IAF Recruitment 2023: ನೀವು ಪಿಯುಸಿ ಪಾಸಾಗಿದ್ದೀರಾ? ನಿಮಗಾಗಿ ಇದೆ ಬಂಪರ್ ಉದ್ಯೋಗವಕಾಶ, ಮಾಸಿಕ ರೂ.40 ಸಾವಿರ ಸಂಬಳ!

Latest news Job opportunity for PUC passers IAF Recruitment 2023

IAF Recruitment 2023: ಉದ್ಯೋಗ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಯ ನಡುವೆ ನೆಚ್ಚಿನ ಹುದ್ದೆ (Job)ಪಡೆಯಲು ನಾನಾ ರೀತಿಯ ಹರಸಾಹಸ ಪಟ್ಟು ಕಂಗಾಲಾಗಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ಸಿಹಿ ಸುದ್ದಿ!

ಭಾರತೀಯ ವಾಯುಪಡೆ(Indian Air Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 17, 2023 ಕೊನೆಯ ದಿನವಾಗಿದ್ದು(Last Date), ಈ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಭಾರತೀಯ ವಾಯುಪಡೆ ನೇಮಕಾತಿ ಅಧಿಸೂಚನೆಯ ಅನುಸಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದ್ದು, ಈ ಹುದ್ದೆಗಳಿಗೆ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 12ನೇ ತರಗತಿ, ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಈ ಹುದ್ದೆಗಳಿಗೆ 27. 07.2023ಅರ್ಜಿ ಸಲ್ಲಿಕೆಗೆ ಆರಂಭಿಕ ದಿನವಾಗಿದ್ದು,ಆಗಸ್ಟ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ಮೂಲಕ 250 ರೂ. ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. ಈ ಹುದ್ದೆಗೆ ಅಕ್ಟೋಬರ್ 13, 2023 ರಂದು ಆನ್ಲೈನ್ ಪರೀಕ್ಷೆ ನಡೆಯಲಿದೆ. ಈ ಕುರಿತ ಯಾವುದೇ ಅನುಮಾನ ಗೊಂದಲಗಳಿದ್ದರೂ ಹೆಚ್ಚಿನ ಮಾಹಿತಿ ಪಡೆಯಲು ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 011-25694209/25699606 ಗೆ ಸಂಪರ್ಕಿಸಬಹುದು.

ಭಾರತೀಯ ವಾಯುಪಡೆ ನೇಮಕಾತಿ ಅಧಿಸೂಚನೆ ಅನುಸಾರ ಅರ್ಹತಾ ಮಾನದಂಡಗಳನ್ನು ಗಮನಿಸಿದರೆ ,ಅಭ್ಯರ್ಥಿಗಳ ವಯಸ್ಸು ಗರಿಷ್ಠ 21 ವರ್ಷ ಮೀರಿರಬಾರದು.ಇದರ ಜೊತೆಗೆ , ಅಭ್ಯರ್ಥಿಗಳು ಜೂನ್ 27, 2003 & ಡಿಸೆಂಬರ್ 27, 2006 ರೊಳಗೆ ಜನಿಸಿರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯಿರಲಿದೆ.

ಭಾರತೀಯ ವಾಯುಪಡೆ ನೇಮಕಾತಿ ಅಧಿಸೂಚನೆ ಅನುಸಾರ ಖಾಲಿ ಇರುವ ಹುದ್ದೆಗಳ ಭರ್ತಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ಹೊಂದಿಕೊಳ್ಳುವಿಕೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಆನ್‌ಲೈನ್ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಹುದ್ದೆಗಳಿಗೆ ಮಾಸಿಕ ₹ 30,000-40,000 ನಡೆಯಲಿದೆ. ಭಾರತದಲ್ಲಿ ಎಲ್ಲಿ ಬೇಕಾದರೂ ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯಲಿದೆ.

 

ಇದನ್ನು ಓದಿ: Belthangady: ಕೊರಗಜ್ಜನ ಚಪ್ಪರಕ್ಕೆ ಬೆಂಕಿ ಇಟ್ಟ ಪ್ರಕರಣ; ಓರ್ವ ಸೆರೆ 

Leave A Reply

Your email address will not be published.