WhatsApp ಬಳಕೆದಾರರೇ, ನಿಮ್ಮ ಮೊಬೈಲ್ ನಂಬರ್ ಹೈಡ್ ಮಾಡುವ ಹೊಸ ಟ್ರಿಕ್ ಪರಿಚಯ!

Latest news technology new update to hide mobile number in WhatsApp

ಮೆಟಾ ಒಡೆತನದ ಜನರ ಮೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಇದೀಗ ಸದ್ದಿಲ್ಲದೆ ಹೊಸ ಅಪ್ಡೇಟ್ ಘೋಷಿಸಿದೆ. ಕಳೆದ ಒಂದು ವರ್ಷದಿಂದ ಒಂದರ ಮೇಲೊಂದರಂತೆ ಹೊಸ ಹೊಸ ಫೀಚರ್ ಪರಿಚಯಿಸಿರುವ ಕಂಪನಿ ಈಗ ಪ್ರೈವರಿಸಿಗೆ ಸಂಬಂಧಿಸಿದಂತೆ ವಿಶೇಷ ಅಪ್ಡೇಟ್ ತನ್ನ ಬಳಕೆದಾರರಿಗೆ ನೀಡಿದೆ.

ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮತ್ತಷ್ಟು ನೆರವಾಗುವ ನಿಟ್ಟಿನಲ್ಲಿ ಹೊಸ ಆಯ್ಕೆಯೊಂದನ್ನು ವಾಟ್ಸ್ಆ್ಯಪ್ ನೀಡಿದ್ದು, WABetaInfo ಮಾಡಿರುವ ವರದಿಯ ಅನುಸಾರ, ಬಳಕೆದಾರರು ಇದೀಗ ಫೋನ್ ನಂಬರ್ ಪ್ರೈವಸಿ ಆಯ್ಕೆಯನ್ನು ಪರಿಚಯಿಸಲಾಗಿದೆ. ವಾಟ್ಸ್ಆ್ಯಪ್ನ (WhatsApp) ನೂತನ ಬೇಟಾ ವರ್ಷನ್ ಅಪ್ಡೇಟ್ ಮಾಡಿದಾಗ ಈ ಆಯ್ಕೆ ದೊರೆಯಲಿದೆ.

ಇದಲ್ಲದೇ, ವಾಟ್ಸ್ಆ್ಯಪ್ನಲ್ಲಿ ಫಿಲ್ಟರ್ ಆಯ್ಕೆ ಕೂಡ ಹೊಸದಾಗಿ ಬರಲಿದೆಯಂತೆ. ಇದು ಚಾಟ್ ಲಿಸ್ಟ್ನಲ್ಲಿ ಹೊಸ ಬದಲಾವಣೆ ತರಲಿದ್ದು, ಈ ಆಯ್ಕೆಯ ಮೂಲಕ ಚಾಟ್ ಲಿಸ್ಟ್ ಅನ್ನು ಸುಲಭವಾಗಿ ನಿರ್ವಹಿಸಬಹುದು.ಕೆಲ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ, ಫಿಲ್ಟರ್ನಲ್ಲಿ ಮೂರು ಆಯ್ಕೆಗಳು ಇರಲಿದೆ. ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ಸೆಕೆಂಡುಗಳಲ್ಲಿ ಪ್ರಮುಖ ಚಾಟ್‌ಗಳನ್ನು ಪ್ರವೇಶಿಸಬಹುದು. ಆದರೆ, ಗ್ರೂಪ್ ಚಾಟ್ಗಳಿಗೆ ಇದು ಅನ್ವಯವಾಗದು.

ಫೋನ್ ನಂಬರ್ ಪ್ರೈವಸಿ ಫೀಚರ್ ಕಮ್ಯೂನಿಟಿ ಅನೌನ್ಸ್ಮೆಂಟ್ ಗ್ರೂಪ್ ಮೂಲಕ ಕಾಣಬಹುದು.ಇದರಲ್ಲಿ ಬಳಕೆದಾರರು ತಮ್ಮ ಮೊಬೈಲ್ ನಂಬರ್ ಅನ್ನು ಕಮ್ಯೂನಿಟಿ ಅನೌನ್ಸ್ಮೆಂಟ್ ಗ್ರೂಪ್ ನಲ್ಲಿ ಉಳಿದವರಿಗೆ ಕಾಣದಂತೆ ಮರೆಮಾಚುವ ಸಲುವಾಗಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ಫೀಚರ್ ನೆರವಾಗುತ್ತದೆ. ಗ್ರೂಪ್ ನಲ್ಲಿ ಹೆಚ್ಚಿನ ಮಂದಿ ಇದ್ದಾಗ ಇನ್ನುಳಿದ ಸದಸ್ಯರಿಗೆ ಮೊಬೈಲ್ ಸಂಖ್ಯೆ ಕಾಣದಂತೆ ಮಾಡಲು ಬಳಕೆದಾರರಿಗೆ ಈ ಫೀಚರ್ ಸಹಕರಿಸುತ್ತದೆ .

ಕಮ್ಯೂನಿಟಿಗಳಿಗಾಗಿ ಹೊಸ ಫೋನ್ ಸಂಖ್ಯೆ ಗೌಪ್ಯತೆ ವೈಶಿಷ್ಟ್ಯವು ಸದ್ಯ ಕೆಲವು ಬೀಟಾ ಬಳಕೆದಾರರಿಗೆ ಲಭ್ಯವಿದ್ದು, ಇದು ಸದ್ಯದಲ್ಲೇ ಎಲ್ಲ ಆಂಡ್ರಾಯ್ಡ್ ಮತ್ತು ಐಇಎಸ್ ಬಳಕೆದಾರರಿಗೆ ಅಪ್ಡೇಟ್ ಮಾಡುವ ಮೂಲಕ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಈ ವೈಶಿಷ್ಟ್ಯದ ಮೂಲಕ ಅವರ ಫೋನ್ ಸಂಖ್ಯೆಯು ಕಮ್ಯೂನಿಟಿ ಅಡ್ಮಿನ್ ಮತ್ತು ಅವರ ನಂಬರ್ ಅನ್ನು ಸೇವ್ ಮಾಡಿಟ್ಟುಕೊಂಡವರಿಗೆ ಮಾತ್ರವೇ ಕಾಣಿಸಲಿದೆ. ಹೀಗಿದ್ದರೂ ಕೂಡ ಯಾವಾಗಲೂ ಕಮ್ಯೂನಿಟಿ ಅಡ್ಮಿನ್ಗಳಿಗೆ ಫೋನ್ ಸಂಖ್ಯೆ ಕಾಣಿಸಲಿದ್ದು, ಇದಲ್ಲದೆ, ಈ ಆಯ್ಕೆ ಗ್ರೂಪ್ನಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ.

 

ಇದನ್ನು ಓದಿ: ESIC: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಖಾಲಿ ಹುದ್ದೆ! ನೇರ ಸಂದರ್ಶನದ ಮೂಲಕ ಆಯ್ಕೆ!! 

Leave A Reply

Your email address will not be published.