Udupi: ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿದ್ಯಾಕುಮಾರಿ ನೇಮಕ!

Latest news Dr. Vidyakumari appointed as the new District Collector of Udupi

ಉಡುಪಿ : ರಾಜ್ಯ ಸರಕಾರ ಉಡುಪಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯನ್ನು ಘೋಷಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿಯಾಗಿದ್ದ ಕೂರ್ಮ ರಾವ್ ಎಂ. ಅವರು ವರ್ಗಾವಣೆಯಾಗಿದ್ದಾರೆ.

ಇದೀಗ ರಾಜ್ಯ ಸರಕಾರದ ಆದೇಶದ ಮೇರೆಗೆ ಜಿಲ್ಲಾಧಿಕಾರಿಯಾಗಿ ಡಾ.ವಿದ್ಯಾ ಕುಮಾರಿಯವರು ನೇಮಕಗೊಂಡಿದ್ದಾರೆ. ಕೆಎಎಸ್ ನಿಂದ ಐಎಎಸ್ ಗೆ 5 ವರ್ಷಗಳ ಹಿಂದೆ ಭಡ್ತಿ ಪಡೆದಿದ್ದ ವಿದ್ಯಾಕುಮಾರಿಯವರು ಈ ಹಿಂದೆ ಉಡುಪಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಡಾ.ವಿದ್ಯಾಕುಮಾರಿ ಅವರು ಮೂಲತಃ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾಗಿದ್ದು, 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಸೆಪ್ಟೆಂಬರ್ 2021 ರಲ್ಲಿ ಉಡುಪಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಇಂದು ವರ್ಗಾವಣೆಗೊಂಡಿದ್ದಾರೆ.

Leave A Reply

Your email address will not be published.