Death news: ಉದ್ಯೋಗ ಅರಸಿ ಬಂದ ಯುವಕರು ಮಲಗಿದ್ದಲ್ಲೇ ಸಾವು!

Death news Two people came looking for job died while they were sleeping

ಹಾಸನ: ಕಾರ್ಮಿಕರೀರ್ವರು ಮಲಗಿದ್ದಲ್ಲೇ ಸಾವು ಕಂಡ ಘಟನೆಯೊಂದು ಹಾಸನ ತಾಲೂಕಿನ ಹನುಮಂತಪುರದಲ್ಲಿ ನಡೆದಿದೆ

ನಬಾಬ್(24), ರಾಮ್‌ಸಂಜೀವನ್‌ (30) ಎಂಬೀರ್ವರು ಮೃತ ಯುವಕರು. ಇವರು ಉತ್ತರ ಪ್ರದೇಶದವರು. ಉದ್ಯೋಗಕ್ಕೆಂದು ಹಾಸನಕ್ಕೆ ಬಂದ ಇವರಿಬ್ಬರು ಎರಡು ದಿನ ಕೆಲಸ ಮಾಡಿದ್ದಾರೆ. ನಂತರ ಜ್ವರ ಬಂದು ಕೆಲಸಕ್ಕೆ ರಜೆ ಮಾಡಿದ್ದರು. ಹಾಗಾಗಿ ಆಸ್ಪತ್ರೆಗೆ ಹೋಗಿದ್ದಾರೆ, ಔಷಧಿ ತೆಗೆದುಕೊಂಡು ಮಲಗಿದವರು ನಿಗೂಢವಾಗಿ ಮರಣಹೊಂದಿದ್ದಾರೆ.

ಇವರೀರ್ವರು ಬುಧವಾರದಂದು ರಾತ್ರಿ ಊಟ ಮುಗಿಸಿ ರೂಮಿನಲ್ಲಿ ಮಲಗಿದ್ದರು. ಆದರೆ ಶುಕ್ರವಾರದವರೆಗೆ ಕೊಠಡಿ ಬಾಗಿಲು ತೆಗೆದಿರಲಿಲ್ಲ. ಇದರಿಂದ ಸಂಶಯಗೊಂಡ ಇವರಿಗೆ ಬಾಡಿಗೆ ಮನೆ ನೀಡಿದ ಮನೆ ಮಾಲೀಕ ಮಹೇಶ್‌ ಎಂಬುವವರು ಬಾಗಿಲು ಒಡೆದಿದ್ದಾರೆ. ಆದರೆ ಇವರು ಕಂಡಾಗ ಯುವಕರು ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದು ಕಂಡು ಬಂದಿದೆ. ಅಂದ ಹಾಗೆ ಇಬ್ಬರ ಮೂಗಿನಲ್ಲೂ ರಕ್ತ ಕಂಡು ಬಂದಿದ್ದು, ಸಾವಿಗೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ.

ಮೃತದೇಹವನ್ನು ಶವಾಗಾರಕ್ಕೆ ಕಳುಹಿಸಲಾಗಿದ್ದು, ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

 

ಇದನ್ನು ಓದಿ: Social Media Viral: ಮೊಸಳೆಯ ದಾಳಿಗೆ ಹೆದರದ ಕೋಳಿ! ಹೇಗೆ ಬಚಾವ್ ಆಯಿತು? ಇಲ್ಲಿದೆ ವೀಡಿಯೋ!!!

Leave A Reply

Your email address will not be published.