ಗೂಗಲ್ ಪೇ ಬಳಕೆಗೆ ಹೊಸ ಮಾರ್ಗ; ಡೆಬಿಟ್ ಕಾರ್ಡ್ ಇಲ್ಲದೆಯೂ ನಿಮ್ಮ ಕೆಲಸ ಸುಲಭಗೊಳಿಸಿ!!!

latest news Change UPI PIN without debit card Google Pay

Change UPI PIN without debit card Google Pay: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಎಲ್ಲ ವಹಿವಾಟು ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿಯೆ ಮೊಬೈಲ್ ಎಂಬ ಮಾಯಾವಿ ಮೂಲಕ ಮಾಡಿಕೊಳ್ಳಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ.

ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ನೀವು ಗೂಗಲ್‌ ಪೇ, ಫೋನ್‌ ಪೇ ಬಳಕೆಗೆ ಡೆಬಿಟ್‌ ಕಾರ್ಡ್‌, ಎಟಿಎಂ ಅತ್ಯಗತ್ಯವಾಗಿ ಬೇಕಾಗಿದೆ. ಕೇವಲ ಆಧಾರ್ ಕಾರ್ಡ್ ಒಂದಿದ್ದರೆ ಸಾಕು! ಇನ್ನು ಮುಂದೆ ಗೂಗಲ್‌ ಪೇ ಮೂಲಕ ಡಿಜಿಟಲ್‌ ಪೇಮೆಂಟ್‌ ಮಾಡಬಹುದು. ಹೌದು!! ಈ ರೀತಿಯ ಹೊಸ ಫೀಚರ್ ಅನ್ನು ಗೂಗಲ್ ಪೇ ಸಕ್ರಿಯಗೊಳಿಸಿದೆ.

ಗೂಗಲ್‌ ಪೇ ಅಪ್ಲಿಕೇಶನ್‌ನಲ್ಲಿ ಈಗ ಆಧಾರ್‌ ನಂಬರ್‌ ಮೂಲಕ ಸೈನ್‌ ಇನ್‌ ಆಗಲು ಅವಕಾಶ ಕಲ್ಪಿಸಲಾಗಿದೆ. ನ್ಯಾಷನಲ್ ಪೇಮೆಂಟ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಮೂಲಕ ಈ ಪ್ರಕ್ರಿಯೆ ನಡೆಸಲು ಸಾಧ್ಯವಾಗಿದೆ. ಗೂಗಲ್‌ ಪೇ ಮೂಲಕ ನೀವು ಸುಲಭವಾಗಿ ಹಣ ವರ್ಗಾವಣೆ, ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳ ಹಾಗೂ ಸುಲಭವಾಗಿ ಮಾಡಬಹುದು. ಡೆಬಿಟ್ ಕಾರ್ಡ್‌ ಸಹಾಯವಿಲ್ಲದೆಯೆ ಯುಪಿಐ ಖಾತೆಯನ್ನು ಬದಲಾವಣೆ ಮಾಡಲು, ಯುಪಿಐ ಖಾತೆಯನ್ನು ಕ್ರಿಯೇಟ್‌ ಮಾಡಿ ಆಕ್ಟಿವೇಟ್‌ ಮಾಡುವ ಸೌಲಭ್ಯವನ್ನು ಗೂಗಲ್ ಪೇ ಈಗ ಸಕ್ರಿಯಗೊಳಿಸಿದೆ. ಈ ಫೀಚರ್‌ ಈಗ ಬ್ಯಾಂಕ್‌ ಖಾತೆ ಹೊಂದಿರುವವರಿಗೆ ಮಾತ್ರ ದೊರೆಯುತ್ತಿರುವ ಕುರಿತು ಗೂಗಲ್ ಮಾಹಿತಿ ನೀಡಿದೆ.

ಈಗಾಗಲೇ ಹೇಳಿರುವಂತೆ, ಡೆಬಿಟ್‌ ಕಾರ್ಡ್‌ ಇಲ್ಲದೇ ಗೂಗಲ್‌ ಪೇ ಬಳಸಲು, ಸೈನಪ್‌ ಆಗುವ ಮಾದರಿಯನ್ನು ಪರಿಚಯಿಸಲಾಗಿದೆ. ಈ ಪ್ರಯೋಜನವನ್ನು ಪಡೆಯಲು ಮೊದಲು ಬಳಕೆದಾರರು ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆಗೆ ಎರಡಕ್ಕೂ ಒಂದೇ ಮೊಬೈಲ್‌ ನಂಬರ್ ಲಿಂಕ್‌ ಆಗಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆ ಇನ್ನು ಲಿಂಕ್‌ ಆಗಿಲ್ಲ ಎಂದಾದರೆ ಬಳಕೆದಾರರು ಮೊದಲು ಲಿಂಕ್‌ ಮಾಡಿಕೊಳ್ಳಬೇಕು.ಕೆಲ ಬ್ಯಾಂಕ್ ಗಳಲ್ಲಿ ಮಾತ್ರ ಈ ಸೌಲಭ್ಯ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಬ್ಯಾಂಕ್‌ಗಳು ಈ ಸೇವೆ ದೊರೆಯುವಂತೆ ಮಾಡಲು ಸೇವೆ ವಿಸ್ತರಣೆ ಮಾಡಲಾಗುತ್ತದೆ.

