Jyoti Maurya Case: ಕಷ್ಟಪಟ್ಟು ಕಲಿಸಿದ ಗಂಡನಿಗೆ ದ್ರೋಹ ಮಾಡಿದ ಹೆಂಡತಿ; ಜ್ಯೋತಿ ಮೌರ್ಯ ಬಾಯ್ ಫ್ರೆಂಡ್ ಗೆ ಆಘಾತಕಾರಿ ಸುದ್ದಿ!!!

Latest news Sub-Divisional Magistrate Jyoti Maurya Case of illegal relationship

Jyoti Maurya Case: ಪ್ರೀತಿ ಕುರುಡು ಎಂಬಂತೆ ಪ್ರೀತಿಸಿ ಮದುವೆಯಾದ ಗಂಡನಿಗೆ ಕೈ ಕೊಟ್ಟು ಇನ್ನೊಬ್ಬನ ಜೊತೆಗೆ ತಿರುಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿದು ಪತ್ನಿಯನ್ನು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮಾಡಿದ ಪತಿಗೆ ದೊಡ್ಡ ನಾಮ ಹಾಕಿ ಮತ್ತೊಬ್ಬನ ಜೊತೆಗೆ ಲವ್ವಿ ಡವ್ವಿಯಲ್ಲಿ ಮುಳುಗಿರುವ ಪತ್ನಿಯ ವಿರುದ್ಧ ದಾಂಪತ್ಯ ದ್ರೋಹ ಆರೋಪ ಮಾಡಿದ್ದ ಪ್ರಕರಣ ಇತ್ತೀಚೆಗೆ ಎಲ್ಲೆಡೆ ಚರ್ಚೆಗೆ ಕಾರಣವಾಗಿತ್ತು. ಇದೀಗ, ಈ ಪ್ರಕರಣ ರೋಚಕ ತಿರುವು ಪಡೆಯುತ್ತಿದೆ.

ಕಳೆದ ಕೆಲವು ದಿನಗಳಿಂದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಜ್ಯೋತಿ ಮೌರ್ಯ (Jyoti Maurya Case) ಪ್ರಕರಣ ಎಲ್ಲೆಡೆ ಚರ್ಚೆಗೆ ಕಾರಣವಾಗಿತ್ತು. ತನ್ನ ಗಂಡನ ದುಡಿಮೆಯಲ್ಲಿ ಎಸ್ಡಿಎಂ ಆದ ಬಳಿಕ ತನ್ನೊಂದಿಗೆ ದೂರವಾಗಿ ಅಧಿಕಾರಿಯೊಬ್ಬರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು, ಹೀಗಾಗಿ, ಜ್ಯೋತಿ ಮೌರ್ಯ ವಿರುದ್ಧ ಅವರ ಪತಿ ಅಲೋಕ್ ಮೌರ್ಯ ಗಂಭೀರ ಆರೋಪ ಮಾಡಿದ್ದರು.ಈಗ ಜ್ಯೋತಿ ಮೌರ್ಯ ಅವರ ಹೊಸ ಬಾಯ್ ಫ್ರೆಂಡ್ ಮನೀಶ್ ದುಬೆ ಅವರ ನೌಕರಿಗೆ ಕತ್ತರಿ ಬೀಳುವ ಲಕ್ಷಣಗಳು ದಟ್ಟವಾಗಿದೆ.

2010ರಲ್ಲಿ ಮದುವೆ ಆಗಿದ್ದ ಜ್ಯೋತಿ ಮೌರ್ಯ ಮತ್ತು ಅಲೋಕ್ ಮದುವೆಯಾದ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ 4ನೇ ವರ್ಗದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರಂತೆ. ಈ ನಡುವೆ ಮಡದಿಯ ಓದುವ ಬಯಕೆಗೆ ಅಡ್ಡಿಯಾಗಬಾರದೆಂದು ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣಕ್ಕೆ ಉತ್ತೇಜನ ನೀಡಿದರು. ಪತಿಯ ಶ್ರಮದ ಫಲವಾಗಿ 2016ರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಮಡದಿ ಯಶಸ್ಸಿನ ಮೆಟ್ಟಿಲು ಹತ್ತುತ್ತಿದಂತೆ ಅಲೋಕ್ ಕುಮಾರ್ ಗೆ ಕೈ ಕೊಟ್ಟು ಮತ್ತೊಬ್ಬನ ಜೊತೆಗೆ ತಿರುಗಲು ಆರಂಭಿಸಿದ್ದಾರೆ.

