Shradha Walker: ದೆಹಲಿಯಲ್ಲಿ ಮತ್ತೊಂದು ಪೀಸ್ ಪೀಸ್ ಪ್ರಕರಣ; ಮಹಿಳೆಯ ದೇಹದ ತುಂಡು ಎಲ್ಲೆಂದರಲ್ಲಿ ಪತ್ತೆ!!!

Latest news police have started an investigation the body parts of the woman were found

Shradha Walker: ದೆಹಲಿಯಲ್ಲಿ ಅತ್ಯಂತ ಭೀಕರವಾಗಿ ಕೊಲೆಯಾದ ಶ್ರದ್ಧಾ ಕೊಲೆ ಪ್ರಕರಣ ಜನರ ನೆನಪಿನಿಂದ ಮರೆಯಾಗಿಲ್ಲ. ಆದರೆ ಇದೇ ಘಟನೆಯನ್ನು ಹೋಲುವಂತಹ ಇನ್ನೊಂದು ಪ್ರಕರಣ ದೆಹಲಿಯಲ್ಲಿ ಮತ್ತೆ ಮರುಕಳಿಸಿದೆ. ರಾಜಧಾನಿ ದೆಹಲಿಯ ಗೀಯಾ ಕಾಲೋನಿ ಪೊಲೀಸ್‌ ಠಾಣೆ ವ್ಯಾಪ್ತಿಯ ಫ್ಲೈ ಓವರ್‌ ಬಳಿ ಮಹಿಳೆಯ ಶವದ ತುಂಡುಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ.

ಪ್ರಾಥಮಿಕ ತನಿಖೆಯನ್ನು ಮಹಿಳೆಯ ವಯಸ್ಸು 35ರಿಂದ 40 ಇರಬಹುದು ಎಂದು ತಿಳಿದು ಬಂದಿದೆ. ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಆದರೆ ಶವದ ಗುರುತು ಇನ್ನೂ ಪತ್ತೆಯಾಗಿಲ್ಲ. ಶವದ ಹಲವಾರು ತುಣುಕುಗಳು ಫ್ಲೈ ಓವರ್‌ ಬಿದ್ದಿದೆ ಎಂದು ಬೆಳಿಗ್ಗೆ 9.15 ಕ್ಕೆ ಪೊಲೀಸರಿಗೆ ಮಾಹಿತಿಯೊಂದು ದೊರಕಿತ್ತು. ಅದರ ಮೂಲಕ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಈ ಸಾವಿನ ಬಗ್ಗೆ ಹಲವರು ಪೊಲೀಸರ ತನಿಖೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದು, ಶೀಘ್ರದಲ್ಲೇ ಇದಕ್ಕೆ ಉತ್ತರ ದೊರೆಯಲಿದ್ದು, ಪೊಲೀಸರ ತನಿಖೆ ಶೀಘ್ರ ಗತಿಯಲ್ಲಿ ಮುಂದುವರಿದಿದೆ.

 

ಇದನ್ನು ಓದಿ: Niharika Konidela: ಮೆಗಾಸ್ಟಾರ್‌ ಕುಟುಂಬದಲ್ಲಿ ಮುಂದುವರಿದ ವಿಚ್ಛೇದನ ಪ್ರಕ್ರಿಯೆ! ನಿಹಾರಿಕಾ ವಿಚ್ಛೇದನಕ್ಕೆ ಮುಖ್ಯ ಕಾರಣ ಏನೆಂದು ಹೇಳಿದ ಮಾವ! 

Leave A Reply

Your email address will not be published.