Intresting news: ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸುವ ಮುನ್ನ ಎಚ್ಚರ; ನಿಮ್ಮ ಖಾತೆ ಖಾಲಿ ಆಗಿಬಿಡಬಹುದು,ಹುಷಾರ್!

Intresting news Be careful before applying for government scheme benefits

ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಚುನಾವಣಾ ಪೂರ್ವ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹರಸಾಹಸ ಪಡುತ್ತಿದೆ. ಈಗಾಗಲೇ ಗೃಹ ಜ್ಯೋತಿ, ಶಕ್ತಿ, ಯೋಜನೆಗೆ ಚಾಲನೆ ನೀಡಲಾಗಿದ್ದು, ಇದೀಗ ಅನ್ನ ಭಾಗ್ಯ ಅಕ್ಕಿ ಹಣ ವರ್ಗಾವಣೆಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಸರಕಾರದ ಭರವಸೆಯ ಅನುಸಾರ 200 ಯೂನಿಟ್ ವಿದ್ಯುತ್ ಫ್ರೀ ಎಂದು ಖುಷಿ ಪಡುತ್ತಿದ್ದ ಸಾರ್ವಜನಿಕರಿಗೆ ಒಂದರ ಮೇಲೊಂದು ಹೊಡೆತ ಬೀಳುತ್ತಿದೆ.

ಜುಲೈ ತಿಂಗಳ ವಿದ್ಯುತ್ ಬಳಕೆಯ ಬಿಲ್ ಝೀರೋ ಬರಬೇಕು ಎಂದಾದರೆ ನೀವು ಮೊದಲು ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ನೋಂದಣಿಗೆ ಜುಲೈ 26 ಅಥವಾ 27 ರ ಒಳಗೆ ಅಂತಿಮ ಗಡುವು ನೀಡಲಾಗಿದೆ. ಈ ದಿನಾಂಕದೊಳಗೆ ನೀವು ನೋಂದಣಿ ಮಾಡದಿದ್ದರೆ ಎಂದಿನಂತೆ ರೆಗ್ಯೂಲರ್ ಬಿಲ್ ಬರಲಿದ್ದು, ಹೀಗಾಗಿ, ಜುಲೈ 27 ರೊಳಗೆ ಅರ್ಜಿ ಸಲ್ಲಿಸಿ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭ ಗ್ರಾಹಕರು ಹೆಚ್ಚು ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅವಶ್ಯಕ. ರಾಜ್ಯದಲ್ಲಿ ಇದೀಗ ಸೈಬರ್ ಕಳ್ಳರ ಹಾವಳಿ ಹೆಚ್ಚುತ್ತಿದ್ದು, ನಕಲಿ ಆ್ಯಪ್ ಗಳ ಮುಖಾಂತರ ನಿಮ್ಮ ಖಾಸಗಿ ಮಾಹಿತಿ ಕಳ್ಳತನ ಮಾಡಿ ನಿಮ್ಮ ಖಾತೆಯ ಹಣವನ್ನು ಖೋತಾ ಮಾಡಿದರು ಅಚ್ಚರಿಯಿಲ್ಲ.
ಎಲ್ಲರಿಗೂ ಗೊತ್ತಿರುವ ಹಾಗೆ ಸರಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಹೀಗೆ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸುವಾಗ ಅನೇಕ ನಕಲಿ ಅಪ್ಲಿಕೇಷನ್ ಗಳು ಕಾಣಸಿಗುತ್ತವೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅನೇಕ ನಕಲಿ ಅಪ್ಲಿಕೇಷನ್ ಗಳು ತಲೆ ಎತ್ತಿದ್ದು, ನೀವೇನಾದರೂ ಅಪ್ಪಿ ತಪ್ಪಿ ಈ ಲಿಂಕ್ ಒತ್ತಿ ನಿಮ್ಮ ಖಾಸಗಿ ಮಾಹಿತಿ ನೀಡಿ ಬಿಟ್ಟರೆ, ನಿಮ್ಮ ಖಾತೆಯ ಹಣ ಖಾಲಿ ಆಗೋದಂತು ಖಚಿತ.

ಗೃಹಲಕ್ಷ್ಮಿ ಹೆಸರಿನಲ್ಲಿ ಗೃಹ ಲಕ್ಷ್ಮಿ ಯೋಜನಾ ಆ್ಯಪ್ ,ಕರ್ನಾಟಕ ಲಕ್ಷ್ಮಿ ಯೋಜನಾ ಆ್ಯಪ್, ಗೃಹಲಕ್ಷ್ಮಿ ಸ್ಕೀಮ್ ಆ್ಯಪ್, ಗೃಹಲಕ್ಷ್ಮಿ ಯೋಜನೆ ಅಪ್ಲಿಕೇಶನ್ ಆ್ಯಪ್ ತಲೆ ಎತ್ತಿದ್ದು, ನಿಮ್ಮ ಖಾಸಗಿ ಮಾಹಿತಿ ಜೊತೆಗೆ ನಿಮ್ಮ ಹಣ ಉಳಿಸಲು ನೀವು ಎಚ್ಚರಿಕೆ ವಹಿಸುವುದು ಅಗತ್ಯ.ನೀವು ಸಿಕ್ಕಿದ ಅಪ್ಲಿಕೇಷನ್ ಇಲ್ಲವೇ ಯಾವುದೋ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಬದಲಿಗೆ ನೇರವಾಗಿ ಸರಕಾರದ ಸೇವಾ ಸಿಂಧು ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸುವುದು ಉತ್ತಮ.

 

ಇದನ್ನು ಓದಿ: Tulsi Remedy: ತುಳಸಿ ಗಿಡದಿಂದ ಜಸ್ಟ್ ಈ ಒಂದು ಕೆಲಸ ಮಾಡಿ, ಅದೃಷ್ಟ ನಿಮ್ಮ ಮನೆಬಾಗಿಲಲ್ಲಿ ಇರುತ್ತೆ!! 

Leave A Reply

Your email address will not be published.