Suicide Case: ಹೆಂಡ್ತಿಯಿಂದ ಭಯಂಕರ ಕಿರುಕುಳ ಆರೋಪ; ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಗಂಡ

Suicide Case Husband commits suicide by making video of wife harassment

Suicide Case: ಹಾಸನ: ಇತ್ತೀಚಿನ ದಿನಗಳಲ್ಲಿ ಒತ್ತಡ, ಕಿರಿಕಿರಿ, ವೈಯಕ್ತಿಕ ಸಮಸ್ಯೆಯಿಂದ ಮಾನಸಿಕವಾಗಿ ಕುಗ್ಗಿ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ತನ್ನ ಮಡದಿ ಮತ್ತು ಪೋಷಕರ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು ವಿಷ ಸೇವಿಸಿ ವಿಡಿಯೋ ಮಾಡಿ ಆತ್ಮಹತ್ಯೆ (suicide case) ಮಾಡಿಕೊಂಡ ಘಟನೆ ನಡೆದಿದೆ.

ಈ ಘಟನೆ ಹಾಸನ ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಮೃತಪಟ್ಟ ವ್ಯಕ್ತಿಯನ್ನು ವಿನಯ್ (40) ಎಂದು ಗುರುತಿಸಲಾಗಿದೆ. ವಿಷ ಸೇವಿಸುವ ಮೊದಲು ವಿನಯ್‌ ಸೆಲ್ಫಿ ತೆಗೆಯುತ್ತಾ ವಿಡಿಯೋ‌ ಮಾಡಿಕೊಂಡಿದ್ದು, ಪತ್ನಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಜುಲೈ 9ರಂದು ವಿನಯ್‌ ವಿಷ ಸೇವಿಸಿದ್ದು, ತನ್ನ ಸಾವಿಗೆ ಪತ್ನಿ ಆಶಾ ಅತ್ತೆ ರತ್ನಮ್ಮ, ಆಶಾ ಅಕ್ಕ ಉಷಾ ಹಾಗೂ ಅವರು ಕುಟುಂಬದವರೇ ಕಾರಣವೆಂದು ದೂಷಿಸಿದ್ದಾರೆ. ಮನೆಯವರ ಮಾನಸಿಕವಾಗಿ ಚಿತ್ರಹಿಂಸೆಯಿಂದಲೇ ತಾನು ಸಾವನ್ನಪ್ಪಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಇಲ್ಲಿಯವರೆಗೆ ಎಲ್ಲ ಕಿರುಕುಳವನ್ನು ತಾನು ಸಹಿಸಿಕೊಂಡು ಬಂದಿದ್ದೇನೆ. ಆದರೂ ಅವರು ಬದಲಾಗಿಲ್ಲ. ನನ್ನ ಪತ್ನಿ ಆಶಾ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಮನನೊಂದು ವಿಷ ಸೇವಿಸುತ್ತಿದ್ದೇನೆ. ಅಕ್ಕ, ಅಮ್ಮ, ಬಾವ, ತಮ್ಮ, ನಾದಿನಿ ನನ್ನನ್ನು ಕ್ಷಮಿಸಿಬಿಡಿ ಎಂದು ಮನವಿ ಮಾಡಿದ್ದಾರೆ. ಆಶಾ ಅವರ ಪೋಷಕರಿಗೆ ತಕ್ಕ ಶಿಕ್ಷೆಯಾಗಬೇಕುʼʼ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ವಿಷ ಸೇವಿಸಿದ ಬಳಿಕ ವಿನಯ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವಿನಯ್ ಅವರು ಇಂದು ಮೃತಪಟ್ಟಿದ್ದಾರೆ. ಸದ್ಯ , ಈ ಪ್ರಕರಣದ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave A Reply

Your email address will not be published.