ಪಣೋಲಿಬೈಲು ಸೇವಾದರಗಳ ಹೆಚ್ಚಳ ,ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆ : ಕಾರ್ಯನಿರ್ವಹಣಾಧಿಕಾರಿ ಸ್ಪಷ್ಟನೆ

Latest news Panolibailu Service Rates Increase Messaging on Social Media

ಜನರ ಮನದಲ್ಲಿ ಭಕ್ತಿ ಭಾವದಿಂದ ಆರಾಧಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ದ ದೈವ ಕ್ಷೇತ್ರ ಬಂಟ್ವಾಳ ತಾಲೂಕಿನ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಸೇವಾ ಶುಲ್ಕವನ್ನು ರಾಜ್ಯ ಮುಜರಾಯಿ ಇಲಾಖೆ ಇದ್ದಕ್ಕಿದ್ದಂತೆ ಹೆಚ್ಚಳ ಮಾಡಿ ದುಪ್ಪಟ್ಟು ಮಾಡಿದರಿಂದ ಭಕ್ತಾಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಾವಿರಾರು ವರ್ಷಗಳ ಐತಿಹ್ಯವುಳ್ಳ ಪಣೋಲಿಬೈಲು ಕ್ಷೇತ್ರಕ್ಕೆ ರಾಜ್ಯ ಮಾತ್ರವಲ್ಲದೇ ಪರವೂರುಗಳಿಂದಲೂ ಕೂಡ ಭಕ್ತಾದಿಗಳು ಆಗಮಿಸಿ ಹರಕೆ ತೀರಿಸುವ ಕ್ರಮ ರೂಡಿಯಲ್ಲಿದೆ. ದೈವಕ್ಕೆ ಕೊಡುವ ಅಗೆಲು ಸೇವೆ ಮತ್ತು ಕೋಲ ಸೇವೆ ಈ ಕ್ಷೇತ್ರದ ಪ್ರಮುಖ ಸೇವೆಗಳಾಗಿದ್ದು, ಈ ಎರಡೂ ಸೇವೆಗಳ ಶುಲ್ಕವನ್ನು ಮುಜರಾಯಿ ಇಲಾಖೆ ಹೆಚ್ಚಳ ಮಾಡಿದೆ.

ಈ ಮೊದಲು ಅಗೆಲು ಸೇವೆಯ ರಶೀದಿ ಬೆಲೆಯನ್ನು 25 ರೂ.ಇದ್ದ ಬೆಲೆ ಇದೀಗ ದುಪ್ಪಟ್ಟಾಗಿ 50 ರೂ. ಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ,ದೈವದ ಕೋಲದ ಸೇವೆಗೆ ಇದ್ದ 3000 ರೂ. ಬದಲಿಗೆ 5000 ರೂ.ಗೆ ಏರಿಸಲಾಗಿದೆ. ಇದರ ಜೊತೆಗೆ ವಾಹನ ಪೂಜೆಗೆ ಈ ಹಿಂದೆ ಯಾವುದೇ ದರವಿಲ್ಲದೆ ಉಚಿತವಾಗಿ ಮಾಡಲಾಗುತ್ತಿತ್ತು. ಈಗ ಇದಕ್ಕೂ ಕೂಡ 75 ರೂ.ಗಳ ದರ ನಿಗದಿಪಡಿಸಲಾಗಿದ್ದು, ಇದರಿಂದಾಗಿ ಭಕ್ತಾದಿಗಳ ಗಮನಕ್ಕೆ ತರದೆ ದರ ದುಪ್ಪಟ್ಟು ಮಾಡಿರುವುದರಿಂದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಈ ಕುರಿತು ಶ್ರೀ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ, ಬಂಟ್ವಾಳ ತಾಲೂಕಿನ ಆಡಳಿತ ಮಂಡಳಿ ಸೇವಾ ದರ ಪರಿಷ್ಕರಣೆ ಕುರಿತು ಸ್ಪಷ್ಟನೆ ನೀಡಿದೆ.

