ಕಾರ್ಕಳ: ಬ್ಯಾಂಕ್ ನಲ್ಲಿಯೇ ನೇಣಿಗೆ ಶರಣಾದ ಮಹಿಳಾ ಸಿಬ್ಬಂದಿ!!

ಕಾರ್ಕಳ :ಇಲ್ಲಿನ ಬಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದ ಮಹಿಳಾ ಸಿಬ್ಬಂದಿಯೋರ್ವರು ಮುಂಜಾನೆ ಬ್ಯಾಂಕ್ ನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ವರದಿಯಾಗಿದೆ.

 

ಮೃತ ಮಹಿಳಾ ಸಿಬ್ಬಂದಿಯನ್ನು ಮಾರ್ಕೆಟ್ ರಸ್ತೆಯ ನಿವಾಸಿ ಪ್ರಮೀಳಾ ದೇವಾಡಿಗ (32) ಎಂದು ಗುರುತಿಸಲಾಗಿದೆ.

 

ಎಂದಿನಂತೆ ಇಂದು ಮುಂಜಾನೆ ಕಚೇರಿಗೆ ತೆರಳಿದ್ದ ಮಹಿಳೆ ಅಲ್ಲಿಂದ ಪುನಃ ಮನೆಗೆ ವಾಪಸ್ಸಾಗಿದ್ದು, ಮನೆಯಲ್ಲಿದ್ದ ಸೀರೆಯೊಂದನ್ನು ಹಿಡಿದುಕೊಂಡು ಮತ್ತೆ ಬ್ಯಾಂಕಿಗೆ ತೆರಳಿದ್ದರು ಎನ್ನಲಾಗಿದೆ.

 

ಬಳಿಕ ಬ್ಯಾಂಕ್ ನಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದ್ದು, ಸಾವಿಗೆ ನಿಖರ ಕಾರಣ ತನಿಖೆಯ ಬಳಿಕ ತಿಳಿಯಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.