Kalaburagi: ಶಿಕ್ಷಕರ ವರ್ಗಾವಣೆ ಕುರಿತು ಇಲ್ಲಿದೆ ಮುಖ್ಯವಾದ ಮಾಹಿತಿ! ವೈದ್ಯಕೀಯ ಪರೀಕ್ಷೆ, ಸ್ಥಳ, ಸಮಯ ಕುರಿತ ಬಿಗ್ ಅಪ್ಡೇಟ್ ಇಲ್ಲಿದೆ!

Latest news education Kalaburagi important information about teacher transfer

Kalaburagi: 2022-23ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ವೈದ್ಯಕೀಯ ಮತ್ತು ಅಂಗವಿಕಲ ಆದ್ಯತೆಯ ಮೇರೆಗೆ ಅಂತರ ಜಿಲ್ಲೆ ವರ್ಗಾವಣೆ ನಿರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿರುವ ಶಿಕ್ಷಕರಿಗೆ ಜುಲೈ 14 ಹಾಗೂ 15 ರಂದು ವೈದ್ಯಕೀಯ ಪರೀಕ್ಷೆ ಕಲಬುರ್ಗಿ ಜಿಲ್ಲೆಯ (Kalaburagi) ಹೊರಗೆ ಹಾಗೂ ಕಲಬುರಗಿ ವಿಭಾಗದೊಳಗೆ ನಡೆಯಲಿದೆ.

ಜುಲೈ 14 ರಂದು ಒಟ್ಟು 67 ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಜುಲೈ 15 ರಂದು ಒಟ್ಟು 39 ಪ್ರೌಢ ಶಾಲಾ ಸಹ ಶಿಕ್ಷಕರ ವೈದ್ಯಕೀಯ ಪರೀಕ್ಷೆ ಜರುಗಲಿದೆ. ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿರುವ ಶಿಕ್ಷಕರು ವೈದ್ಯಕೀಯ ಪ್ರಮಾಣ ಪತ್ರದ ಜೊತೆಗೆ ಯುಡಿಐಡಿ (UDID) ಅಂಗವಿಕಲ ಪ್ರಮಾಣ ಪತ್ರದ ದಾಖಲಾತಿಗಳೊಂದಿಗೆ ಚಿಕಿತ್ಸೆ ಪಡೆದಿರುವ ದಾಖಲಾತಿ, ಇತರೆ ಎಲ್ಲಾ ದಾಖಲಾತಿಗಳ ಎರಡು ಸೆಟ್ ಝೆರಾಕ್ಸ್ ಪ್ರತಿ ಹಾಗೂ ಗುರುತಿನ ಪತ್ರಗಳ ದಾಖಲಾತಿಗಳೊಂದಿಗೆ ನಡೆಯುವ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಸೂಚಿಸಲಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ವಿಭಾಗೀಯ ಸಹ ನಿರ್ದೇಶಕರಾದ ಅಮಿತಾ ಎನ್ ಯರಗೋಳಕರ್ ಅವರು ಪ್ರತಿದಿನ ಬೆಳಿಗ್ಗೆ 9 ಗಂಟೆಯ ವೇಳೆಗೆ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ (ಜಿಲ್ಲಾ ಆಸ್ಪತ್ರೆ) ಹಳೆಯ ಬಿಲ್ಡಿಂಗ್, ಯು.ಡಿ.ಐ.ಡಿ ವಿಭಾಗ, ರೂಂ ನಂ. 101 ಅಂಗವಿಕಲ ವಿಭಾಗದಲ್ಲಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಸೂಚಿಸಿದ್ದಾರೆ.

