‌ ಮತ್ತು ಐಶ್ವರ್ಯಾ ಪ್ರೀತಿ ಮಾಡಿ ಮದುವೆಯಾಗಿದ್ದರು. ಆರಂಭದಲ್ಲಿ ಇದನ್ನೆಲ್ಲ ಅಲ್ಲಗೆಳೆದ ಧನುಶ್‌ ನಂತರ ಎಲ್ಲಾ ಮಾಧ್ಯಮದಲ್ಲಿ ಈ ವಿಷಯ ಬಂತು. ನಂತರ ಅವರ ಮದುವೆಯೂ ನಡೆಯಿತು. ಇವರಿಬ್ಬರ ಪ್ರೀತಿಯ ಕುರುಹುಗಳಾಗಿ ಇಬ್ಬರು ಮಕ್ಕಳಿದ್ದಾರೆ. ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 18 ನವೆಂಬರ್ 2004 ರಂದು ವಿವಾಹವಾದ ಇವರು ಸುಮಾರು ಹದಿನೆಂಟು ವರ್ಷಗಳ ವೈವಾಹಿಕ ಜೀವನದ ಆನಂದ ಅನುಭವಿಸಿದ ನಂತರ ಧನುಶ್‌ ಐಶ್ವರ್ಯ ಈಗ ಬೇರ್ಪಟ್ಟಿದ್ದು ಅವರ ಅಭಿಮಾನಿಗಳು ನಿಜಕ್ಕೂ ಬೆಸರಪಟ್ಟಿದ್ದರು.

ಆದರೆ ಇತ್ತೀಚೆಗೆ ಬಂದ ಸುದ್ದಿಯೆಂದರೆ ನಟಿ ಐಶ್ವರ್ಯಾ ತಮ್ಮ ತಂದೆಯ ಚಿತ್ರವೊಂದಕ್ಕೆ ನಿರ್ದೇಶನ ಮಾಡುತ್ತಿದ್ದು, ಇದರ ಜೊತೆಗೆ ಇವರು ಯುವನಟನೋರ್ವನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆಂದು ಹೇಳಲಾಗುತ್ತಿದೆ.

Leave A Reply

Your email address will not be published.