ನೇಪಾಳದಿಂದ ಭಾರತಕ್ಕೆ ಕಳ್ಳಸಾಗಾಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದ ʼಕೆಂಪು ಸುಂದರಿʼ; ಬೆಲೆ ಭರ್ಜರಿ 4.8 ಲಕ್ಷ ರೂ

smuggling-for-tomotoes-nepal-to-india worth 4.8 lakh

ಮದ್ಯ ಮತ್ತು ಹೆರಾಯಿನ್‌ ಕಳ್ಳಸಾಗಣೆ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಟೊಮೊಟೊ ಕಳ್ಳಸಾಗಣೆ ಬಗ್ಗೆ ಗೊತ್ತಿದೆಯೇ ನಿಮಗೆ? ಎಲ್ಲರಿಗೂ ತಿಳಿದಿರುವ ಹಾಗೆ ಹಣದುಬ್ಬರ ಹಾಗೂ ಬೆಲೆಏರಿಕೆಯಿಂದಾಗಿ ಟೊಮೊಟೋ ದರ ಏರಿಕೆಯಾಗಿದ್ದು, ಈಗ ದೇಶದಲ್ಲಿ ಟೊಮೆಟೋ ಕಳ್ಳಸಾಗಣೆ ಕೂಡಾ ಪ್ರಾರಂಭವಾಗಿದೆ. ಹೌದು, ಭಾರತ-ನೇಪಾಳ ಗಡಿಯಲ್ಲಿ ಪೊಲೀಸರು ಮತ್ತು ಸಶಸ್ತ್ರ ಸೀಮಾಬಲ್‌ ಸಿಬ್ಬಂದಿ ಈ ಟೊಮೆಟೋ ಕಳ್ಳಸಾಗಾಣಿಕೆಯನ್ನು ತಡೆದಿದ್ದಾರೆ. ನೇಪಾಳದಿಂದ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ ಮೂರು ಟನ್‌ ಟೊಮೆಟೋವನ್ನು ಯೋಧರು ವಶಪಡಿಸಿಕೊಂಡಿದ್ದಾರೆ. ಅಂದ ಹಾಗೆ ಇವುಗಳ ಬೆಲೆ ಬರೋಬ್ಬರಿ ಲಕ್ಷಗಳಲ್ಲಿ ಇದೆ.
ಇವುಗಳನ್ನು ನಾಶ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ವಿಚಿತ್ರವೆಂದರೆ ಈ ಟೊಮೆಟೋ ಇಟ್ಟ ಬಾಕ್ಸ್‌ ಈಗ ನಾಪತ್ತೆಯಾಗಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.

ನಿಚ್ಲಾಲ್‌ನ ಎಸ್‌ಎಚ್‌ಒ ಆನಂದ್ ಕುಮಾರ್ ಗುಪ್ತಾ ಪ್ರಕಾರ, ಈ ಟೊಮೆಟೊ ಸರಕುಗಳನ್ನು ಜುಲೈ 8 ರಂದು ಗಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಲಕ್ನೋದ ಕಸ್ಟಮ್ಸ್ ಕಮಿಷನರ್ ಆರತಿ ಸಕ್ಸೇನಾ ಅವರು ಭಾರತ-ನೇಪಾಸ್ ಗಡಿಯಲ್ಲಿ ನಿಯೋಜಿಸಲಾದ 6 ಅಧಿಕಾರಿಗಳನ್ನು ಹೆಚ್ಚಿನ ತನಿಖೆಗಾಗಿ ಪ್ರಧಾನ ಕಚೇರಿಗೆ ಕರೆಸಲಾಗಿದೆ ಎಂದು ಹೇಳಿದ್ದಾರೆ. ವಶಪಡಿಸಿಕೊಂಡ ಸರಕುಗಳ ಮೌಲ್ಯ ಸುಮಾರು 4.8 ಲಕ್ಷ ರೂ. ವಿಶೇಷವೆಂದರೆ ವಶಪಡಿಸಿಕೊಂಡ ಟೊಮೆಟೊಗಳನ್ನು ನಾಶಪಡಿಸಲು ಕಸ್ಟಮ್ ಇಲಾಖೆಗೆ ನೀಡಲಾಗಿದೆ. ಆದರೆ ಈಗ ವಶಪಡಿಸಿಕೊಂಡ ಟೊಮೇಟೊ ಎಲ್ಲಿದೆ ಎಂಬುದು ತಿಳಿದುಬಂದಿಲ್ಲ. ಮಾಹಿತಿಯ ಪ್ರಕಾರ, ಕಸ್ಟಮ್ಸ್ ಅಧಿಕಾರಿಗಳು ಲಂಚ ಪಡೆದು ಟೊಮೇಟೊ ಸರಕನ್ನು ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಭಾರತದಲ್ಲಿ ಟೊಮೆಟೊ ತುಂಬಾ ದುಬಾರಿಯಾಗಿದ್ದು, ಜನಸಾಮಾನ್ಯರಿಗೆ ಟೊಮೆಟೋ ಕೈಗೆಟಕುದ ವಸ್ತುವಾಗಿದ್ದಾಳೆ. ಟೊಮೆಟೊ ಬೆಲೆ 150 ರೂ.ನಿಂದ 260 ಕೆಜಿಗೆ ಏರಿಕೆಯಾಗಿದೆ. ಇದೇ ಕಾರಣಕ್ಕೆ ನೇಪಾಳದಿಂದ ಭಾರತಕ್ಕೆ ಟೊಮೆಟೊ ಕಳ್ಳಸಾಗಣೆಯಾಗುತ್ತಿದೆ. ವರ್ತಕರು ತೆರಿಗೆ ಕಟ್ಟದೆ ಗುಟ್ಟಾಗಿ ಭಾರತಕ್ಕೆ ಟೊಮೆಟೊ ತರುತ್ತಿದ್ದು, ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ತೆರಿಗೆ ಪಾವತಿಸದೆ ಖರೀದಿಸಿದರೆ ಆಭರಣ, ವಿದೇಶಿ ಕರೆನ್ಸಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಇದೆ.

Leave A Reply

Your email address will not be published.