ಕಳೆದ ಜೂನ್‌ 2 ರಂದು ಹೊರಡಿಸಲಾದ ಪರಿಷ್ಕೃತ ವೇಳಾಪಟ್ಟಿಯ ಅನುಸಾರ ಗ್ರೂಪ್- ‘ಬಿ’ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ ತತ್ಸಮಾನ ವೃಂದದ ಅಧಿಕಾರಿಗಳ ಕೋರಿಕೆ ವರ್ಗಾವಣೆಗಳ ಮತ್ತು ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕನಿಷ್ಠ ಸೇವೆ (03 ವರ್ಷ ಮೇಲ್ಪಟ್ಟು ಮತ್ತು 05 ವರ್ಷ ಒಳಗೆ) ಇರುವ ಅಧಿಕಾರಿಗಳಿಗೆ ಕ್ರಮವಾಗಿ ಇದೇ ಜುಲೈ 25 ಹಾಗೂ 26 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿಯಲ್ಲಿ ಸ್ಥಳ ಆಯ್ಕೆಗಾಗಿ ಕೌನ್ಸಿಲಿಂಗ್‌ನ್ನು ಹಮ್ಮಿಕೊಂಡಿರುವ ಕುರಿತು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ವರ್ಗಾವಣೆ ಪ್ರಾಧಿಕಾರಿಗಳು ಹಾಗೂ ನಿರ್ದೇಶಕರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಇದೇ ಜುಲೈ 26 ರಂದು ಕೌನ್ಸಿಲಿಂಗ್ ನಡೆಯಲಿದ್ದು, ಕೌನ್ಸಿಲಿಂಗ್‌ಗೆ ಹಾಜರಾಗಬೇಕಾದ ಸ್ಥಳವನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುತ್ತದೆ.

ಈ ಕುರಿತಂತೆ ಸಂಬಂಧಿಸಿದಂತೆ ಅಧಿಕಾರಿಗಳು ಕೌನ್ಸಿಲಿಂಗ್‌ಗೆ ಅರ್ಜಿ ನಮೂನೆ ಮತ್ತು ಇತರೆ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು.ಕಲಬುರಗಿ ವಿಭಾಗದಲ್ಲಿ ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿಯ ಅನುಸಾರ ವರ್ಗಾವಣೆ ಅಧಿಸೂಚನೆಯನ್ವಯ ವರ್ಗಾವಣೆ ಕೋರಿ ಅರ್ಜಿಯನ್ನು ಸಲ್ಲಿಸಿರುವ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ಅರ್ಹ ಮತ್ತು ತಿರಸ್ಕೃತ ಅರ್ಜಿಗಳ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಜುಲೈ 1 ರಂದು ಪ್ರಕಟಿಸಲಾಗಿದೆ.

ಈ ಕುರಿತಂತೆ ಬಾಧಿತರಿಂದ ಆಕ್ಷೇಪಣೆಗಳನ್ನು ವಿಭಾಗದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರು(ಆಡಳಿತ)ರವರ ಮೂಲಕ ಪಡೆದು ನಿಯಮಾನುಸಾರ ಪರಿಶೀಲಿಸಿ, ಇತ್ಯರ್ಥಪಡಿಸಿ, ಘಟಕದ ಒಳಗೆ ಹಾಗೂ ಹೊರಗೆ ಕೋರಿಕೆ ವರ್ಗಾವಣೆಗೆ ಅರ್ಹರಾಗಿರುವ ಗ್ರೂಪ್-‘ಬಿ’ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳ ಅರ್ಜಿಗಳ ಅಂತಿಮ ಕೌನ್ಸಿಲಿಂಗ ಆದ್ಯತಾ ಪಟ್ಟಿಗಳನ್ನು ಅನುಬಂಧ-1 ರಿಂದ 3ರ ವರೆಗೆ www.cpikalaburgi.karnataka.gov.in ಇಲಾಖೆಯ ವೆಬ್‌ಸೈಟ್‌ನಲ್ಲಿ ಜುಲೈ 11 ರಂದು ಪ್ರಕಟಿಸಲಾಗಿದೆ.

 

ಇದನ್ನು ಓದಿ: Ration card holders: ಪಡಿತರ ಚೀಟಿದಾರರೇ ಈ ಕೆಲಸ ಮಾಡದಿದ್ದರೆ ಆಗಸ್ಟ್ ನಿಂದ ಆಹಾರಧಾನ್ಯ, ನಗದು ಸ್ಟಾಪ್!!! 

Leave A Reply

Your email address will not be published.