Signs of wealth in astrology: ಈ ಕನಸು ಬಿದ್ದರೆ ಅದೃಷ್ಟ ನಿಮ್ಮ ಕೈ ಹಿಡಿಯೋದು ಗ್ಯಾರಂಟಿ!

Latest news intresting news Signs of wealth in astrology

Signs of wealth in astrology : ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ನಮ್ಮ ಕೆಲವು ಅಭ್ಯಾಸಗಳು ನಮ್ಮನ್ನು ಆರ್ಥಿಕ ಮುಗ್ಗಟ್ಟಿನ ಸಮಸ್ಯೆ ತಲೆದೋರುವ ಹಾಗೇ ಮಾಡುತ್ತದೆ. ಹೆಚ್ಚಿನ ಮಂದಿ ನನ್ನ ಗ್ರಹಚಾರವೆ ಸರಿಯಿಲ್ಲ!! ಕೈಯಲ್ಲಿ ದುಡ್ಡೇ ಉಳಿಯುತ್ತಿಲ್ಲ ಎಂದು ಹೇಳೋದನ್ನು ನೀವು ಕೇಳಿರುತ್ತೀರಿ.

ಎಷ್ಟೋ ಸಲ, ನಮ್ಮ ಕೆಟ್ಟ ಅಭ್ಯಾಸಗಳಿಂದ ಆರ್ಥಿಕವಾಗಿ ನಾವು ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ಝಣ ಝಣ ಕಾಂಚಾಣ ಕೈಯಲ್ಲಿ ನೆಲೆಸಲು ನಾನಾ ಬಗೆಯ ಹರ ಸಾಹಸ ಬೇಕಾಗುತ್ತದೆ. ಹಾಗಾದ್ರೆ ಹಣ ಉಳಿತಾಯ ಮಾಡುವ ಸಲಹೆಗಳನ್ನು(Astrology Money Tips) ಬೆಳೆಸಿಕೊಳ್ಳುವುದು ಉತ್ತಮ. ಆರ್ಥಿಕವಾಗಿ ನೀವು ಸೋಲಲು ಆರಂಭಿಸಿದ ಕೂಡಲೇ ಮಾನಸಿಕವಾಗಿ ಚಿಂತೆ ಎಂಬ ಚಿತೆಯಿಂದ ಕುಗ್ಗಿ ಹೋಗುವಂತೆ ಆಗೋದು ಕೂಡ ಇದೆ.

ಝಣ ಝಣ ಕಾಂಚಾಣದ ಅವಶ್ಯಕತೆ ಯಾರಿಗಿಲ್ಲ ಹೇಳಿ! ನಾವು ಕೈಗೊಳ್ಳುವ ತಪ್ಪು ಅಭ್ಯಾಸಗಳಿಂದಾಗಿ(Bad Habits) ಜಾತಕದಲ್ಲಿ ಗ್ರಹದೋಷಗಳು ಕಂಡುಬಂದು ಅಶುಭ ಫಲಗಳು ಗೋಚರಿಸುತ್ತದೆ. ಹಾಗಿದ್ರೆ, ನಿಮ್ಮನ್ನು ಬಡತನದ ಹಾದಿಯಲ್ಲಿ ಸಾಗುವಂತೆ ಮಾಡುವ ಅಭ್ಯಾಸಗಳು ಯಾವುದು ಎಂದು ನೀವು ತಿಳಿದುಕೊಂಡರೆ ಆ ತಪ್ಪು ಅಭ್ಯಾಸಗಳನ್ನು ಜೀವನದಲ್ಲಿ ರೂಡಿಸಿಕೊಳ್ಳದೆ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಿಂದ ಪಾರಾಗಬಹುದು. ಸ್ಪಪ್ನದಲ್ಲಿ ಈ ಎಲ್ಲ ಅಂಶಗಳನ್ನು ಕಂಡರೆ ನಿಮ್ಮ ಮನೆಗೆ ಲಕ್ಷ್ಮಿಯ ಕೃಪಕಟಾಕ್ಷ ಲಭ್ಯವಾಗಲಿದೆ. ಲಕ್ಷ್ಮಿ ಆಗಮನವನ್ನು ಸೂಚಿಸುವ ಕೆಲ ಸೂಚನೆಗಳಿದ್ದು, ಇವುಗಳ ಮೂಲಕ ನೀವು ಹಣದ ಆಗಮನವನ್ನು ತಿಳಿಯಬಹುದು.

