Madhya Pradesh: ಮಾವಿನ ಹಣ್ಣು ತಿಂದ ನಂತರ ಸಾವನ್ನಪ್ಪಿದ ಮಹಿಳೆ!

Latest news death news woman died mysteriously in Madhya Pradesh

Madhya Pradesh: ಮಧ್ಯಪ್ರದೇಶದಲ್ಲಿ ರಾಜೇಂದ್ರನಗರ ಪ್ರದೇಶದಲ್ಲಿ 23 ವರ್ಷದ ಮಹಿಳೆಯೊಬ್ಬರು ನಿಗೂಢವಾಗಿ ಸಾವಿಗೀಡಾದ ಘಟನೆ ವರದಿಯಾಗಿದೆ. ಮಾವಿನ ಹಣ್ಣನ್ನು ಸೇವಿಸಿದ ಬಳಿಕ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ, ಮಹಿಳೆಯ ಕುಟುಂಬಸ್ಥರು ಆಕೆಯನ್ನು ಜುಲೈ 8 ರಂದು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಮಹಿಳೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರನ್ನು ನಗರದ ಬಿಜಾಲ್‌ಪುರ ನಿವಾಸಿ ಅರ್ಚನಾ ಅಲೆರಿಯಾ ಎಂದು ಗುರುತಿಸಲಾಗಿದೆ.

ಮಹಿಳೆ ಮಧ್ಯಾಹ್ನದ ಊಟದ ಮಾಡಿದ ಬಳಿಕ ಮಾವಿನ ಹಣ್ಣನ್ನು ಸೇವಿಸಿದ್ದಾರೆ ಎನ್ನಲಾಗಿದೆ. ಆ ಬಳಿಕ ಆರೋಗ್ಯ ಹದಗೆಟ್ಟಿದ್ದು, ಕೂಡಲೇ ಮನೆಯವರು ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಕೆಲವು ಔಷಧಿಗಳನ್ನು ಬರೆದುಕೊತ್ತಿದ್ದಾರೆ. ಆದರೆ, ಕೆಲವೇ ಹೊತ್ತಿನಲ್ಲಿ ಮಹಿಳೆಗೆ ತಲೆ ತಿರುಗುವ ಅನುಭವ ಉಂಟಾದ ಹಿನ್ನೆಲೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ,ಮಹಿಳೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.

ಈ ನಡುವೆ, ಮಹಿಳೆಯ ಕುಟುಂಬಸ್ಥರು ವಿಷಕಾರಿ ಮಾವಿನ ಹಣ್ಣನ್ನು ಸೇವಿಸಿದ ಪರಿಣಾಮ ಆರೋಗ್ಯ ಹದಗೆಟ್ಟಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ, ಮಹಿಳೆಯ ಸಾವಿಗೆ ನೈಜ ಕಾರಣವೇನು ಎಂಬುದನ್ನು ತಿಳಿಯಲು ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಶವ ಪರಿಕ್ಷಾ ವರದಿಗಾಗಿ ಪೋಲಿಸರು ಎದುರು ನೋಡುತ್ತಿದ್ದಾರೆ.

 

ಇದನ್ನು ಓದಿ: Anna bhagya scheme: ಅನ್ನಭಾಗ್ಯ ಯೋಜನೆಯ ಬಗ್ಗೆ ಬಂದಿದೆ ಬಿಗ್ ಅಪ್ಡೇಟ್! ಈ ದಿನದೊಳಗೆ ಈ ಕೆಲಸ ಮಾಡದಿದ್ದರೆ ಹಣ ಸಿಗಲ್ಲ!!! 

Leave A Reply

Your email address will not be published.