Tulsi Remedy: ತುಳಸಿ ಗಿಡದಿಂದ ಜಸ್ಟ್ ಈ ಒಂದು ಕೆಲಸ ಮಾಡಿ, ಅದೃಷ್ಟ ನಿಮ್ಮ ಮನೆಬಾಗಿಲಲ್ಲಿ ಇರುತ್ತೆ!!

latest news Tulsi Remedy Here is the importance of Tulsi according to Vaastu

Tulsi Remedy : ಪುರಾತನ ಕಾಲದಿಂದಲೂ ತುಳಸಿಯು ಅತ್ಯಂತ ಮಂಗಳಕರ ಮತ್ತು ತುಳಸಿಯಲ್ಲಿ ಲಕ್ಷ್ಮಿದೇವಿ(Lakshmi), ವಿಷ್ಣು ದೇವರು(Lord Vishnu) ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಹೀಗಾಗಿ, ಹಿಂದೂ ಶಾಸ್ತ್ರದಲ್ಲಿ ಪ್ರತಿನಿತ್ಯ ತುಳಸಿಯನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ( Worshipped)ದೇವಿ ಲಕ್ಷ್ಮಿ ಹಾಗೂ ವಿಷ್ಣು ದೇವರ ಕೃಪಾ ಕಟಾಕ್ಷ ಮನೆಯವರ ಮೇಲೆ ಸದಾ ಕಾಲ ಇರುತ್ತದೆ ಎಂಬ ನಂಬಿಕೆಯಿದೆ. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲು ತುಳಸಿ ಗಿಡಕ್ಕೆ ಸಂಬಂಧಿಸಿದ ಈ ಕೆಲ ವಿಚಾರಗಳನ್ನು ತಿಳಿದಿರುವುದು ಅವಶ್ಯಕ.

ವಾಸ್ತು ಪ್ರಕಾರ ಕೂಡ ತುಳಸಿ ಮಹತ್ವ ಪಡೆದುಕೊಂಡಿದ್ದು, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಉತ್ತಮ ಫಲಗಳು ಲಭ್ಯವಾಗಿ, ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆಯಿದೆ. ತುಳಸಿಯಲ್ಲಿರುವ ಅನೇಕ ಔಷಧೀಯ ಗುಣಗಳಿಂದ ಕೂಡ ಪೂಜನೀಯವಾಗಿ ಕಾಣುವುದನ್ನು ಗಮನಿಸಿರಬಹುದು. ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಮಹತ್ವಗಳನ್ನು ಹೊಂದಿರುವ ತುಳಸಿ ಗಿಡವನ್ನು ಮನೆಯಲ್ಲಿ ನೆಡುವಾಗ ಕೆಲವು ವಿಚಾರಗಳ ಕುರಿತು ಗಮನ ಹರಿಸಬೇಕು. ಮನೆಯಲ್ಲಿ ಶಾಂತಿ, ಆರ್ಥಿಕ ಧನಾಗಮನವನ್ನ ಹೆಚ್ಚಿಸಲು ಈ ಕ್ರಮಗಳನ್ನು ಅನುಸರಿಸಿ!

ಜ್ಯೋತಿಷ್ಯ ಶಾಸ್ತ್ರದ (Astrological) ಅನುಸಾರ ತುಳಸಿಯಿಂದ ಅನೇಕ ಪರಿಹಾರಗಳಿದ್ದು, ತುಳಸಿ ಎಲೆಗಳಿಂದ ಉತ್ತಮವಾದ ಆಮ್ಲಜನಕ ಪೂರೈಕೆ ಆಗುತ್ತದೆ. ಅದೃಷ್ಟವು(Good Luck) ಮನೆಯ ಬಾಗಿಲಿಗೆ ಒಲಿದು ಬರುವುದಲ್ಲದೆ ಒಳ್ಳೆಯ ರೀತಿಯಲ್ಲಿ ಹಣ ಅಂತಸ್ತು ಸಂಪಾದಿಸಲು ತುಳಸಿ ನೆರವಾಗುತ್ತದೆ. ಪ್ರತಿದಿನ ಮುಂಜಾನೆ ಹಾಗೂ ಸಂಜೆಯ ವೇಳೆಗೆ ತುಳಸಿಯನ್ನು ಪೂಜಿಸಿ ದೀಪವನ್ನು ಬೆಳಗುವ ಕ್ರಮ ರೂಢಿಯಲ್ಲಿದೆ. ಪ್ರತಿದಿನ ತುಳಸಿಯನ್ನು ಮನಃ ಪೂರ್ವಕವಾಗಿ ಪೂಜಿಸಿ, ಪ್ರತಿನಿತ್ಯ ನೀರನ್ನು(Water) ಅರ್ಪಿಸಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ ವೃದ್ದಿಯಾಗಿ, ಮನೆಯಲ್ಲಿ ಸಕಾರಾತ್ಮಕ ಶಕ್ತಿ(Positive Energy) ಹೆಚ್ಚಾಗಿ,ನಕಾರಾತ್ಮಕ ಶಕ್ತಿ (Negativities)ಅನ್ನು ದೂರ ಮಾಡಿ ದುರಾದೃಷ್ಟ ದೂರವಾಗಲು ತುಳಸಿ (Tulsi)ನೆರವಾಗುತ್ತದೆ.