ಪೊರಕೆ : ಪ್ರತಿ ಮನೆಯಲ್ಲಿ ಪೊರಕೆ ಬಳಸುವುದು ಸಹಜ. ಜ್ಯೋತಿಷ್ಯದಲ್ಲಿ, ಪೊರಕೆಯನ್ನು ತಾಯಿ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಪೊರಕೆ ನೋಡಿದರೆ ಅದು ಒಳ್ಳೆಯ ಸಂಕೇತವೆಂದು ನಂಬಲಾಗುತ್ತದೆ. ನಿಮ್ಮ ಮನೆಗೆ ಲಕ್ಷ್ಮಿ ಶೀಘ್ರದಲ್ಲೇ ಆಗಮಿಸುತ್ತಾಳೆ ಎಂಬುದರ ಸೂಚನೆಯಾಗಿದೆ. ಪೊರಕೆಯನ್ನು ಎಂದಿಗೂ ಕಾಲಿನಿಂದ ತುಳಿಯಬಾರದು.

ಕನಸು : ನೀವು ಕನಸಿನಲ್ಲಿ ಗೂಬೆ, ಪೊರಕೆ, ಆನೆ ಮತ್ತು ಗುಲಾಬಿ ಹೂವುಗಳನ್ನು ಕಂಡರೆ ಇದು ತಾಯಿ ಲಕ್ಷ್ಮಿಯ ಆಗಮನದ ಸಂಕೇತವಾಗಿದೆ.

ಹಲ್ಲಿ : ಹಲ್ಲಿಯನ್ನು ನೋಡುವುದು ಒಳ್ಳೆಯ ಶಕುನವೆಂದು ಪರಿಗಣಿಸಲಾಗುತ್ತದೆ. ಹಲ್ಲಿ ತುಳಸಿ ಗಿಡದ ಸುತ್ತಲೂ ತಿರುಗು ವುದನ್ನು ಗಮನಿಸಿದರೆ ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸುತ್ತಾಳೆ ಎಂಬುದನ್ನು ಸೂಚಿಸುತ್ತದೆ.

ಹಣ ಪಡೆಯುವುದು : ರಸ್ತೆಯಲ್ಲಿ ಎಲ್ಲಿಯಾದರೂ ಹಣ ಸಿಕ್ಕರೆ ಅದು ತಾಯಿ ಲಕ್ಷ್ಮಿ ದಯೆ ಸಿಗುತ್ತದೆ. ಈ ಹಣವನ್ನು ದೇವಸ್ಥಾನದಲ್ಲಿ ಅರ್ಪಿಸಬೇಕು.

ಗುಬ್ಬಚ್ಚಿ ಮನೆಯಲ್ಲಿ ಗೂಡು ಕಟ್ಟುತ್ತದೆ : ಮಾತಾ ಲಕ್ಷ್ಮಿಯ ಆಗಮನದ ಮೊದಲ ಸಂಕೇತವಾಗಿದೆ. ಗುಬ್ಬಚ್ಚಿ ಮನೆಯಲ್ಲಿ ಗೂಡು ಕಟ್ಟಿದರೆ ಅದನ್ನು ತೆಗೆದುಹಾಕುವುದು ಒಳ್ಳೆಯದಲ್ಲ. ನಿಮ್ಮ ಮನೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟಿದರೆ ಶುಭ ಶಕುನ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಲಾಗುತ್ತದೆ.

 

ಇದನ್ನು ಓದಿ: Cochin shipyard recruitment 2023: ಕೊಚ್ಚಿನ ಶಿಪ್‌ಯಾರ್ಡ್‌ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! 300 ವರ್ಕ್‌ಮೆನ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ!!! 

Leave A Reply

Your email address will not be published.