Anna bhagya scheme: ಅನ್ನಭಾಗ್ಯ ಯೋಜನೆಯ ಬಗ್ಗೆ ಬಂದಿದೆ ಬಿಗ್ ಅಪ್ಡೇಟ್! ಈ ದಿನದೊಳಗೆ ಈ ಕೆಲಸ ಮಾಡದಿದ್ದರೆ ಹಣ ಸಿಗಲ್ಲ!!!

Latest news political news Big update about Anna bhagya scheme

Anna bhagya scheme: ಬಡವರು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರಕಾರದಿಂದ ಪಡಿತರ ಚೀಟಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಅನ್ನಭಾಗ್ಯ (Anna bhagya scheme)ಯೋಜನೆಯಡಿಯಲ್ಲಿ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 5 ಕೆಜಿಯ ಹಾಗೆ ಆಹಾರಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ. ಆದರೆ, ಈ ಪಡಿತರ ವಿತರಣೆಯ ಪ್ರಯೋಜನ ಪಡೆಯಲು ಚೀಟಿದಾರರು ಕೆಲವೊಂದು ಕೆಲಸಗಳನ್ನು ತುರ್ತಾಗಿ ಮಾಡಲೇಬೇಕಾಗುತ್ತದೆ.

ಇದರ ಜೊತೆಗೆ 5 ಕೆಜಿ ಅಕ್ಕಿಯ ಬದಲಿಗೆ ಕೆಜಿಗೆ 34 ರೂಪಾಯಿಯ ಹಾಗೆ ಕುಟುಂಬದ ಸದಸ್ಯರೊಬ್ಬರಿಗೆ 170 ರೂ. ಯಂತೆ ಸರ್ಕಾರ ಈಗಾಗಲೇ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಆದರೆ, ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು 64,717 ಪಡಿತರದಾರರ ಬ್ಯಾಂಕ್ ಖಾತೆ ನಿಷ್ಕ್ರೀಯವಾಗಿರುವ ಹಿನ್ನೆಲೆ ಈ ಅನ್ನಭಾಗ್ಯ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವುದು ಕಷ್ಟವಾಗಿದೆ. ಬ್ಯಾಂಕ್ ಖಾತೆ ಸಕ್ರಿಯಗೊಳಿಸಲು ಜುಲೈ 15ರವರೆಗೆ ಗಡುವು ನೀಡಿರುವ ಹಿನ್ನೆಲೆ ಪಡಿತರದಾರರು ಈ ಗಡುವನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.

ಇಲ್ಲಿನ ಹೆಚ್ಚಿನ ಮಂದಿ ಪ್ರಧಾನಮಂತ್ರಿ ಜನಧನ ಯೋಜನೆಯ ಲಾಭ ಪಡೆಯಲು ಖಾತೆ ತೆರೆದಿದ್ದಾರೆ. ಆದರೆ ಒಂದು ಬ್ಯಾಂಕ್ ಖಾತೆ ಎರಡು ವರ್ಷಗಳಿಗಿಂತ ಹೆಚ್ಚು ಅವಧಿಗೆ ಬಳಕೆಯಲ್ಲಿ ಇರದಿದ್ದರೆ ಬ್ಯಾಂಕ್ ಖಾತೆಗಳನ್ನು ನಿಷ್ಕ್ರೀಯವಾಗುವ ವಿಚಾರ ಜನರಿಗೆ ತಿಳಿಯದ ಹಿನ್ನೆಲೆ ಆರ್ಬಿಐ ನಿಯಮದ ಅನುಸಾರ ಕಲಬುರಗಿ ಜಿಲ್ಲೆಯ 64,717 ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿವೆ.

