Aadhar Card Update: ಆಧಾರ್ ಕಾರ್ಡ್ ಬಳಸುವಾಗ ಈ ತಪ್ಪನ್ನು ಅಪ್ಪಿ ತಪ್ಪಿಯೂ ಮಾಡದಿರಿ!

Latest news Aadhar Card Update important information for Aadhaar card holders

Aadhar Card Update: ಭಾರತದ ನಾಗರಿಕರಿಗೆ ಆಧಾರ್ ಎನ್ನುವ ವಿಶೇಷ ಗುರುತಿನ ಸಂಖ್ಯೆ ನೀಡುವ ಉದ್ದೇಶದಿಂದ ಯುಐಡಿಎಐ ಇದನ್ನು ಸ್ಥಾಪಿಸಿದ್ದು, ಹೀಗಾಗಿ ಯುಐಡಿ ಮೂಲಕ ಅಸಲಿ ಹಾಗೂ ನಕಲಿ ಗುರುತನ್ನು ಸುಲಭವಾಗಿ ಪರಿಶೀಲನೆ ಮಾಡಬಹುದಾಗಿದೆ. ಆಧಾರ್ 12-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು, ಇದನ್ನು ಗುರುತಿನ ಉದ್ದೇಶಗಳಿಗಾಗಿ ಭಾರತ ಸರ್ಕಾರವು ಹೊರತಂದಿದ್ದು ತಿಳಿದಿರುವ ವಿಚಾರವೇ!!.. ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ.

ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಅಷ್ಟೆ ಏಕೆ ಇಂದು ಯಾವುದೇ ಪ್ರಯೋಜನ ಪಡೆಯಬೇಕಾದರು ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ. ಸಿಮ್ ಕಾರ್ಡ್, ಬ್ಯಾಂಕಿನಲ್ಲಿ ಖಾತೆ ತೆರೆಯುವುದು ಸೇರಿದಂತೆ ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ಈ ನಡುವೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಾಗ ಇಲ್ಲವೇ ಯಾವುದೇ ಸಂದರ್ಭದಲ್ಲಿಯೂ ಈ ಕೆಲ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಅಪ್ಪಿ ತಪ್ಪಿಯೂ ಆಧಾರ್ ಕಾರ್ಡ್ ಹೊಂದಿರುವವರು ಈ ತಪ್ಪುಗಳನ್ನು ಮಾಡದಿರಿ.
ನಿಮ್ಮ ಒರಿಜಿನಲ್ ಆಧಾರ್ ಕಾರ್ಡ್ ಇಲ್ಲವೇ ಅದರ ಝೆರಾಕ್ಸ್ ಕಾಪಿಯನ್ನು ಯಾರಿಗೂ ನೀಡಬೇಡಿ. ನೀವು ಮತ್ತೊಬ್ಬರಿಗೆ ನಿಮ್ಮ ಆಧಾರ್ ಕಾರ್ಡ್ ಕೊಟ್ಟಾಗ ನಿಮ್ಮ ಮಾಹಿತಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ, ಯಾರಿಗಾದರೂ ನೀಡಲೆ ಬೇಕಾದ ಅನಿವಾರ್ಯತೆ ಬಂದರೆ ಝೆರಾಕ್ಸ್ ಕಾಪಿ ಕೊಡುವುದು ಒಳ್ಳೆಯದು.

ಹೆಚ್ಚಿನವರು ತಮ್ಮ ಇ-ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು ತಮ್ಮ ಕಚೇರಿ ಕಂಪ್ಯೂಟರ್, ಸ್ನೇಹಿತರ ಕಂಪ್ಯೂಟರ್ ಅಥವಾ ಸೈಬರ್ ಕೆಫೆ ಬಳಕೆ ಮಾಡುವುದು ಸಹಜ. ಆದರೆ, ಹೀಗೆ ಮಾಡುವುದರಿಂದ ನಿಮ್ಮ ಇ-ಆಧಾರ್ ಮತ್ತು ಇತರ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇದರ ಜೊತೆಗೆ, ಇ-ಆಧಾರ್ ಅನ್ನು ಬೇರೆ ಯಾರು ಬೇಕಾದರೂ ಡೌನ್ಲೋಡ್ ಮಾಡಬಹುದಾಗಿದ್ದು, ಇದರಿಂದ ನಿಮ್ಮ ಆಧಾರ್ ದುರುಪಯೋಗ ಪಡಿಸಿಕೊಳ್ಳುವ ಸಂಭವವಿದೆ.

ಆಧಾರ್ ಜೆರಾಕ್ಸ್ ಮಾಡುವಾಗ ಕೂಡ ನಕಲನ್ನು ದುರುಪಯೋಗ ಪಡಿಸಿಕೊಳ್ಳುವ ಸಂಭವವಿದೆ. ಹೀಗಾಗಿ, ಝೆರಾಕ್ಸ್ ಮಾಡಿದ ಪ್ರತಿಯ ಮೇಲೆ ಯಾವ ಕೆಲಸಕ್ಕಾಗಿ ನೀಡುತ್ತಿದ್ದೀರಿ ಎಂಬ ಮಾಹಿತಿಯನ್ನು ಅದರ ಮೇಲೆ ಬರೆಯುವುದು ಒಳಿತು.

 

ಇದನ್ನು ಓದಿ: Intresting news: ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸುವ ಮುನ್ನ ಎಚ್ಚರ; ನಿಮ್ಮ ಖಾತೆ ಖಾಲಿ ಆಗಿಬಿಡಬಹುದು,ಹುಷಾರ್!

Leave A Reply

Your email address will not be published.