chikkmagaluru: ಕಾರು-ಬೈಕ್‌ ನಡುವೆ ಭೀಕರ ಅಪಘಾತ; ಬೈಕ್‌ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವು

Latest Karnataka accident news chikkmagaluru car bike collided two died on the spot

chikkmagaluru: ಕಾರು ಮತ್ತು ಬೈಕ್‌ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಸವಾರರಿಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತರಾಗಿರುವ ಘಟನೆಯೊಂದು ಚಿಕ್ಕಮಗಳೂರು(chikkmagaluru) ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಹೊಸದುರ್ಗ ದ ಲೋಹಿತ್‌ (33), ನಾಗರಾಜ್‌ (35) ಎಂದು ಗುರುತಿಸಲಾಗಿದೆ.

ಹಾಗೆನೇ ಕಾರಿನಲ್ಲಿದ್ದ ಇದ್ದ ಇನ್ನೋರ್ವ ಮಹಿಳೆ ಗಿರಿಜಾ ಶಂಕರ್‌ ಎಂಬುವವರಿಗೆ ಕೂಡಾ ಗಂಭೀರ ಗಾಯಗಳಾಗಿದ್ದಾಗಿ ವರದಿ ಬಂದಿದೆ. ಈ ಘಟನೆ ಕಡೂರು ತಾಲೂಕಿನ ಕಂಸಾಗರ ಗ್ರಾಮದ ಸಮೀಪ ಶುಕ್ರವಾರ ರಾತ್ರಿ ನಡೆದಿದೆ. ಚಿಕ್ಕಮಗಳೂರಿನಿಂದ ಬೈಕ್‌ ಕಡೂರು ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಭೀಕರ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ಎಸ್ಪಿ, ಎಎಸ್ಪಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಡೂರು ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Leave A Reply

Your email address will not be published.