love cheating: ಲವ್‌ ಮಾಡಿ ಲೈಂಗಿಕ ತೃಷೆ ತೀರಿಸಿಕೊಂಡು ಎಸ್ಕೇಪ್‌ ಆದ ಯುವಕ! ಮೋಸ ಹೋದ ಯುವತಿ ಆತ್ಮಹತ್ಯೆಗೆ ಯತ್ನ!ಮುಂದೇನಾಯ್ತು?

Latest news woman tried to commit suicide for cheating on her lover

love cheating: ಪ್ರೀತಿ ಕುರುಡು ಎಂಬಂತೆ ಪ್ರೀತಿಸಿ ಮದುವೆಯಾಗುವ ಕನಸು ಹೊತ್ತು ಕೊನೆಗೆ ಮನೆಯವರ ವಿರೋಧ ಕಟ್ಟಿಕೊಂಡು ಜಗಳ, ಗಲಾಟೆ ಆಗುವ ಪ್ರಮೇಯಗಳು ಮಾಮೂಲಿ. ಪ್ರೀತಿ ಪ್ರೇಮದಿಂದಾಗುವ ಅನಾಹುತ ಅಷ್ಟಿಷ್ಟಲ್ಲ. ಪ್ರೀತಿ ಪ್ರೇಮದ ಹೆಸರಿನಲ್ಲಿ ಪ್ರೀತಿಯ ನಾಟಕವಾಡಿ ವಂಚನೆ ಮಾಡಿ ದುಡ್ಡು ಹೊಡೆಯುವ ಮಂದಿ ಒಂದೆಡೆಯಾದರೆ, ಮತ್ತೊಂದೆಡೆ ಯುವತಿಯರನ್ನು ದೈಹಿಕವಾಗಿ ಬಳಸಿಕೊಂಡು (love cheating) ಎಸ್ಕೇಪ್ ಆಗುವ ಪ್ರಕರಣಗಳು ಕೂಡ ಇವೆ.

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ತೊಪ್ಪಲದೊಡ್ಡಿ ಗ್ರಾಮದಲ್ಲಿ ಮದುವೆಯಾಗುವ ಭರವಸೆ ನೀಡಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಯುವತಿಗೆ ನಂಬಿಕೆ ದ್ರೋಹ ಮಾಡಿ ಯುವಕ ಪರಾರಿಯಾಗಿರುವ ಘಟನೆ ನಡೆದಿದೆ.ತನ್ನ ಪಕ್ಕದ ಮನೆಯಲ್ಲೇ ಇದ್ದ ಮಲ್ಲೇಶ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಕವಿತಾ( 20)ಆತನೊಂದಿಗೆ ಮದುವೆಯಾಗುವ ಕನಸು ಹೊತ್ತಿದ್ದಳು.

ವೃತ್ತಿಯಲ್ಲಿ ಡ್ರೈವರ್ ಆಗಿದ್ದ ಮಲ್ಲೇಶ್ ಪ್ರೀತಿಸಿದ ಹುಡುಗಿಯ ಜೊತೆಗೆ ಮದುವೆಗೆ ಸಮ್ಮತಿಸಿ ಮದುವೆ ಡೇಟ್ ಕೂಡ ಫಿಕ್ಸ್ ಮಾಡಿಕೊಂಡಿದ್ದಾರೆ. ಈ ನಡುವೆ ಬಲವಂತವಾಗಿ ಲೈಂಗಿಕಕ್ರಿಯೆಯಲ್ಲಿ ಕೂಡ ತೊಡಗಿದ್ದರಂತೆ. ಮದುವೆಯಾಗುವುದಾಗಿ ನಂಬಿಸಿ,ಯುವಕ ರಾತ್ರೋ ರಾತ್ರಿ ಪಲಾಯನ ಮಾಡಿಬಿಟ್ಟಿದ್ದು, ಆತನನ್ನೇ ನಂಬಿದ್ದ ಯುವತಿ ಯುವಕ ಪರಾರಿಯಾದ ಸುದ್ದಿ ತಿಳಿದು ಚಿಂತಿತಳಾಗಿ ಪ್ರಿಯಕರನಿಗಾಗಿ ಕ್ರಿಮಿನಾಶ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.

ಇದೀಗ, ಸಂತ್ರಸ್ತ ಯುವತಿ ಪಲಾಯನ ಮಾಡಿರುವ ಆರೋಪಿ ಮಲ್ಲೇಶನಿಗಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯುವತಿ ಆರೋಪಿಸಿದ್ದಾಳೆ. ಇದರ ಜೊತೆಗೆ ಆರೋಪಿ ಕುಟುಂಬಸ್ಥರು ಸಂತ್ರಸ್ತೆಯ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.

 

ಇದನ್ನು ಓದಿ: BSF : 12 ಕೋಟಿ ಮೌಲ್ಯದ ಹಾವಿನ ವಿಷ ವಶಪರಿಸಿಕೊಂಡ ಬಿಎಸ್‌ಎಫ್‌! 

Leave A Reply

Your email address will not be published.