Death news: 150 ಮೊಮೊಸ್‌ ತಿಂದು ಪ್ರಾಣಬಿಟ್ಟ ಯುವಕ! ಯುವಕರ ಮಧ್ಯೆ ಚಾಲೆಂಜ್‌ ಸಾವಿಗೆ ಕಾರಣವಾಯಿತೇ? ನನ್ನ ಮಗನದು ಕೊಲೆ ಎಂದ ತಂದೆ!!!

Latest news man has died eating 150 momos in a challenge of eating momos

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್‌ ಮಾಡಿ ತಿನ್ನುವ ಒಂದು ಕ್ರೇಜ್‌ ಹೆಚ್ಚಾಗಿದೆ. ಇದನ್ನೆಲ್ಲಾ ವೀಡಿಯೋ ಮಾಡಿ ವ್ಯೀವ್ಸ್‌ ಮಾಡೋದು ಇದೆಲ್ಲ ಒಂದು ರೀತಿಯ ಟ್ರೆಂಡ್‌ ಆಗಿದೆ. ಆದರೆ ಈ ರೀತಿಯ ಒಂದು ಸವಾಲನ್ನು ಸ್ವೀಕರಿಸಿದ ಯುವಕ ಇದಕ್ಕೆ ಭಾರೀ ದೊಡ್ಡ ಬೆಲೆ ತೆರಬೇಕಾಗಿ ಬಂದಿದೆ. ಹೌದು. ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮೆಮೊಸ್‌ ತಿನ್ನುವ ಸವಾಲೊಂದನ್ನು ಸ್ವೀಕರಿಸಿದ ಯುವಕ 150 ಮೊಮೋಸ್‌ ತಿಂದು ಈಗ ಮೃತಪಟ್ಟಿದ್ದಾನೆ.

ಮೊಬೈಲ್‌ ಅಂಗಡಿ ನಡೆಸುತ್ತಿದ್ದ ಯುವಕನೋರ್ವ ತನ್ನ ಸ್ನೇಹಿತರೊಂದಿಗೆ ಮೆಮೊಸ್‌ ತಿನ್ನಲು ಹೋಗಿದ್ದು, ಆವಾಗ ಈ ಘಟನೆ ನಡೆಸಿದೆ. ಸ್ನೇಹಿತರ ಜೊತೆ ಸೇರಿ ಮೊಮೋಸ್‌ ತಿನ್ನುವ ಚಾಲೆಂಜ್‌ನಲ್ಲಿ ಯುವಕ 150 ಮೊಮೋಸ್‌ ತಿಂದಿದ್ದಾನೆ. ಎಲ್ಲರೂ ಅವರವರ ಮನೆಗೆ ಹೋಗಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಆತನಿಗೆ ದೇಹದಲ್ಲಿ ಏನೋ ಆಗಿ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ಕೂಡಲೇ ಮನೆಯವರು ಆತನನ್ನು ಸದರ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಯುವಕ ಮೃತಪಟ್ಟಿದ್ದಾನೆ. ಯುವಕನನ್ನು ಸಿಹೋರ್ವಾ ಗ್ರಾಮದ ವಿಪಿನ್‌ ಕುಮಾರ್‌ ಪಾಸ್ವಾನ್‌ ಎಂದು ಗುರುತಿಸಲಾಗಿದೆ.

ಆದರೆ ಇದೇ ವೇಳೆ ಮೃತ ಯುವಕನ ತಂದೆ ನನ್ನ ಮಗನಿಗೆ ವಿಷ ಹಾಕಿ ಕೊಲ್ಲಲಾಗಿದೆ ಎಂದು ಆರೋಪ ಮಾಡಿದ್ದಾರೆ. ಶುಕ್ರವಾರ ಯುವಕನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ವರದಿ ಬಂದ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಿದೆ. ನಂತರ ವರದಿಯಲ್ಲಿ ವಿಪಿನ್‌ ಸಾವಿಗೆ ಕಾರಣವೇನು ಎಂದು ತಿಳಿದು ಬರಲಿದೆ.

25 ವರ್ಷದ ವಿಪಿನ್ ಗುರುವಾರ ತನ್ನ ಮೊಬೈಲ್ ಅಂಗಡಿಯಲ್ಲಿ ಕುಳಿತಿದ್ದ. ಆ ಸಮಯದಲ್ಲಿ ಅವರ ಸ್ನೇಹಿತರು ಅಲ್ಲಿಗೆ ಬಂದಿದ್ದು, ಮೊಮೋಸ್‌ ತಿನ್ನು ಹೋಗಿದ್ದಾರೆ. ಇದೇ ವೇಳೆ ಸ್ನೇಹಿತರ ಮಧ್ಯೆ ಹೆಚ್ಚು ಮೊಮೋಸ್‌ ತಿನ್ನುವ ಮಾತು ಬಂತು. ಆವಾಗ ವಿಪಿನ್‌ 150 ಮೊಮೋಸ್‌ಗಳನ್ನು ತಿಂದಿದ್ದಾನೆ. ನಂತರ ಎಲ್ಲರೂ ಅವರವರ ಕೆಲಸಕ್ಕೆ ಹೋಗಿದ್ದರೆ, ಇತ್ತ ಅಂಗಡಿಯಲ್ಲಿ ವಿಪಿನ್‌ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

ಬಳಿಕ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ವೇಳೆ ಯುವಕ ಮೃತಪಟ್ಟಿದ್ದಾನೆ. ಮಗನ ಸಾವಿನಿಂದ ಕುಟುಂಬ ತೀವ್ರ ದುಃಖದಲ್ಲಿದೆ. ಮೊಮೊಸ್ ತಿಂದು ಮಗ ಸಾಯಲು ಸಾಧ್ಯವಿಲ್ಲ ಎನ್ನುತ್ತಾರೆ. ಮಗನಿಗೆ ವಿಷ ಹಾಕಿ ಕೊಲೆ ಮಾಡಲಾಗಿದೆ ಎಂದು ವಿಪಿನ್ ತಂದೆ ಆರೋಪಿಸಿದ್ದಾರೆ. ಅದೇ ಸಮಯದಲ್ಲಿ, ಈ ಪ್ರಕರಣದಲ್ಲಿ, ಪೊಲೀಸರು ಈಗ ಮೃತರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ನಂತರವಷ್ಟೇ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

 

ಇದನ್ನು ಓದಿ: love cheating: ಲವ್‌ ಮಾಡಿ ಲೈಂಗಿಕ ತೃಷೆ ತೀರಿಸಿಕೊಂಡ ಎಸ್ಕೇಪ್‌ ಆದ ಯುವಕ! ಮೋಸ ಹೋದ ಯುವತಿ ಆತ್ಮಹತ್ಯೆಗೆ ಯತ್ನ!ಮುಂದೇನಾಯ್ತು? 

Leave A Reply

Your email address will not be published.