Social Media Viral: ಮೊಸಳೆಯ ದಾಳಿಗೆ ಹೆದರದ ಕೋಳಿ! ಹೇಗೆ ಬಚಾವ್ ಆಯಿತು? ಇಲ್ಲಿದೆ ವೀಡಿಯೋ!!!

Chicken not afraid of crocodile attack video viral in social media

Social Media Viral: ದಿನಂಪ್ರತಿ ಒಂದಲ್ಲ ಒಂದು ವಿಡಿಯೋ(Video) ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video)ಆಗಿ ಸಂಚಲನ ಮೂಡಿಸುತ್ತವೆ. ಅವುಗಳಲ್ಲಿ ಕೆಲವು ನಮ್ಮ ಮೊಗದಲ್ಲಿ ಹಾಸ್ಯ ತರಿಸಿದರೆ,ಮತ್ತೆ ಕೆಲವು ನಮ್ಮ ಕಣ್ಣ ಮುಂದೆ ಜೀವನದ ಸ್ವಾರಸ್ಯಕರ ಸಂಗತಿಯ ಕುರಿತ ವಿಚಾರಗಳನ್ನೂ ಅನಾವರಣ ಮಾಡುತ್ತದೆ. ಇದೀಗ, ವೈರಲ್ ಆಗುತ್ತಿರುವ ಫೋಟೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ದಟ್ಟ ಅರಣ್ಯದ ನಡುವೆ ನೀವು ನಿಂತರೆ ಎಲ್ಲ ದಿಕ್ಕಿನಲ್ಲೂ ಆಕ್ರಮಣಕಾರಿ ಪ್ರಾಣಿಗಳು ಎದುರಾದರೆ, ಹೇಗಿರಬಹುದು ನಿಮ್ಮ ಅವಸ್ಥೆ? ಮೈ ಜುಮ್ ಎನ್ನುವುದರ ಜೊತೆಗೆ ಇಲ್ಲಿಂದ ಒಮ್ಮೆ ತಪ್ಪಿಸಿಕೊಂಡು ಹೋದರೆ ಸಾಕಪ್ಪ ಎನಿಸಿದರು ಕೂಡ ತಲೆಗೆ ಏನು ತೋಚದೇ ಸ್ತಬ್ಧವಾಗಿ ಇನ್ನೇನು ಕ್ರೂರ ಮೃಗ ನಿಮ್ಮ ಮೇಲೆ ದಾಳಿ ಮಾಡಿಬಿಡುತ್ತೆ ಎನ್ನುವಾಗ ಕಾಲಿಗೆ ಬುದ್ದಿ ಕೊಟ್ಟು ಎದ್ನೋ ಬಿದ್ನೋ ಎಂದುಕೊಂಡು ಬಡಪಾಯಿ ಜೀವನ ಜೀವ ಉಳಿದರೆ ಸಾಕು ಎಂದುಕೊಂಡು ಓಡುವುದು ಸಹಜ .ಆದರೆ, ಇದೆ ರೀತಿಯ ಪರಿಸ್ಥಿತಿ ಪ್ರಾಣಿ ಪಕ್ಷಿಗಳಿಗೆ ಎದುರಾದರೆ,ಅವು ತೋರುವ ಬುದ್ಧಿವಂತಿಕೆಗೆ ಮನುಷ್ಯ ಬೆರಗಾಗಲೆಬೇಕು. ಈ ರೀತಿಯ ಅಚ್ಚರಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ.

ಕೋಳಿ ಚಾಣಾಕ್ಷತನದಿಂದ ತನ್ನ ಸುತ್ತ ನೆರೆದಿರುವ ಹಸಿದ ಮೊಸಳೆಗಳನ್ನ ದಾಟಿ ಬಚಾವ್ ಆದ ವೀಡಿಯೋ ನೋಡುಗರ ಮೈ ಜುಮ್ ಎನಿಸುವುದಂತು ಸುಳ್ಳಲ್ಲ. ನಸೀಬು ಚೆನ್ನಾಗಿದ್ದರೆ ಸಾವನ್ನೇ ಗೆಲ್ಲಬಹುದು ಅನ್ನೋದನ್ನ ಈ ವೀಡಿಯೊ ತೋರಿಸಿಕೊಡುತ್ತೆ. ವೈರಲ್ ಆಗಿರುವ ವಿಡಿಯೋದಲ್ಲಿ ಮೊಸಳೆಗಳು ತುಂಬಿರುವ ಸ್ಥಳದಲ್ಲಿ ಕೋಳಿಯೊಂದು ಕಾಣಿಸಿಕೊಂಡಿದೆ. ಎಲ್ಲ ಆಕ್ರಮಣಕಾರಿ ಮೊಸಳೆಗಳ ನಡುವೆಯೂ ಕೋಳಿ ಎಲ್ಲಾ ಮೊಸಳೆಗಳನ್ನು ದಾಟಿ ಹೋಗುವ ಪ್ರಯತ್ನ ಮಾಡಿದೆ. ಈ ವೇಳೆ ಸರೀಸೃಪಗಳು ಕೋಳಿಗೆ ಕಚ್ಚಲು ಮುಂದಾಗಿದ್ದು, ಆದರೆ, ಕೋಳಿ ಮಾತ್ರ ನಾನು ಯಾವುದಕ್ಕೂ ಕಮ್ಮಿಯಿಲ್ಲ ಎಂದು ತನ್ನ ಜಾಣ ನಡೆಯಿಂದ ಮೊಸಳೆಗಳ ಮೇಲೆಯೇ ಕೋಳಿ ಹಾರಿಕೊಂಡು ಮುಂದೆ ಸಾಗಿದೆ.

ಹೀಗೆ ಒಂದರ ಮೇಲೊಂದರಂತೆ ದಾಟುವಾಗ ಕೂಡ ಮೊಸಳೆಗಳು ಕಚ್ಚಲು ಪ್ರಯತ್ನಿಸಿದ್ದು, ಆಗ ಮತ್ತೊಂದು ಮೊಸಳೆಯ ಮೇಲೆ ಕೋಳಿ ಹಾರಿದೆ. ಹೀಗೆ ಮೊಸಳೆಗಳ ಮೇಲೆಯೇ ಹಾರುತ್ತಾ ತನ್ನ ಜೀವ ರಕ್ಷಣೆ ಮಾಡಿಕೊಂಡಿದೆ. ಯಾವುದೇ ಜೀವಿಯಾದರೂ ಅಪಾಯ ಎದುರಾದಾಗ ತಮ್ಮ ಜೀವ ರಕ್ಷಣೆಗೆ ಎಂತಹ ದುಸ್ಸಾಹಸ ಮಾಡಲು ಸಿದ್ಧವಾಗಿರುತ್ತದೆ. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

 

 

ಇದನ್ನು ಓದಿ: ವ್ಯಕ್ತಿಯೋರ್ವನ ಬುರುಡೆಗೆ ಹೊಕ್ಕ 2 ಇಂಚು ಉದ್ದದ ಮೊಳೆ! ವೈದ್ಯರು ಇದನ್ನು ಯಾವ ರೀತಿ ತೆಗೆದ್ರು ಗೊತ್ತೇ? 

Leave A Reply

Your email address will not be published.