Madhya Pradesh: ಪಾಠ ಮಾಡೋದ ಬಿಟ್ಟು, ಮಕ್ಕಳ ಬ್ಯಾಗ್ ತಲೆದಿಂಬಾಗಿಸಿ ಸುಖನಿದ್ದೆಗೆ ಜಾರಿದ ಶಾಲಾ ಶಿಕ್ಷಕ!!!

Madhya Pradesh School teacher sleeping with children's bag as pillow

Madhya Pradesh: ಶಿಕ್ಷಕ ಎಂದರೆ ಮಕ್ಕಳನ್ನು ಉತ್ತಮ ಹಾದಿಯಲ್ಲಿ ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡಲು ಪ್ರೇರೇಪಣೆ ನೀಡಬೇಕು.ಗುರುಗಳು ಮಕ್ಕಳನ್ನು ಸರಿಯಾದ ದಾರಿಯಲ್ಲಿ ಸಾಗಲು ಉತ್ತೇಜನ ನೀಡಿ ಮಾರ್ಗದರ್ಶಕರಾಗುತ್ತಾರೆ. ಆದರೆ, ಶಿಕ್ಷಕರೇ ಉಳಿದವರ ಮುಂದೆ ಹಾಸ್ಯಾಸ್ಪದ ಸಂಗತಿಯಾಗಿ ಬಿಟ್ಟರೆ, ಮಕ್ಕಳ ಗತಿಯೇನು ಎಂದು ಊಹಿಸಲಾಸಾಧ್ಯ.

ರಜಾ ದಿನಗಳಲ್ಲಿ ಶಿಕ್ಷಕರು ನಿದ್ರೆ ಮಾಡುವುದು ಸಹಜ.ಹಾಗೆಂದು ಶಾಲೆಯಲ್ಲೇ ನಿದ್ದೆಗೆ ಜಾರಿದರೆ ಹೇಗಿರಬಹುದು? ಸುಂದರ ಈ ಸಮಯ,ಸುಖ ಸಮಯ ಎಂದು ಶಾಲಾ ಅವಧಿಯಲ್ಲೆ ಸೊಂಪಾಗಿ ನಿದ್ರೆ ಮಾಡಿದ ಘಟನೆ ವರದಿಯಾಗಿದೆ.ಈ ರೀತಿಯ ಘಟನೆ ವರದಿಯಾಗಿದ್ದು, ಮಧ್ಯಪ್ರದೇಶದ ಛತ್ತರ್ಪುರದಲ್ಲಿ (Madhya Pradesh News) ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸದ್ಯ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹೌದು! ಇದಕ್ಕೆ ಕಾರಣವೂ ಇದೆ.

ಮಧ್ಯಪ್ರದೇಶದ ಲವಕುಶನಗರದ ಬಜೌರಾ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾದ ರಾಜೇಶ್ ಕುಮಾರ್ ಅಡ್ಜಾರಿಯಾ ಶಾಲೆಯಲ್ಲೇ ನಿದ್ದೆಗೆ ಜಾರಿದ್ದಾರೆ. ಮತ್ತೊಂದೆಡೆ ಮಕ್ಕಳನ್ನೆಲ್ಲ ಹೊರಗೆ ಆಟ ಆಡಲು,ಶಾಲಾ ಅಂಗಳವನ್ನು ಸ್ವಚ್ಛಗೊಳಿಸಲು ಬಿಟ್ಟು, ವಿದ್ಯಾರ್ಥಿಗಳ ಶಾಲಾ ಬ್ಯಾಗ್ಗಳನ್ನೇ ತಲೆದಿಂಬು ಮಾಡಿಕೊಂಡು ಶಿಕ್ಷಕ ಆರಾಮಾಗಿ ನಿದ್ರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಂಚಲನ ಸೃಷ್ಟಿ ಮಾಡಿತ್ತು.

ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜಿಲ್ಲಾ ಶೈಕ್ಷಣಿಕ ಅಧಿಕಾರಿ ಎಂ.ಕೆ.ಕೌಟರಿ ಅವರು ತನಿಖೆ ಮಾಡಲು ಸೂಚಿಸಿದ್ದು, ಶಾಲೆಯ ಮುಖ್ಯಶಿಕ್ಷಕ ಶಾಲಾ ಅವಧಿಯಲ್ಲಿ ನಿದ್ರಿಸಿದ್ದನ್ನು ಗಮನಿಸಿ ಈ ರೀತಿಯ ಶಿಕ್ಷಕರಿದ್ದರೆ ಮಕ್ಕಳ ಶಿಕ್ಷಣದ ಗತಿಯೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿಗಳು ಮುಖ್ಯ ಶಿಕ್ಷಕನಿಗೆ ನೋಟಿಸ್ ನೀಡಿದ್ದು, ಶಿಕ್ಷಕ ನೌಕರಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

Leave A Reply

Your email address will not be published.