Cochin shipyard recruitment 2023: ಕೊಚ್ಚಿನ ಶಿಪ್‌ಯಾರ್ಡ್‌ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! 300 ವರ್ಕ್‌ಮೆನ್‌ ಹುದ್ದೆಗಳು!

Latest news Job news cochin shipyard limited workmen recruitment 2023 online apply for 300 posts

Cochin shipyard recruitment 2023: ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಗೆ ಇಲ್ಲೊಂದು ಗುಡ್‌ನ್ಯೂಸ್‌ ಇದೆ. ಸರಕಾರಿ ಹುದ್ದೆ ಬಯಸುವವರಿಗೆ ಇದೊಂದು ಒಳ್ಳೆಯ ಅವಕಾಶ. ಹೌದು ಕೊಚ್ಚಿನ್‌ ಶಿಪಯಾರ್ಡ್‌ ಲಿಮಿಟೆಡ್‌ ವರ್ಕ್‌ಮೆನ್‌ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಹಾಗಾಗಿ ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 14-07-2023
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 28-07-2023

ಹುದ್ದೆಗಳ ವಿವರ ಈ ರೀತಿ ಇದೆ.
ಶೀಟ್‌ ಮೆಟಲ್‌ ವರ್ಕರ್ – 21 ಹುದ್ದೆಗಳು
ವೆಲ್ಡರ್- 34 ಹುದ್ದೆಗಳು
ಫಿಟ್ಟರ್- 88ಹುದ್ದೆಗಳು
ಮೆಕ್ಯಾನಿಕಲ್ ಡೀಸೆಲ್- 19 ಹುದ್ದೆಗಳು
ಮೆಕ್ಯಾನಿಕ್ ಮೋಟಾರು ವೆಹಿಕಲ್- 5 ಹುದ್ದೆಗಳು
ಪ್ಲಂಬರ್- 21 ಹುದ್ದೆಗಳು
ಪೇಂಟರ್- 12 ಹುದ್ದೆಗಳು
ಇಲೆಕ್ಟ್ರೀಷಿಯನ್- 42 ಹುದ್ದೆಗಳು
ಇಲೆಕ್ಟ್ರಾನಿಕ್ ಮೆಕ್ಯಾನಿಕ್- 19 ಹುದ್ದೆಗಳು
ಇನ್‌ಸ್ಟ್ರುಮೆಂಟೇಶನ್ ಮೆಕ್ಯಾನಿಕ್- 34 ಹುದ್ದೆಗಳು
ಶಿಪ್‌ರೈಟ್‌ ವುಡ್- 5 ಹುದ್ದೆಗಳು

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ/ಐಟಿಐ ಪಾಸ್‌ ಮಾಡಿದವರು, ನ್ಯಾಷನಲ್‌ ಟ್ರೇಡ್‌ ಸರ್ಟಿಫಿಕೇಟ್‌ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಗರಿಷ್ಠ 30ವರ್ಷ ಮೀರಿರಬಾರದು. ಅಂದ ಹಾಗೆ ಒಬಿಸಿ ಅಭ್ಯರ್ಥಿಗಳಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5ವರ್ಷ ವಯಸ್ಸಿನ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ: ರೂ.600. ಶುಲ್ಕ ವಿನಾಯಿತನ್ನು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ನೀಡಲಾಗಿದೆ. ಅಭ್ಯರ್ಥಿಗಳು ಕ್ರೆಡಿಟ್‌ ಕಾರ್ಡ್‌, ಇಂಟರ್ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌ ಮೂಲಕ ಕೂಡಾ ಪಾವತಿ ಮಾಡಲು ಅವಕಾಶವಿದೆ.

ಸಂಭಾವನೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲನೇ ವರ್ಷ : Rs.23,300, ಎರಡನೇ ವರ್ಷ : Rs.24,000, ಮೂರನೇ ವರ್ಷ : Rs.24,800 ಮಾಸಿಕ ಸಂಭಾವನೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಇದನ್ನು ಓದಿ: ಗೃಹಜ್ಯೋತಿ ಯೋಜನೆ: ಇಲ್ಲಿ ನೋಂದಣಿ ಮಾಡಬೇಕಾದರೆ ದುಡ್ಡು ಕೊಡಲೇ ಬೇಕು, ಸರಕಾರದಿಂದ ಬಿಗ್‌ ಅಪ್ಡೇಟ್‌ ! 

Leave A Reply

Your email address will not be published.