Bihar Police: ರೈತರ ಮೇಲೆ ಪೊಲೀಸರ ಲಾಠಿ ಚಾರ್ಜ್‌! ಬೆನ್ನಟ್ಟಿ ಥಳಿಸಿದ ಖಾಕಿ ಪಡೆ

Latest news Bihar Police Patna news Police lathi charge on the farmers

Bihar Police:  ಬುಧವಾರ ಬಿಹಾರದ ರಾಜಧಾನಿ (Bihar Police) ಪಾಟ್ನಾದಲ್ಲಿ ಆರ್‌ ಬ್ಲಾಕ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಲಹೆಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಬೆನ್ನಟ್ಟಿ ಪೊಲೀಸರು ಥಳಿಸಿರುವ ಬಗ್ಗೆ ವರದಿಯಾಗಿದೆ. ಈ ಎಲ್ಲಾ ರೈತರು ಸಾರ್ವಜನಿಕ ಸೇವಕ ಹುದ್ದೆಯ ಬೇಡಿಕೆಗೆ ಸಂಬಂಧಿಸಿದ ಕುರಿತು ಪ್ರತಿಭಟನೆ ನಡೆಸುತ್ತಿದ್ದರು. ಹಾಗಾಗಿ ಪೊಲೀಸರು ಇವರನ್ನು ಹಿಂತಿರುಗುವಂತೆ ಕೇಳಿಕೊಂಡಿದ್ದಾರೆ. ಆದರೆ ಪ್ರತಿಭಟನಾಕಾರರು ಒಪ್ಪದಿರುವುದರಿಂದ ಅವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.

ರೈತರ ಪ್ರಕಾರ ಕಳೆದ 13ವರ್ಷಗಳಿಂದ ಬಿಹಾರ ಸರಕಾರ ನಮಗೆ ಮೋಸ ಮಾಡುತ್ತಿದೆ. ನಮಗೆ ಸಾರ್ವಜನಿಕ ಸೇವಕರ ಸ್ಥಾನಮಾನ ನೀಡಬೇಕು. ನಮ್ಮ ಬೇಡಿಕೆಗೆ ಸಂಬಂಧಿಸಿದಂತೆ ನಾವು ವಿಧಾನಸಭೆಗೆ ಘೇರಾವ್‌ ಹಾಕಿದ್ದೇವೆ ಎಂದು ಅವರು ಹೇಳಿದ್ದಾರೆ.

ಜನರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನಿತೀಶ್ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈ ಹಿಂದೆ ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೂ ಸರಕಾರ ಗಮನಹರಿಸಿಲ್ಲ ಎಂದು ಹೇಳಿದ್ದಾರೆ.

ಧರಣಿ ನಿರತ ರೈತ ಸಲಹೆಗಾರರ ​​ಮುಖಂಡ ಜಸ್ವಂತ್ ಕುಮಾರ್ ಮಾತನಾಡಿ, ನಮ್ಮ ಎಲ್ಲ ಬೇಡಿಕೆಗಳು ನ್ಯಾಯಯುತವಾಗಿವೆ. ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಇಲ್ಲಿಯವರೆಗೂ ಜನಸೇವಕ ಸ್ಥಾನಮಾನ ನೀಡಿಲ್ಲ. ಬಿಹಾರದ ರೈತ ಬಂಧುಗಳೂ ನಮ್ಮ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಬಿಹಾರ ಪ್ರದೇಶ ಕಿಸಾನ್ ಸಲಹಕಾರ್ ಸಂಘದ ಅಧ್ಯಕ್ಷ ರಾಜಾ ರಾಮ್ ಸಿಂಗ್ ಮಾತನಾಡಿ, ಸರ್ಕಾರಿ ನೌಕರನ ಸ್ಥಾನಮಾನಕ್ಕಾಗಿ ನಾವು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದೇವೆ, ಆದರೆ ಇಲಾಖೆ ಇದಕ್ಕೆ ಕಿವಿಗೊಡುತ್ತಿಲ್ಲ ಮತ್ತು ಯಾವುದೇ ರೀತಿಯ ಭರವಸೆಯನ್ನು ಸಹ ನೀಡುತ್ತಿಲ್ಲ. ಸರಕಾರ ನಮ್ಮ ಬೇಡಿಕೆಗೆ ಮನ್ನಣೆ ನೀಡದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

 

ಇದನ್ನು ಓದಿ: ಸುಳ್ಯ: ಶಿಕಾರಿ ಮಾಡಿ ಅಡುಗೆಗೆ ಸಿದ್ದವಾಗಿದ್ದ ಮನೆಗಳಿಗೆ ಅರಣ್ಯಾಧಿಕಾರಿಗಳ ದಾಳಿ : ಆರೋಪಿಗಳು ಪರಾರಿ, ಮಾಂಸ ವಶಕ್ಕೆ 

Leave A Reply

Your email address will not be published.