Gold Biscuit: ಕೆಜಿಎಫ್ ನಟ ಚಿನ್ನದ ಬಿಸ್ಕೆಟ್ ನಲ್ಲಿ ಮಿಂಚಿಂಗ್!!! ಯಶ್ ಫ್ಯಾನ್ಸ್ ಖುಷಿಯೋ ಖುಷಿ

Latest new Launch of Gold Coin and Gold Biscuit in the name of KGF Actor

Gold Biscuit: ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗ ಹೊಸ ಅಲೆಯನ್ನು ಸೃಷ್ಟಿ ಮಾಡಿದ್ದು ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುಗೆಯಿಂದ ನೋಡುವಂತೆ ಮಾಡಿದೆ. KGF ಸಿನಿಮಾದ ಮೂಲಕ ಎಲ್ಲರ ಮನಗೆದ್ದ ರಾಕಿ ಭಾಯ್ ಅವರಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇರುವುದು ಗೊತ್ತಿರುವ ವಿಚಾರ.

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ಸ್ಟಾರ್ ನಟರೊಬ್ಬರ ಹೆಸರಿನ ಗೋಲ್ಡ್ ಕಾಯಿನ್ ಮತ್ತು ಗೋಲ್ಡ್ ಬಿಸ್ಕೆಟ್ ರಿಲೀಸ್ ಆಗಿದೆ. ಅರೇ, ಇದೇನಿದು ಯಾರ ಹೆಸರಿನಲ್ಲಿ ಗೋಲ್ಡ್ ಕಾಯಿನ್ ಬಿಡುಗಡೆ ಆಗಿದೆ ಎಂದು ನೀವು ಕುತೂಹಲದಿಂದ ಯೋಚಿಸುತ್ತಿದ್ದರೆ, ಅದು ಬೇರೆ ಯಾರದ್ದೋ ಹೆಸರಿನಲ್ಲಿ ಅಲ್ಲ! ರಾಕಿ ಭಾಯಿ ಯಶ್ (actor Yash)ಅವರ ಹೆಸರಿನಲ್ಲಿ ! ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾಗೆ (Malaysia)ಟ್ರಿಪ್ ಹೋಗಿದ್ದು, ಈ ವೇಳೆ ತಮ್ಮ ಅಭಿಮಾನಿಯೊಬ್ಬರ ಗೋಲ್ಡ್ ಶಾಪ್ ಉದ್ಘಾಟನೆಯನ್ನು ಮಾಡಿದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅದೇ ಅಂಗಡಿಯವರು ರಾಕಿಭಾಯ್ (Rakibhai) ಯಶ್ ಹೆಸರಿನಲ್ಲಿ ಗೋಲ್ಡ್ ಕಾಯಿನ್ ಮತ್ತು ಬಿಸ್ಕೆಟ್ (Gold Biscuit) ಬಿಡುಗಡೆ ಮಾಡಿದ್ದಾರಂತೆ.

ಅದೇ ಚಿನ್ನದ ಅಂಗಡಿಯಲ್ಲಿ ಯಶ್ ಫೋಟೋ ಇರುವ ಚಿನ್ನದ ಬಿಸ್ಕೇಟ್‌ ತಯಾರು ಮಾಡಿದ್ದನ್ನು ನೋಡಿ ಎಲ್ಲರ ಮನ ಗೆದ್ದಿರುವ ರಾಕಿ ಭಾಯಿ ಕೂಡ ಶಾಕ್ ಆದರಂತೆ. ಈ ಗೋಲ್ಡನ್ ಬಾರ್‌ಗಳ ಮೇಲೆ ಯಶ್ ಸಹಿ ಹಾಕಿದ್ದಾರೆ. ಈ ಆ ಗೋಲ್ಡ್ ಬಿಸ್ಕೇಟ್‌ಗಳ ಮಲೇಶಿಯಾ ಗೋಲ್ಡ್ ಮಾರ್ಕೆಟ್ಗೆ ತಲುಪಿವೆ ಎನ್ನಲಾಗಿದೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿವೆ.

ಮಲೇಷ್ಯಾಗೆ ಹೋಗಿದ್ದ ಸಂದರ್ಭ ಯಶ್ ತಮ್ಮ ಮುಂದಿನ (New Movie) ಸಿನಿಮಾದ ಬಗ್ಗೆ ಮತ್ತೊಂದು ಅಪ್ ಡೇಟ್ (Update)ಕೊಟ್ಟಿದ್ದಾರೆ. ಮಲೇಷ್ಯಾದಲ್ಲಿ ರಾಕಿಂಗ್ ಸ್ಟಾರ್ ಯಶ್, ಹೊಸ ಸಿನಿಮಾದ ಕುರಿತು ಮಾಹಿತಿ ನೀಡಿದ್ದು, ದೊಡ್ಡ ಸಿನಿಮಾವನ್ನು ಮಾಡುತ್ತೇನೆ ಎಂದು ಹೇಳುತ್ತಿಲ್ಲ ಬದಲಿಗೆ ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದು, ಇದೊಂದು ಮಾಸ್ ಸಿನಿಮಾವಾಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ: ಮಂಗಳೂರು: ಕೋಮು ಪ್ರಚೋದನಕಾರಿ ಪೋಸ್ಟ್‌ , ಒಂದು ತಿಂಗಳಲ್ಲಿ 21 ಪ್ರಕರಣ ದಾಖಲು! 

Leave A Reply

Your email address will not be published.