Actor Ravindra: ಖ್ಯಾತ ನಟ ರವೀಂದ್ರ ಮಹಾಜನಿ ಆತ್ಮಹತ್ಯೆ!

actor ravindra mahajani found dead in pune

Actor Ravindra: ಮರಾಠಿ ಚಿತ್ರರಂಗದ ಖ್ಯಾತ ನಟ ರವೀಂದ್ರ ಮಹಾಜನಿ(77) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದಾಗ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮನೆಗೆ ಬಂದ ಪೊಲೀಸರಿಗೆ ನಟ ರವೀಂದ್ರ (Actor Ravindra) ಮಹಾಜನಿ ಅವರು ಶವವಾಗಿ ಪತ್ತೆಯಾಗಿ ಕಂಡಿದ್ದಾರೆ.

ಮೂರು ದಿನಗಳ ಹಿಂದೆ ಮಹಾಜನಿ ಮೃತಪಟ್ಟಿರಬೇಕು ಎಂದು ವೈದ್ಯರು ಹೇಳಿದ್ದಾರೆ. ಫ್ಲಾಟ್‌ನಿಂದ ವಾಸನೆ ಬರಲಾರಂಭಿಸಿದಾಗ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮನೆಯ ಬಾಗಿಲು ಒಡೆದು ನೋಡಿದಾಗ ಮಹಾಜನಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ರವೀಂದ್ರ ಅವರು 70 ರಿಂದ 80 ರ ದಶಕದ ನಡುವೆ ಅನೇಕ ಅದ್ಭುತ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಕೆರಿಯರ್‌ನ ಆರಂಭದಲ್ಲಿ ಅವರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರು. ಅವರು ತಮ್ಮ ಸ್ವಂತ ಖರ್ಚಿಗೆ ಟ್ಯಾಕ್ಸಿ ಕೂಡ ಓಡಿಸಬೇಕಾದ ಕಾಲವೊಂದಿತ್ತು. ರವೀಂದ್ರ ಮಹಾಜನಿ ‘ದೇವತಾ ಗ್ರಾಮೀಣ’ ಚಿತ್ರವನ್ನು ಜನ ತುಂಬಾ ಇಷ್ಟಪಟ್ಟ ಸಿನಿಮಾವಾಗಿತ್ತು. ಇದಲ್ಲದೆ, ಮಹಾಜನಿ ಅವರು ‘ಮುಂಬೈಚಾ ಫೌಜ್ದರ್’, ‘ಜುಂಜ್’ ಮತ್ತು ‘ಕಲತ್ ನಕಲತ್’ ಚಿತ್ರಗಳಲ್ಲಿ ಅದ್ಭುತ ನಟನೆಯನ್ನು ಮಾಡಿದ್ದಾರೆ.

ಗಶ್ಮೀರ್ ಮಹಾಜನಿ ಮರಾಠಿ ಉದ್ಯಮದ ಶ್ರೇಷ್ಠ ನಟ. ಅವರು ಸ್ಟಾಪ್ ಪ್ಲಸ್ ಧಾರಾವಾಹಿ ಪ್ರಸಾರವಾಗುತ್ತಿದ್ದ ಇಮ್ಲಿ ಎಂಬ ಸೀರಿಯಲ್ ನಲ್ಲಿ ನಟಿಸಿದ್ದು, ಅದರಲ್ಲಿ ಸುಂಬುಲ್ ತೌಕೀರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ, ಝಲಕ್ ದಿಖ್ಲಾ ಜಾ-10 ಎಂಬ ರಿಯಾಲಿಟಿ ಶೋನಲ್ಲಿ ಗಶ್ಮೀರ್ ತನ್ನ ಅದ್ಭುತ ನೃತ್ಯದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ನಟನೆಯ ಹೊರತಾಗಿ, ಗಶ್ಮೀರ್ ನೃತ್ಯ ಸಂಯೋಜಕ ಮತ್ತು ರಂಗಭೂಮಿ ನಿರ್ದೇಶಕರೂ ಆಗಿದ್ದಾರೆ. ಅವರು ಕ್ಯಾರಿ ಆನ್ ಮರಾಠಾ, ದುನಗಿರಿ ಕಾ ರಾಜ್ ಮುಂತಾದ ಮರಾಠಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

 

ಇದನ್ನು ಓದಿ: ಪಣೋಲಿಬೈಲು ಸೇವಾದರಗಳ ಹೆಚ್ಚಳ ,ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆ : ಕಾರ್ಯನಿರ್ವಹಣಾಧಿಕಾರಿ ಸ್ಪಷ್ಟನೆ 

Leave A Reply

Your email address will not be published.