ಇದರ ಜೊತೆಗೆ 2023ರ ಮೇ 7ರಂದು ತನ್ನ ಮಾವ ಮತ್ತು ಗಂಡನ ವಿರುದ್ಧ ಜ್ಯೋತಿ ಮೌರ್ಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಇದು ಸಾಲದೆಂಬಂತೆ ಜ್ಯೋತಿ ಫಾರ್ಚೂನರ್ ಕಾರು ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಕುರಿತು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಹೀಗಾಗಿ, ಗಂಡನನ್ನು ಜೈಲಿಗೆ ಕಳುಹಿಸಿದ್ದು, ಇದೀಗ ಅಲೋಕ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಮಡದಿಯ ದೂರಿನ ಪರಿಣಾಮ ಇದ್ದ ಕೆಲಸವನ್ನು ಕಳೆದುಕೊಂಡ ಅಲೋಕ್ ಸಂಕಷ್ಟದಲ್ಲಿದ್ದಾರೆ. ಇದೀಗ, ಜ್ಯೋತಿಯವರು ಗಂಡನಿಂದ ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಮನೀಶ್ ಜತೆ ಜ್ಯೋತಿ ಮೌರ್ಯ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆಕೆಯ ಪತಿ ಅಲೋಕ್ ಮೌರ್ಯ ಆರೋಪಿಸಿದ ಬಳಿಕ ಮನೀಶ್ ಅವರ ಹೆಸರು ಬೆಳಕಿಗೆ ಬಂದಿದೆ.ಆ ಬಳಿಕ ಜ್ಯೋತಿ ಮೌರ್ಯ ಜತೆ ಮನೀಶ್ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮನೀಶ್ ಮತ್ತು ಜ್ಯೋತಿ ನಡುವೆ ಸಂಬಂಧವಿದೆ ಎಂಬುದನ್ನು ನಿರೂಪಿಸುವ ವಾಟ್ಸ್ಆಯಪ್ ಚಾಟ್ ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿತ್ತು. ಇದರ ಜೊತೆಗೆ ಇಬ್ಬರು ಜೊತೆಗೆ ಸರಸ ಸಲ್ಲಾಪದಲ್ಲಿ ಭಾಗಿಯಾಗಿ ಅಲೋಕ್ ಮೌರ್ಯ ಅವರ ಮುಂದೆಯೇ ಸಿಕ್ಕಿ ಬಿದ್ದಿದ್ದರಂತೆ. ಈ ನಡುವೆ ತನ್ನ ಮೊಬೈಲ್ ಅನ್ನು ಗಂಡ ಹ್ಯಾಕ್ ಮಾಡಿದ್ದಾನೆ ಎಂದು ಆರೋಪಿಸಿ ಜ್ಯೋತಿ, ದಾಂಪತ್ಯ ದ್ರೋಹದ ಕುರಿತು ಸುಳ್ಳು ಸಾಕ್ಷಿಗಳನ್ನು ರಚಿಸಿದ್ದಾರೆ ಎಂದು ಗಂಡನ ಮೇಲೆ ಆರೋಪ ಮಾಡಿದ್ದಾರೆ.

ಮನೀಶ್ ದುಬೆ ಘಾಜಿಯಬಾದ್ ಜಿಲ್ಲೆಯ ಹೋಮ್ಗಾರ್ಡ್ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದಾರೆ. ಅಲೋಕ್ ಮೌರ್ಯ ಅವರು ಮಾಡಿದ ಆರೋಪದ ಅನುಸಾರ ಮನೀಶ್ ದುಬೆ ವಿರುದ್ಧ ವಿಭಾಗೀಯ ತನಿಖೆ ನಡೆದಿದ್ದು, ಈ ವೇಳೆ ದುಬೆ ಮೇಲೆ ಮಾಡಿದ ಆರೋಪ ಸಾಬೀತಾಗಿದ್ದು, ವಿಭಾಗದ ಕೆಲ್ಸಕ್ಕೆ ಕಳಂಕತಂದಿರುವ ಹಿನ್ನೆಲೆಯಲ್ಲಿ ಮನೀಶ್ ದುಬೆ ಅವರನ್ನು ಹುದ್ದೆಯಿಂದ ಅಮಾನತು ಮಾಡಲು ತನಿಖಾಧಿಕಾರಿಗಳು ಶಿಫಾರಸು ಮಾಡಿದ್ದಾರೆಂದು ತಿಳಿದುಬಂದಿದೆ.

ಈ ಪ್ರಕರಣದ ಕುರಿತಾಗಿ ವಿಭಾಗೀಯ ಮಟ್ಟದಲ್ಲಿ ತನಿಖೆ ಶುರುವಾಗಿದ್ದು, ಹೋಮ್ಗಾರ್ಡ್ ಡಿಐಜಿ ಸಂತೋಷ್ ಸಿಂಗ್ ತನಿಖಾ ವರದಿಯನ್ನು ಹೋಮ್ಗಾರ್ಡ್ ಡಿಜಿ ಬಿಕೆ ಮೌರ್ಯ ಅವರಿಗೆ ಸಲ್ಲಿಸಿದ್ದು, ಜ್ಯೋತಿ ಮೌರ್ಯ ಅವರ ಜೊತೆಗೆ ದುಬೆ ಸಂಬಂಧ ಹೊಂದಿದ್ದಾರೆ ಎಂಬುದು ಬಹಿರಂಗವಾಗಿದೆ. ಇದರಿಂದ ವಿಭಾಗಕ್ಕೂ ಕಳಂಕ ತಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದ್ದು, ಅಮಾನತಿ ಶಿಫಾರಸು ಮಾಡಲಾಗಿದೆ.

 

ಇದನ್ನು ಓದಿ: Betel Leaves Rate: ಅತ್ತ ಕಡೆ ತರಕಾರಿ ಬೆಲೆ ಗಗನದತ್ತ ಮುಖ ಮಾಡಿದರೆ, ವೀಳ್ಯದೆಲೆ ಬೆಲೆ ಕೂಡಾ ಏರಿಕೆ! ಕಂಗಾಲಾದ ಗ್ರಾಹಕ 

Leave A Reply

Your email address will not be published.