ಈ ಹಿಂದೆ ಕ್ಷೇತ್ರದ ಯಾವುದೇ ಬದಲಾವಣೆಗಳನ್ನು ಮಾಡುವಾಗ ಕ್ಷೇತ್ರಕ್ಕೆ ಸಂಬಂಧಪಟ್ಟ ನಾಲ್ಕ ಮಾಗಣೆಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳು ಸಂಪ್ರದಾಯವನ್ನು ಪಾಲಿಸಲಾಗಿತ್ತಿತ್ತು. ಆದರೆ, ಇದರ ಪಾಲನೆಯಾಗಿಲ್ಲ ಎಂಬುದು ಭಕ್ತಾದಿಗಳ ಕೋಪಕ್ಕೆ ಕಾರಣವಾಗಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಆಡಳಿತ ಮಂಡಳಿಯ ಕಾರ್ಯ ನಿರ್ವಹಣಾಧಿಕಾರಿ ಸೇವಾದರ ಪಟ್ಟಿಯನ್ನು ಹಿಂದೆ 2013ರಲ್ಲಿ ಪರಿಷ್ಕರಿಸಲಾಗಿದ್ದು, ಹತ್ತು ವರ್ಷ ಕಳೆದಿರುವ ಹಿನ್ನೆಲೆ ಪ್ರಸ್ತುತ ಎಲ್ಲಾ ಸೇವಾದರಗಳನ್ನು ಈಗಿನ ಕಾಲಾಧಾರಣೆಗೆ ಅನುಸಾರವಾಗಿ 29.07.2021ರ ಸಭೆಯಲ್ಲಿ ಪರಿಷ್ಕರಿಸಲು ತೀರ್ಮಾನ ಕೈಗೊಳ್ಳಲಾಗಿದೆ.ಈ ಹಿನ್ನೆಲೆ, ಅದರ ಪ್ರತಿಯನ್ನು ದೈವಸ್ಥಾನದ ನೋಟೀಸು ಬೋರ್ಡಿನಲ್ಲಿ ಅದೇ ದಿನದಂದು ಸಾರ್ವಜನಿಕರ ಅವಗಾಹನೆಗಾಗಿ ಪ್ರಚುರ ಪಡಿಸಲಾಗಿದೆ.

ಈ ಕುರಿತು ಸಾರ್ವಜನಿಕರಿಂದ ಯಾವುದೇ ಸಲಹೆ ಸೂಚನೆ ಇಲ್ಲವೇ ಆಕ್ಷೇಪಣೆ ಇದ್ದಲ್ಲಿ ದಿನಾಂಕ: 31.08.2021 ರ ಒಳಗಾಗಿ ಈ ಕಛೇರಿಗೆ ಬರಹ ಮೂಲಕ ನೀಡುವಂತೆ ತಿಳಿಸಿ ಪ್ರಕಟಿಸಲಾಗಿತ್ತು. ಆದರೆ ಇದಕ್ಕೆ ಯಾರಿಂದಲೂ ಕೂಡ ಯಾವುದೇ ರೀತಿಯ ಸಲಹೆ, ಸೂಚನೆ ಬಂದಿರದ ಹಿನ್ನೆಲೆಯಲ್ಲಿ ದೈವಸ್ಥಾನದ ಭಕ್ತರು ಈ ಬಗ್ಗೆ ಯಾವುದೇ ಆಕ್ಷೇಪಣೆ ಮಾಡದ ಇದ್ದುದ್ದರಿಂದ ಸದ್ರಿ ಸೇವಾಪಟ್ಟಿಗೆ ಧಾರ್ಮಿಕ ದತ್ತಿ ಆಯುಕ್ತರ ಮಂಜೂರಾತಿ ದೊರೆತಿದ್ದರಿಂದ ಸೇವಾ ದರ ಪಟ್ಟಿ ಪರಿಷ್ಕರಣೆಯನ್ನು 01.07.2023 ರಿಂದ ಜಾರಿಗೊಳಿಸಲಾಗಿರುತ್ತದೆ.

ದೈವಸ್ಥಾನದಲ್ಲಿ ಸಂಗ್ರಹವಾದ ಸೇವೆ ಮತ್ತು ಇನ್ನಿತರ ಆದಾಯವನ್ನು ಅದರ ಖರ್ಚು ವೆಚ್ಚಗಳಿಗೆ ಮತ್ತು ದೈವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗ ಮಾಡಲಾಗುತ್ತದೆ. ಈ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ಗಮನಿಸಬೇಕು. ಹೀಗಾಗಿ, ಸರ್ಕಾರ ಧನ ಕ್ರೋಢೀಕೃತಕ್ಕಾಗಿ ದೈವಸ್ಥಾನದ ಸೇವಾ ದರ ಪರಿಷ್ಕರಿಸಲಾಗಿದೆ ಎಂಬುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬ ಅಂಶವನ್ನು ಭಕ್ತಾಧಿಗಳ ಮತ್ತು ಸಾರ್ವಜನಿಕರ ಗಮನಕ್ಕೆ ಈ ಮೂಲಕ ತರಲಾಗುತ್ತಿದೆ ಎಂದು ಆಡಳಿತ ಮಂಡಲಿ ಮಾಹಿತಿ ನೀಡಿದೆ. ಆಡಳಿತ ಮಂಡಳಿಯು ಈ ಮೂಲಕ ದೈವಸ್ಥಾನದ ಆಡಳಿತ ಮಂಡಳಿಯ ಕಾರ್ಯ ನಿರ್ವಹಣಾಧಿಕಾರಿ ದೈವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಅಪಪ್ರಚಾರ ಮಾಡದಂತೆ ಈ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದೆ.

 

 

Leave A Reply

Your email address will not be published.