Crime News: ನೀಚ ಕೃತ್ಯ, ಡ್ರಗ್ಸ್‌ಗೆ ಹಣ ನೀಡದ ತಾಯಿಗೆ ಚಾಕು ಇರಿದು, ಮಹಡಿಯಿಂದ ಎಸೆದ ಪಾಪಿ ಮಗ!

son-stabbed-the-mother-and-threw-it-from-roof and set a fire of cylinder at home

ಮಾದಕದ್ರವ್ಯಕ್ಕೆ ಅಮ್ಮ ಹಣ ನೀಡಿಲ್ಲವೆಂಬ ಕಾರಣದಿಂದ ಮಗನೋರ್ವ ತಾಯಿಗೆ ಚಾಕು ಇರಿದು ಬಳಿಕ ಮಹಡಿಯಿಂದ ಕೆಳಗೆ ಎಸೆದಿರುವ ಘಟನೆಯೊಂದು ಲಕ್ನೋದಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ತಾಯಿಯನ್ನು ಎಸೆದ ಬಳಿಕ ಆತ ಅಡುಗೆ ಕೋಣೆಗೆ ಬಂದು ಸಿಲಿಂಡರ್‌ ಒಪನ್‌ ಮಾಡಿದ್ದು, ಇದರಿಂದ ಸಿಲಿಂಡರ್‌ ಸ್ಫೋಟಗೊಂಡು ಸಹೋದರಿ ರೂಬಿ ದಾರುಣವಾಗಿ ಮೃತಪಟ್ಟಿದ್ದಾಳೆ. ಮನೆಗೆ ಬೆಂಕಿ ಹತ್ತಿಕೊಂಡಿದ್ದನ್ನು ಗಮನಿಸಿದ ಆರೋಪಿ ಕೂಡಲೇ ಟೆರೇಸ್‌ ಮೇಲೆ ಓಡಿ ಹೋಗಿದ್ದಾನೆ. ಕೂಡಲೇ ಘಟನೆಯ ಮಾಹಿತಿ ಅರಿತ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ.

ಸತತ ಮೂರು ಗಂಟೆಗಳ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆರೋಪಿ ಸಲ್ಮಾನ್‌ ಮನೆಯ ಮಹಡಿಯ ಮೇಲಿನಿಂದ ಜಿಗಿಯುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದು, ಪೊಲೀಸರು ಆತನ ಮನವೊಲಿಕೆಗೆ ಪ್ರಯತ್ನಿಸಿದ್ದಾದರೂ ಆತ ಕೆಳಗಿಳಿಯಲಿಲ್ಲ. ಆದರೆ ಆರೋಪಿ ಮಧ್ಯಾಹ್ನ ಸುಮಾರು 1.30ರ ಸಮಯಕ್ಕೆ ಮನೆಯ ಛಾವಣಿಯಿಂದ ಜಿಗಿದಿದ್ದಾನೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆರೋಪಿ ಸಲ್ಮಾನ್‌ನನ್ನು ಸಿವಿಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತನ ತಾಯಿ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಗುಡ್ಡು ಎಂಬವವರ ಪತ್ನಿ ಮೆಹರುನಿಶಾ, ಮಗಳು ರೂಬಿ ಮತ್ತು ಸಲ್ಮಾನ್‌ ಇವರು ಮಾತೃ ಮೊಹಲ್ಲಾದಲ್ಲಿ ವಾಸಿಸುತ್ತಿದ್ದು, ಆದರೆ ಗುಡ್ಡು ಅವರ ಮಗ ಸಲ್ಮಾನ್‌ ಮಾದಕ ವ್ಯಸನಿಯಾಗಿದ್ದು. ರಾತ್ರಿ ಸುಮಾರು ಹತ್ತು ಗಂಟೆಗೆ ತನ್ನ ತಾಯಿ ಬಳಿ ಡ್ರಗ್ಸ್‌ಗಾಗಿ ದುಡ್ಡು ಕೇಳಿದ್ದಾನೆ. ಆದರೆ ತಾಯಿ ಮೆಹರುನಿಶಾ ಹಣ ನೀಡಲು ನಿರಾಕರಿಸಿದಾಗಿ ಆರೋಪಿ ಸಲ್ಮಾನ್‌ ಮನೆಯಲ್ಲಿ ಗಲಾಟೆ ಮಾಡಿದ್ದಾನೆ. ಕೋಪದಲ್ಲಿ ಸಲ್ಮಾನ್‌ ಮೊದಲು ತಾಯಿಗೆ ಥಳಿಸಿದ್ದಾನೆ, ನಂತರ ತಾಯಿಗೆ ಚಾಕುವಿನಿಂದ ಐದು ಬಾರಿ ಇರಿದಿದ್ದಾನೆ. ಈ ವೇಳೆ ಸಹೋದರಿ ವಿರೋಧ ವ್ಯಕ್ತಪಡಿಸಿದಾಗ ಆಕೆಗೂ ಥಳಿಸಿದ್ದಾನೆ. ನಂತರ ಆತ ತಾಯಿಯನ್ನು ಮೊದಲ ಮಹಡಿಯಿಂದ ಕೆಳಗೆ ಎಸೆದಿದ್ದಾನೆ.

ಬಳಿಕ ಅಡುಗೆ ಮನೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ಗೆ ಬೆಂಕಿ ಹಚ್ಚಿದ್ದು, ಸಿಲಿಂಡರ್‌ ಸ್ಫೋಟಗೊಂಡು ಮನೆ ಪೂರ್ತಿ ಬೆಂಕಿಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಸಹೋದರಿ ರೂಬಿ ಸಾವನ್ನಪ್ಪಿದ್ದಾಳೆ. ಮನೆಯಲ್ಲಾದ ಸ್ಫೋಟ ಹಾಗೂ ಕಿರುಚಾಟ ಕೇಳಿ ಅಕ್ಕಪಕ್ಕದ ಜನರು ಬಂದು ನೋಡಿದಾಗ, ಮೊಹರುನಿಶಾ ರಸ್ತೆಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರು ಮಹಿಳೆಯನ್ನು ಸಿವಿಲ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಅನಂತರ ಆರೋಪಿ ಮನೆಯ ಮೇಲ್ಛಾವಣಿ ಮೇಲೆ ಓಡಿದ್ದು, ಪೊಲೀಸರ ಮನವೊಲಿಕೆಗೂ ಜಗ್ಗದೆ ಮೇಲಿನಿಂದ ಕೆಳಗೆ ಜಿಗಿದಿದ್ದಾನೆ. ತೀವ್ರ ಗಾಯಗೊಂಡ ಆತನನ್ನು ಕೂಡಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

Leave A Reply

Your email address will not be published.