Indian Railways Latest Update: ರೈಲು ಪ್ರಯಾಣಿಕರಿಗೆ ಇಲ್ಲಿದೆ ಮಹತ್ವದ ಸುದ್ದಿ! ರೈಲು ಟಿಕೆಟ್‌ ಬಗ್ಗೆ ಬಂದಿದೆ ಹೊಸ ನಿಯಮ!!!

Latest news Indian Railways Latest Update There is a new rule about train tickets

Indian Railways Latest Update: ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಮಹತ್ವದ ಸುದ್ದಿ. ನೀವೇನಾದರು ರೈಲಿನಲ್ಲಿ ಪ್ರಯಾಣ ಮಾಡಲು ರೈಲು ಟಿಕೆಟ್‌ ಬುಕ್‌ ಮಾಡಬೇಕೆಂದಿದ್ದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಅಂದಹಾಗೆ ಹೆಚ್ಚಿನ ಮಂದಿ ರೈಲಿನಲ್ಲಿ ಪ್ರಯಾಣ ಮಾಡಬೇಕಾದರೆ ಟಿಕೆಟ್‌ ಮೊದಲು ಬುಕ್ ಮಾಡುತ್ತಾರೆ. ಇದು ಸಾಮಾನ್ಯ ಕೂಡಾ. ಏಕೆಂದರೆ ಒಂದು ವೇಳೆ ಸೀಟ್‌ ಟಿಕೆಟ್‌ ದೊರಕದಿದ್ದರೆ ಎನ್ನುವ ಅನುಮಾನದಿಂದ ಈ ರೀತಿ ಮಾಡಲಾಗುತ್ತದೆ. ಹಾಗಾದರೆ ಈ ರೈಲು ಟಿಕೆಟ್‌ ಕಾಯ್ದಿರಿಸಲು ಹೋಗುತ್ತಿದ್ದರೆ, ಈಗ ಬಂದಿರುವ ರೈಲು ಟಿಕೆಟ್‌ಗೆ ಸಂಬಂಧಿಸಿದ ಹೊಸ ನಿಯಮ ನೀವು ತಿಳಿದುಕೊಂಡಿರಬೇಕು. ರೈಲ್ವೆ ಇಲಾಖೆ ರೈಲು ಟಿಕೆಟ್‌ಗೆ ಸಂಬಂಧಿಸಿದಂತೆ ನಿಯಮವೊಂದನ್ನು ಬದಲಾಯಿಸಿದೆ. ಹೊಸ ನಿಯಮವೊಂದನ್ನು ರೈಲ್ವೆ ಹೊಸ ನಿಯಮವನ್ನು ಹೊರಡಿಸಿದೆ.

ಈ ಹೊಸ ನಿಯಮದ ಪ್ರಕಾರ ನಿಮ್ಮ ಟಿಕೆಟನ್ನು ಇನ್ನೊಬ್ಬರಿಗೆ ವರ್ಗಾಯಿಸುವ ನಿಯಮವನ್ನು ರೈಲ್ವೆ ಇಲಾಖೆ ಜಾರಿಗೆ ತಂದಿದೆ. ಈ ರೈಲ್ವೆ ನಿಯಮಗಳ ಪ್ರಕಾರ, ಪ್ರಯಾಣಿಕ ಪೋಷಕರಿಗೆ, ಒಡ ಹುಟ್ಟಿದವರಿಗೆ, ಮಗ-ಮಗಳಿಗೆ ಅಥವಾ ಹೆಂಡತಿಗೆ ಜೊತೆಗೆ ಕುಟುಂಬದ ಸದಸ್ಯರಿಗೆ ಮಾತ್ರ ವರ್ಗಾಯಿಸಲು ಅವಕಾಶವಿದೆ. ಆದರೆ ಇಲ್ಲೊಂದು ವಿಶೇಷ ಏನೆಂದರೆ ಇದನ್ನು ಪ್ರಯಾಣಿಕ ಆತನ ಆಪ್ತ ಸ್ನೇಹಿತರಿಗೆ ವರ್ಗಾಯಿಸುವಂತಿಲ್ಲ.

ಇದಕ್ಕಾಗಿ, ಪ್ರಥಮವಾಗಿ ಟಿಕೆಟ್‌ ಹೋಲ್ಡರ್‌, ಟಿಕೆಟ್‌ನ ಪ್ರಿಂಟ್‌ಔಟ್‌ ತೆಗೆಯಬೇಕು, ನಂತರ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಹೋಗಿ, ನೀವು ಯಾರ ಹೆಸರಿಗೆ ಟಿಕೆಟ್‌ ವರ್ಗಾಯಿಸಲು ಬಯಸುತ್ತಿರೋ ಅವರ ಆಧಾರ್‌ ಕಾರ್ಡ್‌ ಗುರುತಿನ ಪುರಾವೆ ಇರಬೇಕು. ನಂತರ ಗುರುತಿನ ಪುರಾವೆ ಲಗತ್ತಿಸುವ ಮೂಲಕ ಟಿಕೆಟನ್ನು ವರ್ಗಾವಣೆಗೆ ಅರ್ಜಿ ನೀಡಬೇಕು. ಆದರೆ ಈ ಟಿಕೆಟ್‌ ವರ್ಗಾವಣೆ ಮಾಡಬೇಕಾದರೆ ರೈಲು ಹೊರಡುವ 24ಗಂಟೆ ಮೊದಲು ಅರ್ಜಿ ಕೊಡಬೇಕು. ಟಿಕೆಟನ್ನು ಒಮ್ಮೆ ಮಾತ್ರ ವರ್ಗಾಯಿಸಲು ಸಾಧ್ಯವಾಗಿರುವುದರಿಂದ ಮತ್ತೆ ಮತ್ತೆ ಬೇರೆಯವರಿಗೆ ವರ್ಗಾಯಿಸಲು ಆಗುವುದಿಲ್ಲ.

 

ಇದನ್ನು ಓದಿ: Kalaburagi: ಶಿಕ್ಷಕರ ವರ್ಗಾವಣೆ ಕುರಿತು ಇಲ್ಲಿದೆ ಮುಖ್ಯವಾದ ಮಾಹಿತಿ! ವೈದ್ಯಕೀಯ ಪರೀಕ್ಷೆ, ಸ್ಥಳ, ಸಮಯ ಕುರಿತ ಬಿಗ್ ಅಪ್ಡೇಟ್ ಇಲ್ಲಿದೆ!

Leave A Reply

Your email address will not be published.