ವ್ಯಕ್ತಿಯೋರ್ವನ ಬುರುಡೆಗೆ ಹೊಕ್ಕ 2 ಇಂಚು ಉದ್ದದ ಮೊಳೆ! ವೈದ್ಯರು ಇದನ್ನು ಯಾವ ರೀತಿ ತೆಗೆದ್ರು ಗೊತ್ತೇ?

Latest news health news 2 inch long nail driven into a man's skull

ಜುಲೈ 4 ರಂದು ಚೆನ್ನೈನ (Chennai) ನವಲೂರಿನಲ್ಲಿರುವ ಫ್ಯಾಕ್ಟರಿಯಲ್ಲಿ ಕಾರ್ಮಿಕನೊಬ್ಬ ಕೆಲಸ ಮಾಡುತ್ತಿದ್ದ ಸಂದರ್ಭ ಅಚಾನಕ್ ಆಗಿ 2 ಇಂಚು ಉದ್ದದ ಮೊಳೆಯೊಂದು ತಲೆಗೆ ಹೊಕ್ಕಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಐದು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ ಹೊರ ತೆಗೆದ ಘಟನೆ ನಡೆದಿದೆ.

ಉತ್ತರಪ್ರದೇಶದಿಂದ ದಕ್ಷಿಣ ಭಾರತದ ರಾಜ್ಯ ತಮಿಳುನಾಡಿನ ಚೆನ್ನೈಗೆ ಕೆಲಸ ಅರಸಿ ಬಂದವರು. ಉತ್ತರಪ್ರದೇಶದ (Uttar Pradesh) ಮಚಲಿ ಗಾಂವ್ (Machhali Gaon) ನ ನಿವಾಸಿಯಾದ ಬ್ರಹ್ಮ (Brhma) ಎಂಬುವ ವ್ಯಕ್ತಿಗೆ ಅಚಾನಕ್ ಆಗಿ ತಲೆಗೆ ಮೊಳೆ ಹೊಕ್ಕಿದೆ. ಬ್ರಹ್ಮನ ಸಹೋದ್ಯೋಗಿ ಮರದ ಬಾಕ್ಸೊಂದನ್ನು ಮೊಳೆ ಹೊಡೆಯುವ ಗನ್‌ನಿಂದ ಸೀಲ್ ಮಾಡುತ್ತಿದ್ದರಂತೆ. ಈ ವೇಳೆ ಅದೇ ಸ್ಥಳದಲ್ಲಿ ಬ್ರಹ್ಮ ನೆಲಹಾಸನ್ನು ಗುಡಿಸುತ್ತಿದ್ದರಂತೆ. ಈ ಸಂದರ್ಭ ಆತನ ಕುತ್ತಿಗೆ ಹಾಗೂ ತಲೆಯನ್ನು ಸಂಪರ್ಕಿಸುವ ನಡುವಿನ ಜಾಗದಲ್ಲಿ ಸಣ್ಣ ಬ್ಯಾಟರಿಯಷ್ಟು ಉದ್ದ ಗಾತ್ರದ ಮೊಳೆಯೊಂದು ಸೇರಿಕೊಂಡಿದೆ.

ಫ್ಯಾಕ್ಟರಿ ಸಿಬ್ಬಂದಿಗಳು ಕೂಡಲೇ ಆತನನ್ನು ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಜ್ಞಾವಸ್ಥೆಯಲ್ಲೇ ಆತನನ್ನು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ಗೆ ಸಾಗಿಸಲಾಗಿದೆ.ಈ ಸಂದರ್ಭ ರಕ್ತದೊತ್ತಡ, ಹೃದಯಬಡಿತ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಸ್ಕ್ಯಾನಿಂಗ್ ಚಿತ್ರಗಳನ್ನು ಗಮನಿಸಿದಾಗ ಇದು ಸಾಧಾರಣ ಮೊಳೆಯಲ್ಲ ಬದಲಿಗೆ ಒಮ್ಮೆ ಮರಕ್ಕೆ ಇದನ್ನು ಹೊಡೆದರೆ ಸುಲಭವಾಗಿ ತೆಗೆಯಲಾಗದಂತೆ ಡಿಸೈನ್‌ ಅನ್ನು ಈ ಮೊಳೆ ಹೊಂದಿತ್ತು ಎಂಬುದು ವೈದ್ಯರಿಗೆ ಗೊತ್ತಾಗಿದೆ.

ಮೊಳೆ ಕುತ್ತಿಗೆ ಮತ್ತು ತಲೆಯ ನಡುವಿನಲ್ಲಿ ಇದ್ದ ಹಿನ್ನೆಲೆ ಮೊಳೆ ಹೊರ ತೆಗೆಯುವುದು ಸುಲಭದ ಮಾತಾಗಿರಲಿಲ್ಲ. ವೈದ್ಯರಿಗೆ ಇದು ದೊಡ್ಡ ಸವಾಲಾಗಿತ್ತು. ಏಕೆಂದರೆ, ಮಾತನಾಡುವುದಕ್ಕೆ ಕಷ್ಟವಾಗುವ ಇಲ್ಲವೇ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಕೂಡ ಇತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ಕಾರ್ಮಿಕನ ತಲೆಗೆ ಡ್ರಿಲ್ ಮಾಡುವ ಮೂಲಕ ಎರಡು ದಿನದ ನಂತರ ತಲೆಗೆ ಹೊಕ್ಕಿದ್ದ ಆಣಿಯನ್ನು ಹೊರಗೆ ತೆಗೆದಿದ್ದಾರೆ. ವೈದ್ಯರು ಡೈಮಂಡ್ ಬುರ್ ಎಂಬ ನ್ಯೂರೋಸರ್ಜರಿ ಉಪಕರಣ ವನ್ನು ಬಳಸಿ ಮೊಳೆ ಇರುವ ಜಾಗದ ಸುತ್ತ ಡ್ರಿಲ್ ಮಾಡಿ, ಆ ಬಳಿಕ ಮೊಳೆಯ ಹಿಡಿತಲೆ ಕಾಣಿಸಿದೆ. ಮತ್ತೆ ಸೂಕ್ಷ್ಮವಾಗಿ ಡ್ರಿಲ್ ಮಾಡಿ ಮೊಳೆಯನ್ನು ಹೊರಗೆಳೆದಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಬ್ರಹ್ಮನಿಗೆ ಪ್ರಜ್ಞೆ ಬಂದಿದ್ದು, ಯಾವುದೇ ಸಮಸ್ಯೆಯಿಲ್ಲದೇ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

 

ಇದನ್ನು ಓದಿ: Aadhar Card Update: ಆಧಾರ್ ಕಾರ್ಡ್ ಬಳಸುವಾಗ ಈ ತಪ್ಪನ್ನು ಅಪ್ಪಿ ತಪ್ಪಿಯೂ ಮಾಡದಿರಿ!

 

Leave A Reply

Your email address will not be published.