Betel Leaf: ಅಂಗಳದ ಮೂಲೆಯಲ್ಲಿ ಸಿಗುವ ಈ ಎಲೆಯೊಂದನ್ನು ಜಗಿದು ತಿಂದರೆ ನಿಮಗೆ ಸಿಗಲಿದೆ ಭರಪೂರ ಪ್ರಯೋಜನ!

Health news health benefits of betle leaf in Kannada

Betel Leaf: ವೀಳ್ಯದೆಲೆ (betel leaf)ಹಾಗೂ ಅಡಿಕೆಗೆ ಪೂಜೆ ಪುನಸ್ಕಾರಗಳಲ್ಲಿ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ಸಾಮಾನ್ಯವಾಗಿ ಊಟ ಆದ ಬಳಿಕ ವೀಳ್ಯದೆಲೆ (Betel)-ಅಡಿಕೆ (Arecanut) ತಿನ್ನುವ ಅಭ್ಯಾಸ ಹೆಚ್ಚಿನವರಿಗೆ ಇರುತ್ತದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಊಟ (Lunch)ಮಧ್ಯಾಹ್ನ ಊಟ ಆದ ಬಳಿಕ ಎಲ್ಲರೂ ಕುಳಿತುಕೊಂಡು ಅಡಿಕೆ ಮತ್ತು ಎಲೆಗೆ ಕೊಂಚ ಸುಣ್ಣ (Lime) ಬೆರೆಸಿ ಸೇವಿಸುವುದುಂಟು. ಆದರೆ, ಈ ವೀಳ್ಯದೆಲೆಯಿಂದ ಏನೆಲ್ಲ ಆರೋಗ್ಯ ಪ್ರಯೋಜನಗಳಿವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದರಿಂದ ಉಸಿರಾಟದ ತೊಂದರೆಯಿಂದ ಪರಿಹಾರ ಕಂಡುಕೊಳ್ಳಬಹುದು. ಕ್ಯಾಲ್ಸಿಯಂ ಅಂಶ ಹೆಚ್ಚಿರುವ ವೀಳ್ಯದೆಲೆ ತಿನ್ನುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

ವೀಳ್ಯದ ಎಲೆಗಳು ಅಥವಾ ವೀಳ್ಯದ ಎಲೆಯ ಎಣ್ಣೆಯ ರಸವನ್ನ ಸ್ನಾನದ ನೀರಿಗೆ ಸೇರಿಸಿದರೆ ನಿಮಗೆ ತಾಜಾ ಭಾವನೆ ಸಿಗುವ ಜೊತೆಗೆ ದೇಹದಲ್ಲಿ ವಾಸನೆ ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ.ಪುರುಷರ ಹಾಗೂ ಮಹಿಳೆಯರ ಜನನಾಂಗಗಳ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುವ ಜೊತೆಗೆ ದೇಹದ ನರನಾಡಿಗಳಲ್ಲಿ ಶಕ್ತಿ ಸಂಚಲನ ಉಂಟಾಗುವಂತೆ ಮಾಡುತ್ತದೆ.ಇದಲ್ಲದೆ, ದೈಹಿಕ ಸುಸ್ತು ಮತ್ತು ಆಯಾಸವನ್ನು ದೂರ ಮಾಡುತ್ತದೆ.

Betel Leaf

ವೀಳ್ಯದೆಲೆ ಜೀರ್ಣಶಕ್ತಿ ಹೆಚ್ಚಿಸುವ ಜೊತೆಗೆ ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಬಳಕೆ ಮಾಡಬಹುದು. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ. ವೀಳ್ಯದೆಲೆಯೊಂದಿಗೆ ಕಾಳುಮೆಣಸು, ಒಣ ಶುಂಠಿ ಅರೆದು ಸೇವಿಸಿದರೆ ಕಫ‌ಯುಕ್ತ ಕೆಮ್ಮು , ದಮ್ಮು ಶಮನವಾಗುತ್ತದೆ.