ಆರ್ಥಿಕ ಪ್ರಗತಿಗಾಗಿ
ಶಾಸ್ತ್ರದ ಪ್ರಕಾರ, ಕೆಲವು ಒಣ ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಶುದ್ಧವಾದ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ. ಅವುಗಳನ್ನು ನಿಮ್ಮ ಹಣವನ್ನು ಇರಿಸುವ ಸ್ಥಳದಲ್ಲಿ ಇಲ್ಲವೇ ಕಮಾನಿನಲ್ಲಿಯಲ್ಲಿಡಿ. ಇದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ. ಅಷ್ಟೆ ಅಲ್ಲದೇ, ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡುಬರುತ್ತದೆ.

ತುಳಸಿ ಬೇರಿನ ಈ ಪರಿಹಾರವನ್ನು ಮಾಡಿ
ಒಂದು ವೇಳೆ, ವ್ಯಕ್ತಿಯ ಜಾತಕದಲ್ಲಿ ಗ್ರಹದೋಷವಿದ್ದರೆ ಅದಕ್ಕಾಗಿ ತುಳಸಿಯನ್ನು ಪೂಜಿಸಿ ಅದರ ಸ್ವಲ್ಪ ಬೇರನ್ನು ತೆಗೆದುಕೊಳ್ಳಬೇಕು. ಈಗ ಅದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ, ನಿಮ್ಮ ತೋಳಿಗೆ ಕಟ್ಟಿಕೊಳ್ಳಿ. ಇದರಿಂದ, ನಿಮಗೆ ಗ್ರಹಗಳ ಅನುಗ್ರಹ ಪ್ರಾಪ್ತಿಯಾಗಲಿದ್ದು, ನೀವು ಗ್ರಹ ದೋಷದಿಂದ ಮುಕ್ತರಾಗಬಹುದು.

ಶಾಂತಿ ನೆಲೆಸಲು
ಶಾಸ್ತ್ರದ ಪ್ರಕಾರ, ಮನೆಯಲ್ಲಿ ಶಾಂತಿ ಇಲ್ಲದಿದ್ದರೆ, ತುಳಸಿಯ ನಾಲ್ಕೈದು ಎಲೆಗಳನ್ನು ತೆಗೆದುಕೊಂಡು ಅದನ್ನು ತೊಳೆದು ಹಿತ್ತಾಳೆಯ ಪಾತ್ರೆಯಲ್ಲಿ ಶುದ್ಧ ನೀರಿನಲ್ಲಿ ಹಾಕಿ.ಆ ಬಳಿಕ ನಿಯಮಿತವಾಗಿ ಸ್ನಾನ ಮಾಡಿದ ಬಳಿಕ, ಈ ನೀರನ್ನು ಮನೆಯ ಬಾಗಿಲಿಗೆ ಸಿಂಪಡಿಸಿ. ಇದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗಿ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ತಕ್ಷಣದ ಲಾಭಕ್ಕಾಗಿ
ಶಾಸ್ತ್ರದ ಅನುಸಾರ, ತುಳಸಿ ಕೊಂಬೆಗಳನ್ನು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಿದರೆ, ವ್ಯಕ್ತಿಯ ಎಲ್ಲಾ ಸಮಸ್ಯೆಗಳು ದೂರವಾಗುವ ಜೊತೆಗೆ ಮಾನಸಿಕ ನೆಮ್ಮದಿ ಕೂಡ ದೊರೆಯುತ್ತದೆ. ಹೀಗಾಗಿ, ಅಮಾವಾಸ್ಯೆಯಂದು ಸ್ನಾನದ ನೀರಿನಲ್ಲಿ ತುಳಸಿಯ ತುಂಡನ್ನು ಹಾಕಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡಿದರೆ, ನೀವು ತಕ್ಷಣ ಲಾಭವನ್ನು ಪಡೆಯಬಹುದು.

ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ
ವಿಷ್ಣುವಿಗೆ ತುಳಸಿ ಎಲೆಗಳು ಮತ್ತು ತುಳಸಿ ಮಂಜರಿಯನ್ನು ಅರ್ಪಿಸಿದಲ್ಲಿ ಹಣದ ಹರಿವು ಹೆಚ್ಚಾಗಿ ಆದಾಯ ದುಪ್ಪತ್ತಾಗುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೆ, ತುಳಸಿ ಎಲೆಗಳನ್ನು ಗಂಗಾಜಲದಲ್ಲಿ ಬೆರೆಸಿ ಮನೆಯ ಉತ್ತರ ದಿಕ್ಕಿನಲ್ಲಿ ಇರಿಸಿ, ನಿಯಮಿತವಾಗಿ ಇಡೀ ಮನೆಗೆ ಈ ನೀರನ್ನು ಸಿಂಪಡಿಸುತ್ತಿದ್ದರೆ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

 

ಇದನ್ನು ಓದಿ: Death news: 150 ಮೊಮೊಸ್‌ ತಿಂದು ಪ್ರಾಣಬಿಟ್ಟ ಯುವಕ! ಯುವಕರ ಮಧ್ಯೆ ಚಾಲೆಂಜ್‌ ಸಾವಿಗೆ ಕಾರಣವಾಯಿತೇ? ನನ್ನ ಮಗನದು ಕೊಲೆ ಎಂದ ತಂದೆ!!! 

Leave A Reply

Your email address will not be published.