BSF : 12 ಕೋಟಿ ಮೌಲ್ಯದ ಹಾವಿನ ವಿಷ ವಶಪರಿಸಿಕೊಂಡ ಬಿಎಸ್‌ಎಫ್‌!

Latest news BSF seized snake venom worth 12 crores

BSF: ದಕ್ಷಿಣ ದಿನಜ್‌ಪುರ ಜಿಲ್ಲೆಯ ಹಿಲ್ಲಿ ಗಡಿಯಲ್ಲಿ ಹಾವಿನ ವಿಷ ತುಂಬಿದ ಜಾರ್ ಅನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಹಿಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಉತ್ತರ ಆಗ್ರಾ ಗ್ರಾಮದಲ್ಲಿ ಹಾವಿನ ವಿಷ ಪತ್ತೆಯಾಗಿದೆ. ಈ ಹಾವಿನ ವಿಷದ ಮೌಲ್ಯ ಸುಮಾರು 12ಕೋಟಿ ಎಂದು ಅಂದಾಜಿಸಲಾಗಿದೆ. ಈ ಹಾವಿನ ವಿಷವನ್ನು ತುಂಬಿದ ಜಾರ್‌ನಲ್ಲಿ ಇಡಲಾಗಿದೆ. ಇದರ ಮೇಲೆ ಮೇಡ್‌ ಇನ್‌ ಫ್ರಾನ್ಸ್‌ ಎಂದು ಬರೆಯಲಾಗಿದೆ.

ಈ ಘಟನೆ ಶುಕ್ರವಾರ ನಡೆದಿದ್ದು, ಬಿಎಸ್‌ಎಫ್‌ ಹಾವಿ ವಿಷದ ಜಾರನ್ನು ಬಲೂರ್‌ಘಾಟ್‌ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈ ಘಟನೆಯಲ್ಲಿ ಭಾಗಿಯಾದವರು ಯಾರು ಎಂಬುವುದರ ಕುರಿತು ಬಿಎಸ್‌ಎಫ್‌ ಮತ್ತು ಬಲೂರ್‌ ಘಾಟ್‌ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ. ಮಾಹಿತಿ ದೊರೆತ ನಂತರ 61 ಬೆಟಾಲಿಯನ್‌ ಬಿಎಸ್‌ಎಫ್‌ ಸಿಬ್ಬಂದಿ ಉತ್ತರ ಆಗ್ರಾದ ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ಶೋಧ ನಡೆಸಿದ್ದು, ಬಾಂಗ್ಲಾದೇಶದ ಪತ್ರಿಕೆಯಲ್ಲಿ ಸುತ್ತಿದ ವಸ್ತುವೊಂದು ದೊರೆತಿದ್ದು, ದಿನಪತ್ರಿಕೆ ತೆರೆದು ನೋಡಿದಾಗ ಹಾವಿನ ವಿಷ ತುಂಬಿದ ಜಾಡಿ ದೊರಕಿದೆ.

ಬಿಎಸ್‌ಎಫ್‌ ಹಾವಿನ ವಿಷವನ್ನು ಜಪ್ತಿ ಮಾಡಿದ್ದು, ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಸುಮಾರು 28ಸೆಂ.ಮೀ. ಎತ್ತರದ ಜಾರ್‌ನಲ್ಲಿ ಫ್ರಾನ್ಸ್‌ನಲ್ಲಿ ತಯಾರಿಸಲಾಗಿದೆ ಎಂದು ಬಿಎಸ್‌ಎಫ್‌ ಹೇಳಿದೆ. ಇದನ್ನು ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲು ಯತ್ನ ಮಾಡಲಾಗಿತ್ತು.

ಆ ಜಾರ್‌ನ ತೂಕ 2 ಕೆಜಿ 460 ಗ್ರಾಂ. ಹಾವಿನ ವಿಷ ಬೆಲೆ ಅಂತಾರಾಷ್ಟ್ರೀಯ ಕಪ್ಪು ಮಾರುಕಟ್ಟೆ ಬೆಲೆ 12 ಕೋಟಿ ಎಂದು ಬಿಎಸ್‌ಎಫ್ ಹೇಳಿಕೊಂಡಿದೆ. ಆದರೆ, ಜಾರ್‌ನಲ್ಲಿ ಯಾವ ಜಾತಿಯ ಹಾವು ವಿಷವನ್ನು ಹೊಂದಿತ್ತು ಎಂಬುದನ್ನು ಬಿಎಸ್‌ಎಫ್ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಹಾವಿನ ವಿಷದ ಮಾದರಿಯನ್ನು ನ್ಯಾಯಾಲಯ ಸಂಗ್ರಹಿಸಿ ಮುಂಬೈಗೆ ಪರೀಕ್ಷೆಗೆ ಕಳುಹಿಸಲಿದೆ.

 

ಇದನ್ನು ಓದಿ: Retired Bank Employees Pension: ಕೇಂದ್ರದಿಂದ ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್!

Leave A Reply

Your email address will not be published.