Crime News: ರೈಲ್ವೆ ಹಳಿ ಲೂಟಿ; ಬರೋಬ್ಬರಿ 114 ಮೀಟರ್‌ ರೈಲ್ವೆ ಹಳಿಯನ್ನು 57 ಪೀಸ್‌ ಪೀಸ್‌ ಮಾಡಿದ ಪ್ರಚಂಡ ಕಳ್ಳರು!

Latest news shocking news Crime News Thieves stealing railway tracks

ನೀವು ಚಿನ್ನ, ಬೆಳ್ಳಿ, ಅಥವಾ ಇನ್ನಿತರ ಹಲವು ಬೆಲೆಬಾಳುವ ವಸ್ತುಗಳನ್ನು ಕದಿಯೋ ವಿಚಾರ ಕೇಳಿರಬಹುದು. ಆದರೆ ಜಾರ್ಖಾಂಡ್‌ನಲ್ಲಿ ಪ್ರಚಂಡ ಕಳ್ಳರಿದ್ದು, ಇವರು ಚಿನ್ನ ಬೆಳ್ಳಿ ಎಲ್ಲ ಬಿಟ್ಟು ರೈಲ್ವೆ ಹಳಿಗಳನ್ನು ಕದಿಯುವ ಕಾಯಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬೊಕಾರೊ ಜಿಲ್ಲೆಯ ಝರಿಯಾ ಒಪಿ ಪ್ರದೇಶದ ಅಡಿಯಲ್ಲಿ ದುಗ್ಡಾ ರೈಲು ನಿಲ್ದಾಣದಿಂದ ದಾಮೋದರ್ ಕೊಲಿಯರಿ ರೈಲ್ವೇ ಸೈಡಿಂಗ್‌ಗೆ ಹೋಗುವ ಲಿಂಕ್ ರೈಲು ಮಾರ್ಗದ ಕಂಬ ಸಂಖ್ಯೆ ಇ 44 ಮತ್ತು ಇ 46 ನಡುವೆ ಎರಡೂ ಬದಿಗಳಲ್ಲಿ ಸುಮಾರು 114 ಮೀಟರ್ ರೈಲು ಮಾರ್ಗವನ್ನು ಕಟ್‌ ಮಾಡಲಾಗಿದೆ. ಕದಿಯುವ ಉದ್ದೇಶದಿಂದ ಅದನ್ನು 57 ತುಂಡುಗಳಾಗಿ ಕತ್ತರಿಸಿದ್ದಾರೆ. ಸ್ಥಳೀಯ ಯುವಕರ ರೈಲ್ವೆ ಹಳಿಯ ಕಟ್ ಟ್ರ್ಯಾಕ್‌ಗಳತ್ತ ಹೋಗಿದ್ದಾಗ, ಈ ವಿಷಯ ಬೆಳಕಿಗೆ ಬಂದಿದೆ.

ಆದರೆ ಯಾಕೋ ಏನೋ ಸಿಕ್ಕಿಬೀಳಬಹುದೆಂಬ ಭಯದಿಂದ, ದುಷ್ಕರ್ಮಿಗಳು, 57 ರೈಲ್ವೇ ಹಳಿಯ ತುಂಡನ್ನು ಕಟ್ ಮಾಡಿದ್ದು ಮಾತ್ರವಲ್ಲದೇ, ಕಟಿಂಗ್‌ಗೆ ಬಳಸುವ 3 ಗ್ಯಾಸ್ ಕಟರ್‌ಗಳು, ಸಣ್ಣ ಗ್ಯಾಸ್ ಸಿಲಿಂಡರ್‌ಗಳು, 4 ದೊಡ್ಡ ಆಕ್ಸಿಜನ್ ಸಿಲಿಂಡರ್‌ಗಳು, ನಂಬರ್ ಇಲ್ಲದ ಹೀರೋ ಹೋಂಡಾ ಡಿಲಕ್ಸ್ ಮೋಟಾರ್‌ಸೈಕಲ್, ಹೆಚ್ಚಿನ ಸಂಖ್ಯೆಯ ಲೀವಿಂಗ್ ಟ್ರಾಕ್ ಕಟಿಂಗ್ ಉಪಕರಣಗಳು ಸೇರಿದಂತೆ ಎಲ್ಲವನ್ನೂ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ಗ್ಯಾಸ್ ಕಟ್ಟರ್ ಮೂಲಕ 114 ಮೀಟರ್ ರೈಲ್ವೆ ಹಳಿ ಕಟ್‌ ಮಾಡಿದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮತ್ತು ಆರ್‌ಪಿಎಫ್ ತಂಡ ಕೂಡಲೇ ಸ್ಥಳಕ್ಕೆ ಬಂದಿದ್ದಾರೆ. ಕತ್ತರಿಸಿದ್ದ ಕಬ್ಬಿಣದ ಹಳಿಗಳ 57 ತುಂಡುಗಳೊಂದಿಗೆ ಗ್ಯಾಸ್ ಕಟ್ಟರ್, ಆಕ್ಸಿಜನ್ ಸಿಲಿಂಡರ್, ಮೋಟಾರ್ ಸೈಕಲ್ ಹಾಗೂ ಕತ್ತರಿಸಲು ಬಳಸಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಘಟನೆಯ ಕುರಿತು ಝರಿಯಾ ಒಪಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಕಳ್ಳರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.