Musty Smell in Clothes: ಮಳೆಗಾಲದಲ್ಲಿ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು 5 ಸರಳ ಮಾರ್ಗಗಳು

Latest news Musty Smell in Clothes tips to get rid of smell from clothes in rainy season

ಮಳೆಗಾಲ ಪ್ರಾರಂಭವಾಗಿದೆ. ಒಂದೆಡೆ ಗಾಳಿ ಮಳೆ ಬಿರುಸಿನಿಂದ ಇದ್ದರೆ, ಸೂರ್ಯನ ಬೆಳಕು ಇರದೆ ಕೆಲವೊಂದು ಸಮಸ್ಯೆಗಳು ಮನೆಯಲ್ಲಿ ತಲೆದೋರುತ್ತದೆ. ಅದರಲ್ಲೂ ಮುಖ್ಯವಾಗಿ ಬಟ್ಟೆ ಒಣಗಿಸುವುದು, ಒಂದಾದರೆ ಬಟ್ಟೆ ಒಣಗಿದರೂ ಅದರಲ್ಲಿ ಬರುವ ವಾಸನೆ ಒಮ್ಮೊಮ್ಮೆ ನಮ್ಮ ಮೂಡನ್ನು ಕೂಡಾ ಹಾಳು ಮಾಡುತ್ತದೆ. ಮಳೆಗಾಲದಲ್ಲಿ ಎಷ್ಟೇ ಚೆನ್ನಾಗಿ ಬಟ್ಟೆ ಒಗೆದರೂ ಫ್ರೆಶ್‌ ಆಗಿ ತಾಜಾತನದ ವಾಸನೆ ಹೊಂದುವುದು ಕಷ್ಟದ ಕೆಲಸ.

ಮಾನ್ಸೂನ್ ಸಮಯದಲ್ಲಿ ಹೆಚ್ಚಿನ ತೇವಾಂಶ ಇರುತ್ತದೆ. ಇದು ಬಟ್ಟೆಯಿಂದ ಬರುವ ಇಂತಹ ವಾಸನೆಗೆ ಕಾರಣವಾಗುತ್ತದೆ. ಆದರೆ ಚಿಂತಿಸಬೇಡಿ, ಇಂದು ನಾವು ಅಂತಹ ಕೆಲವು ವಿಧಾನಗಳನ್ನು ಹೇಳುತ್ತಿದ್ದೇವೆ, ಮಳೆಗಾಲದಲ್ಲಿ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಬಟ್ಟೆಯಿಂದ ಬರುವ ವಾಸನೆಯನ್ನು ತೊಡೆದುಹಾಕಬಹುದು.

ವಿನೆಗರ್, ಬೇಕಿಂಗ್ ಸೋಡಾ:
ನಿಮ್ಮ ಸಾಮಾನ್ಯ ಬಟ್ಟೆ ತೊಳೆಯುವ ಪೌಡರ್‌ ನಿಂದ ವಾಸನೆಯನ್ನು ತೆಗೆದುಹಾಕಲು ಸಾಧ್ಯವಾಗದಿರಬಹುದು. ಹಾಗಾಗಿ ನಿಮ್ಮ ಡಿಟರ್ಜೆಂಟ್ ಜೊತೆಗೆ ನೀರಿಗೆ ಹೆಚ್ಚಿನ ಪ್ರಮಾಣದ ವಿನೆಗರ್ ಅಡಿಗೆ ಸೋಡಾವನ್ನು ಸೇರಿಸಿ ಅದು ವಾಸನೆಯನ್ನು ತಟಸ್ಥಗೊಳಿಸಲು ಮತ್ತು ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಹೆಚ್ಚಿನ ಜನರು ತಮ್ಮ ದೈನಂದಿನ ಬಟ್ಟೆಗಳನ್ನು ಲಾಂಡ್ರಿ ಬ್ಯಾಗ್‌ನಲ್ಲಿ ಅಥವಾ ವಾಷಿಂಗ್ ಮೆಷಿನ್‌ನಲ್ಲಿ ಒಟ್ಟಿಗೆ ಒಗೆಯಲು ಹಾಕುತ್ತಾರೆ. ಮಳೆಗಾಲದಲ್ಲಿ ಕೆಟ್ಟ ಜಾಗದಲ್ಲಿ ಬಟ್ಟೆ ಇಟ್ಟುಕೊಳ್ಳುವುದರಿಂದ ಕೂಡಾ ವಾಸನೆ ಹೆಚ್ಚುತ್ತದೆ. ಅದು ತೊಳೆದರೂ ಹೋಗುವುದಿಲ್ಲ. ಅದಕ್ಕಾಗಿಯೇ ಹಗ್ಗದ ಮೇಲೆ ಪ್ರತ್ಯೇಕವಾಗಿ ಬಟ್ಟೆಗಳನ್ನು ಹಾಕಿ ನಂತರ ತೊಳೆಯುವ ನಂತರ ಯಂತ್ರದಿಂದ ಒಣಗಿಸಿ.

ನೀವು ಬಟ್ಟೆಗಳನ್ನು ನೆನೆಸುವ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಕೂಡ ಸೇರಿಸಿ ಒಗೆದರೆ, ಬಟ್ಟೆ ತಾಜಾವಾಗಿರುತ್ತದೆ.

ಸತತವಾಗಿ ಮಳೆ ಬರುತ್ತಿದ್ದು, ಬಟ್ಟೆ ತೆಗೆದಿದ್ದಲ್ಲಿ ವಾತಾವರಣ ತಿಳಿಯಾಗುವವರೆಗೆ ಕಾಯದೇ ಬಟ್ಟೆಗಳನ್ನು ಹರಡಿ ಮನೆಯೊಳಗಿನ ಫ್ಯಾನಿನ ಗಾಳಿಯಲ್ಲಿ ಒಣಗಿಸಿ, ಬಿಸಿಲು ಬಂದಾಗ ಬಿಸಿಲಿನಲ್ಲಿ ಬಟ್ಟೆ ಒಣಗಿಸಿ.

 

ಇದನ್ನು ಓದಿ:  ಗೂಗಲ್ ಪೇ ಬಳಕೆಗೆ ಹೊಸ ಮಾರ್ಗ; ಡೆಬಿಟ್ ಕಾರ್ಡ್ ಇಲ್ಲದೆಯೂ ನಿಮ್ಮ ಕೆಲಸ ಸುಲಭಗೊಳಿಸಿ!!! 

Leave A Reply

Your email address will not be published.