Retired Bank Employees Pension: ಕೇಂದ್ರದಿಂದ ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್!

Latest news Central Govt decides to revise pension of retired bank employees

Retired Bank Employees Pension: ಕೇಂದ್ರ ನೌಕರರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರ ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿಯನ್ನು ಪರಿಷ್ಕರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಪೂರ್ವ ಮಹಾರಾಷ್ಟ್ರ ಬ್ಯಾಂಕ್ ನಿವೃತ್ತರ ಸಂಘ ಈ ಮೊದಲು, ಕೇಂದ್ರ ಸರ್ಕಾರಕ್ಕೆ ಕಳೆದ 27 ವರ್ಷಗಳಿಂದ ಬಾಕಿ ಇರುವಂತಹ ಪಿಂಚಣಿ ನವೀಕರಣವನ್ನು ತ್ವರಿತಗೊಳಿಸುವಂತೆ ಮನವಿ ಮಾಡಿತ್ತು. ಈ ನಡುವೆ ಕೇಂದ್ರ ಸರ್ಕಾರ ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿಯನ್ನು ಪರಿಷ್ಕರಿಸಲು ತೀರ್ಮಾನ ಕೈಗೊಂಡಿದ್ದು, ಈ ಹೊಸ ಅಧಿಸೂಚನೆಯು ನವೆಂಬರ್ 1, 2017 ರ ಮೊದಲು ನಿವೃತ್ತರಾದವರಿಗೆ ಜೂನ್ 2023 ರಿಂದ ಅನ್ವಯವಾಗಲಿದೆ.

ಆದರೆ, ಮುಂಚಿನ ಪಾವತಿಗಳಿಗೆ ಯಾವುದೇ ಬಾಕಿ ಉಳಿದಿರುವ ಪಾವತಿ ಮಾಡಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಸದ್ಯ, ಈಗಿರುವ 100 ರೂ.ಗಳ ಮೂಲ ಪಿಂಚಣಿ ಮೊತ್ತವನ್ನು 163 ರೂ.ಗೆ ಪರಿಷ್ಕರಣೆ ಮಾಡಿ ಜೂನ್ 2023 ರಿಂದ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲಾಗುತ್ತದೆ.

 

ಇದನ್ನು ಓದಿ: Actor Ravindra: ಖ್ಯಾತ ನಟ ರವೀಂದ್ರ ಮಹಾಜನಿ ಆತ್ಮಹತ್ಯೆ! 

Leave A Reply

Your email address will not be published.