ಸರಕಾರದ ಅನ್ನಭಾಗ್ಯ ಯೋಜನೆ ಲಾಭ ಪಡೆಯಲು ಇದೇ ಜುಲೈ 15 ರೊಳಗೆ ಬ್ಯಾಂಕ್ ಖಾತೆ ಸಕ್ರಿಯಗೊಳಿಸಿ ಕಡ್ಡಾಯವಾಗಿ ಆಧಾರ ಕಾರ್ಡ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆಗೆ (ಇ-ಕೆವೈಸಿ) ಮಾಡುವುದು ಅನಿವಾರ್ಯವಾಗಿದೆ. ಅಷ್ಟೇ ಅಲ್ಲದೇ, ಪಡಿತರ ಚೀಟಿದಾರರು ಆಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆಯ ಲಾಭ ಪಡೆದುಕೊಳ್ಳಲು ಜುಲೈ ತಿಂಗಳ 20ರೊಳಗಾಗಿ ತಮ್ಮ ಸಕ್ರಿಯ ಬ್ಯಾಂಕ್ ಖಾತೆಯ ಮಾಹಿತಿಯನ್ನು ಹತ್ತಿರದ ತಹಸೀಲ್ದಾರ್ ಕಚೇರಿ ಅಥವಾ ಸಹಾಯಕ ನಿರ್ದೇಶಕರ ಕಚೇರಿಗೆ ಅಥವಾ ನ್ಯಾಯಬೆಲೆ ಅಂಗಡಿಗೆ ನೀಡಬೇಕಾಗುತ್ತದೆ.

ಕಲಬುರಗಿ ಜಿಲ್ಲೆಯಲ್ಲಿ ಡಿಬಿಟಿ (DBT) (ನೇರ ನಗದು ವರ್ಗಾವಣೆ) ವಂಚಿತ ಕಾರ್ಡುದಾರರು ಬ್ಯಾಂಕ್ ಖಾತೆಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಡಿಬಿಟಿ (DBT) ವಂಚಿತ ಪಡಿತರ ಚೀಟಿದಾರರು ಈ ವಿಧಾನ ಅನುಸರಿಸಿ:

Not valid Aadhar No (ನಾಟ್ ವ್ಯಾಲಿಡ್ ಆಧಾರ್ ನಂಬರ್) : ಫಲಾನುಭವಿಗಳು ಕಡ್ಡಾಯವಾಗಿ ಅವರ ನಿಖರವಾದ ಆಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಬೇಕು.

In Active case (ಇನ್ ಆಕ್ಟಿವ್ ಕೇಸ್) : ಫಲಾನುಭವಿಗಳು ಕಡ್ಡಾಯವಾಗಿ ಆಧಾರ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆಗೆ (ಇ-ಕೆವೈಸಿ) (EKYC ) ಮಾಡಿಸಬೇಕಾಗುತ್ತದೆ.
Not available in DB (ನಾಟ್ ಅವೈಲೇಬಲ್ ಇನ್ ಡಿಬಿ) : ಫಲಾನುಭವಿಗಳು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಇಲ್ಲವೇ ಫಲಾನುಭವಿಗಳು ಅಂಚೆ ಕಚೇರಿಯಲ್ಲಿ ಹೊಸ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗುತ್ತದೆ.

ಈ ಡಿಬಿಟಿ (DBT) ವಂಚಿತ ಫಲಾನುಭವಿಗಳ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿವಾರು ಈಗಾಗಲೇ ನೀಡಲಾಗಿದ್ದು, ಪಡಿತರ ಚೀಟಿದಾರರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ಬೇಟಿ ನೀಡಿ ಮೇಲ್ಕಂಡ ಸಮಸ್ಯೆಗಳು ಕಂಡುಬಂದರೆ ಜುಲೈ 15 ರೊಳಗಾಗಿ ಬ್ಯಾಂಕ್ ಖಾತೆಯನ್ನು ಸರಿಪಡಿಕೊಳ್ಳಬೇಕು . ಇಲ್ಲದೇ ಇದ್ದರೆ, ಈ ಯೋಜನೆಯ ಪ್ರಯೋಜನ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು.

 

ಇದನ್ನು ಓದಿ: Bihar Police: ರೈತರ ಮೇಲೆ ಪೊಲೀಸರ ಲಾಠಿ ಚಾರ್ಜ್‌! ಬೆನ್ನಟ್ಟಿ ಥಳಿಸಿದ ಖಾಕಿ ಪಡೆ 

Leave A Reply

Your email address will not be published.