Bengaluru News: ಕಾರು ಚಾಲನೆ ವೇಳೆ ಗಂಡ ಹೆಂಡತಿ ಜಗಳ! ಸಿಟ್ಟುಗೊಂಡ ಪತ್ನಿ ದಿಢೀರ್‌ ಸ್ಟೇರಿಂಗ್‌ ಎಳೆದ್ಳು; ಮುಂದೇನಾಯ್ತು?

husband-wife-fighting-in-car

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಆದರೆ ಈ ಜಗಳ ಕಾರು ಚಾಲನೆ ಮಾಡುವವಲ್ಲಿಗೆ ಕೂಡಾ ಮುಂದುವರಿದರೆ ಏನಾಗುತ್ತದೆ? ಆಗುವುದೇನು? ಆಗಬಾರದ್ದು ಆಗತ್ತೆ ಅಲ್ವಾ? ಹೌದು, ಇಲ್ಲಿ ಕೂಡಾ ಅದೇ ಆಗಿರುವುದು. ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಸಿಟ್ಟುಗೊಂಡ ಪತ್ನಿ ಪತಿ ಮೇಲಿನ ಕೋಪಕ್ಕೆ ಕಾರಿನ ಸ್ಟೇರಿಂಗನ್ನು ದಿಢೀರ್‌ ಎಳೆದು ಬಿಟ್ಟಿದ್ದಾಳೆ. ಆಮೇಲೆ ಆಗಿದ್ದೇನೆ. ಕಾರು ಪಲ್ಟಿಯಾಗಿದೆ. ಆದರೆ ದೇವರ ಪುಣ್ಯ, ಕಾರಿನಲ್ಲಿದ್ದ ದಂಪತಿಗೆ ಏನೂ ಆಗದೆ ಅಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಬೆಂಗಳೂರಿನ ಹಲಸೂರು ಗೇಟ್‌ ಪೊಲೀಸ್‌ ಠಾಣೆ (Halasuru Gate Police Station) ಬಳಿ ತಡರಾತ್ರಿ ನಡೆದಿದೆ. ಕಾರು ಪಲ್ಟಿಯಾದ ಸುದ್ದಿ ಕೇಳಿದ ತಕ್ಷಣ ಹಲಸೂರು ಗೇಟ್‌ ಪೊಲೀಸರು ರಕ್ಷಣೆ ಮಾಡಿದ್ದು, ಇಬ್ಬರೂ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದ ಹಾಗೆ ಇವರಿಬ್ಬರು ಮದ್ಯಸೇವನೆ ಮಾಡಿ ಈ ರೀತಿ ಮಾಡಿದ್ದಾರೋ ಎಂಬ ಅನುಮಾನದ ಕಾರಣ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

 

 

Leave A Reply

Your email address will not be published.