DA Hike: ಜುಲೈ 1ರಿಂದ ಈ ಕೇಂದ್ರ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ಏರಿಕೆ!

central-government-hike-dearness-allowances-for-these-government-employees

ಸರಕಾರಿ ನೌಕರರಿಗೆ ಒಂದು ಶುಭಸುದ್ದಿ. ಈ ಒಂದು ಇಲಾಖೆಯ ಉದ್ಯೋಗಿಗಳಿಗೆ ಸಂತಸದ ಸುದ್ದಿ ದೊರಕಿದೆ. 2023ರ ಜುಲೈ7ರ ಸಾರ್ವಜನಿಕ ಉದ್ಯಮಗಳ ಇಲಾಖೆಯು ಈ ಮಾಹಿತಿ ದೃಢೀಕರಿಸಿದೆ. ಸಿಪಿಎಸ್‌ಇಎಸ್‌ ಕಾರ್ಯನಿರ್ವಾಹಕರು ಹಾಗೂ ಮೇಲ್ಚಿಚಾರಕರಿಗೆ ಸಾರ್ವಜನಿಕ ಉದ್ಯಮಗಳ ಇಲಾಖೆ ತುಟ್ಟಿ ಭತ್ಯೆ (DA)ಯನ್ನು ಪರಿಷ್ಕರಿಸಿದೆ.

ಡಿಎ ಯನ್ನು ಉದ್ಯೋಗಿಗಳ ಜೀವನ ನಿರ್ವಹಣಾ ವೆಚ್ಚದ ಆಧಾರದಲ್ಲಿ ನಿಗದಿ ಮಾಡಲಾಗುವುದು. ಬೋರ್ಡ್‌ ಮಟ್ಟಕ್ಕಿಂತ ಕೆಳಗಿನ ಹಾಗೂ ಸೂಪರ್‌ವೈಸರ್‌ ಹುದ್ದೆಗಳ ಡಿಎಯಲ್ಲಿ ಹೆಚ್ಚಳವಾಗಿದೆ.

ಮಾಸಿಕ 3,500ರೂ. ಮೂಲವೇತನ ಹೊಂದಿರೋರಿಗೆ ಡಿಎ ದರವನ್ನು ವೇತನದ ಶೇ.701.9ರಷ್ಟು ಹೆಚ್ಚಳ ಮಾಡಲಾಗಿದೆ. ಈ ಎಲ್ಲ ದರಗಳು 2023ರ ಜುಲೈ 1ರಿಂದ ಜಾರಿಗೆ ಬರಲಿವೆ.

ಇನ್ನು ತುಟ್ಟಿ ಭತ್ಯೆ 50 ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಪೈಸೆಗಳಲ್ಲಿ ವ್ಯತ್ಯಾಸವಿದ್ದರೆ, ಮುಂದಿನ ಅಧಿಕ ರೂಪಾಯಿಗೆ ಅದನ್ನು ಪರಿಗಣಿಸಬೇಕು. ಒಂದು ವೇಳೇ ಈ ವ್ಯತ್ಯಾಸ 50 ಪೈಸೆಗಿಂತ ಕಡಿಮೆಯಿದ್ದರೆ ಅದನ್ನು ನಿರ್ಲಕ್ಷ್ಯಿಸುವಂತೆ ಇಲಾಖೆ ತಿಳಿಸಿದೆ.

 

 

 

 

Leave A Reply

Your email address will not be published.