ಆಧಾರ್‌ ನಂಬರ್ ಮೂಲಕ ಯುಪಿಐ ಐಡಿ ಬದಲಾವಣೆ ಮಾಡುವ ಅಥವಾ ಸೆಟಪ್‌ ಮಾಡುವುದು ಹೇಗೆ ಗೊತ್ತಾ?

* ನೀವು ಗೂಗಲ್‌ ಪೇ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್‌ ಆದ ಕೂಡಲೇ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತದೆ.
* ಡೆಬಿಟ್‌/ಎಟಿಎಂ ಕಾರ್ಡ್‌ ಮೂಲಕ ಇಲ್ಲವೇ ಆಧಾರ್‌ ಕಾರ್ಡ್‌ ಮೂಲಕ ವೆರಿಫೈ ಮಾಡಲು ಅವಕಾಶವಿದೆ.
* ಈ ವೇಳೆ ಗ್ರಾಹಕರು ಆಧಾರ್‌ ಕಾರ್ಡ್‌ ವೆರಿಫಿಕೇಶನ್‌ ಆಯ್ಕೆ ಮಾಡಬೇಕು. ಆನಂತರ ಮೊದಲ 6 ಆಧಾರ್ ನಂಬರ್ ಎಂಟರ್ ಮಾಡಬೇಕು.
* ಈ ಪ್ರಕ್ರಿಯೆಯ ನಂತರ ನಿಮ್ಮ ಪೇಮೆಂಟ್‌ಗಳಿಗೆ ಸೆಕ್ಯೂರಿಟಿ ಪಿನ್‌ ಕ್ರಿಯೇಟ್‌ ಮಾಡಿಕೊಂಡು ಬಳಿಕ ನಿಮ್ಮ ಮೊಬೈಲ್‌ಗೆ ಬರುವ 6 ಸಂಖ್ಯೆಗಳ ಆಧಾರ್ ಓಟಿಪಿಯನ್ನು ನಮೂದಿಸಬೇಕು.

*ಈ ಓಟಿಪಿ ನೀಡಿದ ಬಳಿಕ ಮತ್ತೆ 6 ಡಿಜಿಟ್‌ನ ಬ್ಯಾಂಕ್‌ ಓಟಿಪಿ ಬರಲಿದೆ. ಅದನ್ನು ಕೂಡ ನೀಡಬೇಕು. ಒಟಿಪಿ ವೆರಿಫಿಕೇಶನ್‌ ಮುಗಿದ ಬಳಿಕ ನೀವು 6 ಡಿಜಿಟ್‌ನ ಯುಪಿಐ ಪಿನ್‌ ಅನ್ನು ಸೆಟಪ್‌ ಮಾಡುವ ಮೂಲಕ ನಿಮ್ಮ ಖಾತೆಯನ್ನು ರಕ್ಷಿಸಬಹುದು.

* ಯುಪಿಐ ಐಡಿ ಕ್ರಿಯೇಟ್‌ ಮಾಡಿದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗೂಗಲ್‌ ಪೇ ಮೂಲಕವೇ ನಿಮ್ಮ ಬ್ಯಾಂಕ್‌ ಖಾತೆ ಬ್ಯಾಲೆನ್ಸ್‌, ವರ್ಗಾವಣೆ, ಹಣ ಸ್ವೀಕಾರ ಎಲ್ಲ ಸೇವೆಯ ಪ್ರಯೋಜನ ಪಡೆಯಬಹುದು.

 

ಇದನ್ನು ಓದಿ: Karnataka ACF PET exam date 2023: ಕೆಪಿಎಸ್‌ಸಿಯಿಂದ ಅರಣ್ಯ ಇಲಾಖೆ ಎಸಿಎಫ್‌ ಕುರಿತು ಬಿಗ್‌ ಅಪ್ಡೇಟ್‌! 

Leave A Reply

Your email address will not be published.