Tomato: ಟೊಮೆಟೊ ಬೆಲೆ ಏರಿಕೆಯ ಮಧ್ಯೆ, ಇಂತಹ ಸಮಸ್ಯೆ ಇರುವವರು ಟೊಮೆಟೊ ತಿನ್ನಲೇ ಬಾರದು! ಕಾರಣವೇನು?

latest news Tomato market price Those who have this problem should not eat tomato

ಟೊಮೆಟೋ ಅಂದರೆ ಸಾಕು ಈಗ ಇದನ್ನು ಮುಟ್ಟಲು ಕೂಡಾ ಹೆದರ್ಕೊಳ್ತಾರೆ ಜನ. ಈ ಬೆಲೆ ಏರಿಕೆ ಏನೇ ಇದ್ದರೂ ಕೂಡಾ ಟೊಮೆಟೋ ನಮ್ಮ ಭಾರತೀಯ ಪಾಕಪದ್ಧತಿಯ ಒಂದು ಭಾಗ. ಇದಿಲ್ಲದೆ ಕೆಲವೊಂದು ಪದಾರ್ಥ ಅಪೂರ್ಣ ಎಂದೇ ಹೇಳಬಹುದು. ಆದರೆ ಕಳೆದ ಕೆಲವು ವಾರಗಳಲ್ಲಿ ಟೊಮೆಟೋ ಬೆಲೆ ಏರಿಕೆ ಕಂಡಿದೆ. ಇದರ ನಡುವೆ ಜನರು ಕೆಲವರು ಟೊಮೆಟೋಗೆ ಪರ್ಯಾವನ್ನು ಕೂಡಾ ಕಂಡು ಹಿಡಿದಿದ್ದಾರೆ.

ಟೊಮೊಟೋ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುವಲ್ಲಿ ಎರಡು ಮಾತಿಲ್ಲ. ಆದರೆ ನಿಮಗಿದು ಗೊತ್ತೇ? ಈ ಟೊಮೆಟೋ ಸೇವನೆ ಕೆಲವರಿಗೆ ಹಾನಿ ಉಂಟು ಮಾಡುತ್ತದೆ ಎಂದು. ಆಸಿಡ್‌ ರಿಫ್ಲಕ್ಸ್‌ ಸಮಸ್ಯೆಯನ್ನು ಎದುರಿಸುತ್ತಿರುವ ಜನರಿಗೆ ಇದು ನಿಜಕ್ಕೂ ಹಾನಿಕಾರಕ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇಂತವರ ಹೊಟ್ಟೆಗೆ ಈ ಟೊಮೆಟೋ ಸೇರಿಕೊಂಡರೆ ಉರಿ ಉಂಟಾಗುತ್ತದೆ. ಅಲ್ಲದೆ ಟೊಮೆಟೋ ತಿಂದ ಕೂಡಲೇ ಎದೆಯುರಿ, ಅಜೀರ್ಣ, ಜಠರಗರುಳಿನ ಸಮಸ್ಯೆ ತಲೆದೋರುತ್ತದೆ. ಹಾಗಾಗಿ ಇಂತವರು ತಮ್ಮ ಆಹಾರದಲ್ಲಿ ಟೊಮೆಟೋವನ್ನು ಸೇರಿಸಬಾರದು.

ಕಿಡ್ನಿ ಸ್ಟೋನ್‌ಗಳ ಕಾರಣದಿಂದ ಕೆಲವರು ಟೊಮ್ಯಾಟೊ ಸೇವನೆಯಿಂದ ದೂರವಿರುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಆಕ್ಸಲೇಟ್ ಕಲ್ಲು ಇರುವವರು ಮಾತ್ರ ಟೊಮೆಟೊ ತಿನ್ನುವುದನ್ನು ತಪ್ಪಿಸಬೇಕು. ಟೊಮೆಟೊಗಳು ಆಕ್ಸಲೇಟ್ ಎಂಬ ವಸ್ತುವನ್ನು ಹೊಂದಿರುತ್ತವೆ, ಇದು ಸೂಕ್ಷ್ಮ ವ್ಯಕ್ತಿಗಳಲ್ಲಿ ಆಕ್ಸಲೇಟ್ ಕಲ್ಲುಗಳನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯ ತಜ್ಞರೊಂದಿಗೆ ಸಮಾಲೋಚಿಸಿದ ನಂತರವೇ ಟೊಮೆಟೊಗಳನ್ನು ಆಹಾರದಲ್ಲಿ ಸೇರಿಸಿದರೆ ಉತ್ತಮ. ಟೊಮೆಟೋ ತಿಂದರೆ ಕೆಲವರಿಗೆ ಅಲರ್ಜಿ ಉಂಟಾಗುವುದು ಕೂಡಾ ಇರಬಹುದು. ಇಂತವರು ಇದನ್ನು ತಿನ್ನುವುದನ್ನು ತಪ್ಪಿಸುವುದು ಉತ್ತಮ.

ಟೊಮೆಟೊಗಳು ರಕ್ತ ಹೆಪ್ಪುಗಟ್ಟುವ ಔಷಧಿಗಳಿಗೆ ಹಾನಿ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತವೆ. ರಕ್ತ ತೆಳುವಾಗಿಸುವ ಆಹಾರವನ್ನು ಸೇವಿಸುವವರು ಟೊಮೆಟೊಗಳನ್ನು ಸೇವಿಸಬಾರದು. ಟೊಮ್ಯಾಟೋಸ್ ವಿಟಮಿನ್ ಕೆ ಅನ್ನು ಹೊಂದಿರುತ್ತದೆ, ಇದು ಈ ಔಷಧಿಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ನೀವು ಅಂತಹ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನಿಮ್ಮ ಆರೋಗ್ಯ ತಜ್ಞರೊಂದಿಗೆ ಚರ್ಚಿಸಿ ಆಹಾರ ಸೇವಿಸುವುದು ಉತ್ತಮ.

 

ಇದನ್ನು ಓದಿ: EPF portal: ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿದ್ದೀರಾ? ನಿಮ್ಮ ಇಪಿಎಫ್ ಖಾತೆ ಕುರಿತು ಮಾಡಬೇಕಾದದ್ದು ಏನು? 

Leave A Reply

Your email address will not be published.