Betel Leaves Rate: ಅತ್ತ ಕಡೆ ತರಕಾರಿ ಬೆಲೆ ಗಗನದತ್ತ ಮುಖ ಮಾಡಿದರೆ, ವೀಳ್ಯದೆಲೆ ಬೆಲೆ ಕೂಡಾ ಏರಿಕೆ! ಕಂಗಾಲಾದ ಗ್ರಾಹಕ

Latest news Betel Leaves market Rate today Betel leaves price hike

Betel Leaves Rate: ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿ ಜನರನ್ನು ಹೈರಾಣಾಗಿಸಿದೆ. ಈಗಾಗಲೇ ತರಕಾರಿ(Vegitable), ವಿದ್ಯುತ್(Electricity )ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಇನ್ನೂ ಮುಂದಿನ ದಿನಗಳಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆಯೋ ಎಂಬ ಚಿಂತೆ ಕಾಡುತ್ತಿದೆ. ಅಡುಗೆ ಅನಿಲ, ವಾಣಿಜ್ಯ ಅನಿಲ, ಸಿಎನ್ಜಿ-ಪಿಎನ್ಜಿ ಸೇರಿದಂತೆ ದೈನಂದಿನ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.

ಈಗಾಗಲೇ ಟೋಮ್ಯಾಟೋ ಬೆಲೆ ಗಗನಕ್ಕೇರಿದೆ. ಇದರ ನಡುವೆ ಎಣ್ಣೆ ಪ್ರಿಯರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇದೀಗ, ವೀಳ್ಯದೆಲೆಯ ಸರತಿ. ವೀಳ್ಯದೆಲೆ ಬೆಲೆ ಮತ್ತು ಕಪ್ಪು ಎಲೆ (Betel Leaves Rate ) ಬೆಲೆ ಕೂಡ ಏರಿಕೆ ಕಂಡಿದ್ದು, ಹೀಗಾಗಿ, ಎಲೆ ಅಡಿಕೆ ಮೆಲ್ಲುವ ಮಂದಿಗೆ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ಇದರ ನಡುವೆ ಬಾದಾಮಿ ಭಾಗದಲ್ಲಿ ಎಲೆ ಬೆಳೆಗಾರರ ಸಂಖ್ಯೆ ಕಡಿಮೆಯಾಗುತ್ತಿದ್ದು, ಮೊದಲು ಬಾದಾಮಿ ಭಾಗದಲ್ಲಿ 150 ಎಲೆ ತೋಟಗಳಿದ್ದು, ಇದೀಗ 50 ತೋಟಗಳು ಮಾತ್ರ ಇದ್ದು, ಇದು ಕೂಡ ಎಲೆ ಬೆಲೆ ಏರಿಕೆಗೆ ಕಾರಣವೆಂದು ಹೇಳಲಾಗುತ್ತಿದೆ.

ಒಂದೆಡೆ ಮಳೆಯ ಕೊರತೆ,ಮತ್ತೊಂದೆಡೆ ಇಳುವರಿ ಕಡಿಮೆ ಇವಿಷ್ಟೇ ಸಾಲದೆಂಬಂತೆ ವೀಳ್ಯದೆಲೆ ಬೆಳೆಗಾರರ ಸಂಖ್ಯೆ ಕೂಡ ಕಡಿಮೆಯಾಗಿರುವ ಪರಿಣಾಮ ವೀಳ್ಯದೆಲೆಯ ಬೆಲೆ ಗಗನಕ್ಕೇರಿದೆ. ಸದ್ಯ 12 ಸಾವಿರ ವೀಳ್ಯದೆಲೆಯ ಒಂದು ಬಂಡಲ್‌ ಬೆಲೆ 6 ಸಾವಿರಕ್ಕೆ ಏರಿಕೆ ಕಂಡಿದೆ. ತಿಂಗಳ ಹಿಂದೆ 2500 ರೂ. ಬೆಲೆ‌ಯಿದ್ದ ತಿಂಗಳ ಹಿಂದೆ 3 ಸಾವಿರ ರೂ. ಬೆಲೆಯಿದ್ದ ಎಲೆಯ ದರ 6 ಸಾವಿರ ಎಲೆಗಳಿರುವ ಕಪ್ಪು ಎಲೆಗಳ ಒಂದು ಬಂಡ‌ಲ್ಗೆ 6 ಸಾವಿರ ರೂಪಾಯಿ ಆಗಿ ಬಿಟ್ಟಿದೆ.

ತಿಂಗಳ ಹಿಂದೆ 3 ಸಾವಿರ ರೂ. ಬೆಲೆಯಿದ್ದ ಎಲೆಯ ದರ 6 ಸಾವಿರ ಎಲೆಗಳಿರುವ ಕಪ್ಪು ಎಲೆಗಳ ಒಂದು ಬಂಡ‌ಲ್ಗೆ 6 ಸಾವಿರ ರೂ. ಏರಿಕೆ ಆಗಿದೆ. ಇದರಿಂದ ಗ್ರಾಹಕರು ಮಾರುಕಟ್ಟೆಯಲ್ಲಿ ನೂರು ಕಪ್ಪು ಎಲೆಯ ಒಂದು ಕಟ್ಟಿಗೆ 60 ರೂ. ಇದ್ದು, ವೀಳ್ಯದೆಲೆ ನೂರರ ಕಟ್ಗೆ 40 ರೂ. ಆಗಿದ್ದು, ಮೊದಲಿಗಿಂತ ಎರಡು ಎಲೆಗಳ ನೂರರ ಕಟ್ ಬೆಲೆ 20-30 ರೂ. ಏರಿಕೆ ಕಂಡಂತಾಗಿದೆ.

 

ಇದನ್ನು ಓದಿ: Death news: ಹಣೆಯಲ್ಲಿ ಬಿಂದಿ ಇಟ್ಟುಕೊಂಡು ಬಂದ ವಿದ್ಯಾರ್ಥಿನಿಗೆ ಶಿಕ್ಷಕಿಯಿಂದ ಹೊಡೆತ; ನೇಣಿಗೆ ಶರಣಾದ ವಿದ್ಯಾರ್ಥಿನಿ 

Leave A Reply

Your email address will not be published.