ವೀಳ್ಯದೆಲೆ ನಿಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಹೃದಯವನ್ನು ರಕ್ಷಿಸುವಂತಹ ಗುಣವನ್ನು ಹೊಂದಿದೆ. ಗರ್ಭಿಣಿ ಸ್ತ್ರೀಯರಲ್ಲಿ ವಾಕರಿಕೆ, ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟುಕೊಂಡು 4 ಏಲಕ್ಕಿ ಕಾಳುಗಳನ್ನಿಟ್ಟು ಜಗಿದರೆ ವಾಕರಿಕೆ ನಿಲ್ಲುತ್ತದೆ. ಮುಖದ ಚರ್ಮ, ಅಸಿಡಿಟಿ ಸಮಸ್ಯೆ, ಶೀತ ಮತ್ತು ಕೆಮ್ಮು, ಮಲಬದ್ಧತೆ ಸಮಸ್ಯೆ, ಕೂದಲಿನ ಆರೈಕೆ ಮತ್ತು ಮೊಡವೆ ಸಮಸ್ಯೆಗಳಿಗೆ ವೀಳ್ಯದೆಲೆ ಮೂಲಕ ಪರಿಹಾರ ಪಡೆಯಬಹುದು.

ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬಿಸಿ ಮಾಡಿ ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿಕೊಂಡು ಹಣೆಗೆ ಶಾಖ ನೀಡಿದರೆ ತಲೆನೋವು ನಿಯಂತ್ರಣಕ್ಕೆ ಬರುತ್ತದೆ.ವೀಳ್ಯದೆಲೆಯು ಪ್ರಬಲವಾದ ಕ್ಯಾನ್ಸರ್ ವಿರೋಧಿ ಮತ್ತು ಆಂಟಿಮ್ಯುಟಾಜೆನಿಕ್ ಸಂಯುಕ್ತಗಳನ್ನು ಒಳಗೊಂಡಿದೆ. ಹೀಗಾಗಿ, ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ವೀಳ್ಯದೆಲೆಯು ಉತ್ಕರ್ಷಣ ನಿರೋಧಕ ಗುಣ ಹೊಂದಿದ್ದು, ನಿಮ್ಮ ದೇಹವು ಹಾದುಹೋಗುವ ಆಕ್ಸಿಡೇಟಿವ್ ಒತ್ತಡದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ವೀಳ್ಯದೆಲೆ ಮೂಲಕ ಬಾಯಿಯ ದುರ್ವಾಸನೆಯ ವಿರುದ್ಧ ಹೋರಾಡಬಹುದು. ಇದರ ಜೊತೆಗೆ ಬ್ಯಾಕ್ಟೀರಿಯಾದ ಸೋಂಕಿನಿಂದ ನಿಮ್ಮನ್ನು ರಕ್ಷಿಸಲು ಸಹಕರಿಸುತ್ತದೆ. ಹೊಟ್ಟೆಯ ಹುಣ್ಣುಗಳು ನಿಮ್ಮ ಹೊಟ್ಟೆಯ ಒಳಪದರದ ಹಾನಿ ಉಂಟು ಮಾಡಬಹುದು. ಗ್ಯಾಸ್ಟ್ರಿಕ್ ಲೋಳೆಯ ಉತ್ಪಾದನೆಯು ಕಡಿಮೆಯಾಗುವ ಜೊತೆಗೆ ಸಾಕಷ್ಟು ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಬಹುದು. ನೀವು ವೀಳ್ಯದೆಲೆಯನ್ನು ಸೇವಿಸಿದಾಗ, ನಿಮ್ಮ ಹುಣ್ಣುಗಳು ವಾಸಿಯಾಗುತ್ತವೆ

ಇದನ್ನೂ ಓದಿ: ರೈತರಿಗೆ ಬಿಗ್‌ಶಾಕಿಂಗ್‌ ನ್ಯೂಸ್‌! ಹಾಲು ಖರೀದಿ ದರದಲ್ಲಿ ಮತ್ತೊಮ್ಮೆ ಕಡಿತ!

Leave A Reply

Your email address will not be published.