BPCL Reciruitament: BPCL ನಲ್ಲಿ ಭರ್ಜರಿ ಉದ್ಯೋಗವಕಾಶ: ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 4ಕೊನೆಯ ದಿನ!

Latest news job news BPCL Reciruitament notification 2023

BPCL Reciruitament: ನೀವೇನಾದರೂ ಉದ್ಯೋಗ ಹುಡುಕುತ್ತಿದ್ದರೆ, ಈ ಮಾಹಿತಿ ನಿಮಗೆ ನೆರವಾಗುವುದು ಖಚಿತ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 4ರ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಹುದ್ದೆಯ ವಿವರಗಳು:
ಒಟ್ಟು ಹುದ್ದೆಗಳು: 138
ಡಿಪ್ಲೊಮಾ ಅಪ್ರೆಂಟಿಸ್: 61 ಹುದ್ದೆಗಳು
ಕೆಮಿಮಿಕಲ್ : 12 ಹುದ್ದೆಗಳು
ಸಿವಿಲ್: 8 ಹುದ್ದೆಗಳು
ಎಲೆಕ್ಟ್ರಿಕಲ್: 9 ಹುದ್ದೆಗಳು
ಮೆಕ್ಯಾನಿಕಲ್: 12 ಹುದ್ದೆಗಳು
ಇನ್ಸ್ಟ್ರುಮೆಂಟೇಶನ್: 10 ಹುದ್ದೆಗಳು
ಬಿ.ಕಾಂ: 6 ಹುದ್ದೆಗಳು
ಬಿಎಸ್ಸಿ: 4 ಹುದ್ದೆಗಳು

ಗ್ರಾಜುಯೇಟ್ ಅಪ್ರೆಂಟಿಸ್: 77 ಹುದ್ದೆಗಳು
ಕೆಮಿಕಲ್: 17 ಹುದ್ದೆಗಳು
ಸಿವಿಲ್: 6 ಹುದ್ದೆಗಳು
ಎಲೆಕ್ಟ್ರಿಕಲ್: 10 ಹುದ್ದೆಗಳು
ಐಟಿ/ಸಿಎಸ್ಇ: 2 ಹುದ್ದೆಗಳು
ಇನ್ಸ್ಟ್ರುಮೆಂಟ್: 8 ಹುದ್ದೆಗಳು
ಮೆಕ್ಯಾನಿಕಲ್: 6 ಹುದ್ದೆಗಳು
ಫೈಯರ್ ಸೇಫ್ಟಿ: 8 ಹುದ್ದೆಗಳು

ಅರ್ಹ ಪದವಿ, ಡಿಪ್ಲೊಮಾ ಮತ್ತು ನಾನ್ ಇಂಜಿನಿಯರಿಂಗ್ ಪದವೀಧರರಿಂದ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಇಲ್ಲವೇ NATS ಪೋರ್ಟಲ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನವಾಗಿದೆ.

ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಹತಾ ಮಾನದಂಡಗಳನ್ನು ಗಮನಿಸಿದರೆ, ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ ಅಭ್ಯರ್ಥಿಗಳು ಕೆಮಿಕಲ್/ಸಿವಿಲ್/ಎಲೆಕ್ಟ್ರಿಕಲ್/ಇನ್ಸ್ಟ್ರುಮೆಂಟೇಶನ್/ಮೆಕ್ಯಾನಿಕಲ್ ಸ್ಟ್ರೀಮ್ಗಳಲ್ಲಿ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿದ್ದು, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು ಕೆಮಿಕಲ್/ಸಿವಿಲ್/ಎಲೆಕ್ಟ್ರಿಕಲ್/ಐಟಿ/ಸಿಎಸ್ಇ/ಇನ್ಸ್ಟ್ರುಮೆಂಟ್/ಮೆಕ್ಯಾನಿಕಲ್/ಫೈರ್ ಸೇಫ್ಟಿ ಮತ್ತು ವಾಣಿಜ್ಯ/ಕೆಮಿಸ್ಟ್ರಿಯಲ್ಲಿ ಪದವಿ ಹೊಂದಿದ್ದು, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕಾಗುತ್ತದೆ.

ಇದರ ಜೊತೆಗೆ ಅಭ್ಯರ್ಥಿಗಳ ವಯೋಮಿತಿ ಸೆಪ್ಟೆಂಬರ್ ಸೆಪ್ಟೆಂಬರ್ 1, 2023 ರ ವೇಳೆಗೆ 18 ರಿಂದ 27 ವರ್ಷಗಳ ನಡುವೆ ಇರಬೇಕಾಗುತ್ತದೆ. ಮೇಲೆ ಹೇಳಿದ ಹುದ್ದೆಗಳಿಗೆ ಆಯಾ ವಿಭಾಗದ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಸಂದರ್ಶನದ ಪ್ರಕ್ರಿಯೆ ವೇಳೆ ಗಳಿಸಿದ ಅಂಕಗಳ ಆಧಾರದ ಮೇಲೆ ಸಾಮಾನ್ಯ/ಎಸ್ಸಿ/ಎಸ್ಟಿ/ಒಬಿಸಿ/ಪಿಡಬ್ಲ್ಯೂಬಿಡಿ ವಿಭಾಗಗಳ ಪ್ರಕಾರ ಅಂತಿಮ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ಇನ್ನು ವೇತನದ ಬಗ್ಗೆ ಗಮನಿಸಿದರೆ, ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ 18,000 ರೂ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ 25,000 ರೂ ಮಾಸಿಕವಾಗಿ ನೀಡಲಾಗುತ್ತದೆ. ಈ ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ BPCL ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.

 

ಇದನ್ನು ಓದಿ: Crime: ಯುವತಿಯ ಅಪಹರಣ ಮಾಡಿ, ಆ್ಯಸಿಡ್ ಸುರಿದು ಹತ್ಯೆ ಮಾಡಿದ ದುಷ್ಕರ್ಮಿಗಳು! 

Leave A Reply

Your email address will not be published.