Bengaluru News: ಪ್ರೀತಿ ಮಾಯೆ! ಲವ್ ಮಾಡ್ತಿದ್ದ ಕಾಲೇಜು ವಿದ್ಯಾರ್ಥಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು!

Latest Bengaluru news Miscreants poured petrol on a college student and set her on fire for falling in love

Bengaluru: ಪ್ರೀತಿ ಮಾಯೆ ಹುಷಾರು ಎಂಬ ಮಾತು ಅಕ್ಷರಶಃ ನಿಜ. ಈ ಹದಿಹರೆಯದಲ್ಲಿ ಹುಟ್ಟುವ ಪ್ರೀತಿ ಮುದಿ ಹರೆಯದವರೆಗೂ ಇದ್ದರೆ ಚೆಂದ. ಆದರೆ ಇಲ್ಲೊಂದು ಕಡೆ ಕೇವಲ ಪ್ರೀತಿ ಮಾಡಿದ ಎಂಬ ಒಂದು ಕಾರಣಕ್ಕೆ ದುಷ್ಕರ್ಮಿಗಳು ಕಾಲೇಜು ವಿದ್ಯಾರ್ಥಿಯೋರ್ವನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆಯೊಂದು (Bengaluru) ನಡೆದಿದೆ.

ಆರ್‌ಆರ್‌ನಗರದ ನಿವಾಸಿಯಾದ ಮನು ಎಂಬಾತ ತನ್ನ ಸಂಬಂಧಿಕರ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ ಎಲ್ಲಾ ತಂದೆತಾಯಿಯರಂತೆ ಈ ಪ್ರೀತಿಗೆ ಪೋಷಕರ ವಿರೋಧವಿತ್ತು. ಆದರೆ ಜುಲೈ 3 ರಂದು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ತನ್ನ ಪ್ರೇಯಸಿಯನ್ನು ಯುವಕ ತನ್ನ ಮನೆಗೆ ಕರೆದೊಯ್ದಿದ್ದ. ಇದರಿಂದ ಸಿಟ್ಟಗೊಂಡ ಯುವತಿಯ ಪೋಷಕರು ಯುವಕ ಮನು ಎಂಬಾತನ ಮನೆಗೆ ನುಗ್ಗಿ, ಗಲಾಟೆ ಮಾಡಿ, ಯುವತಿಯನ್ನು ವಾಪಾಸು ಕರೆದುಕೊಂಡು ಹೋಗಿದ್ದಾರೆ.

ಇದಾದ ನಂತರ ವಾತಾವರಣ ತಿಳಿಯಾಗಿದ್ದು, ಈತನ ತಂದೆ ಈತನನ್ನು ಬೆಳಗ್ಗೆ ಕಾಲೇಜಿಗೆ ಡ್ರಾಪ್‌ ಮಾಡಿದ್ದರು. ನಂತರ ಕಾಲೇಜು ಮುಗಿದ ನಂತರ ಬಸ್‌ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ವೇಳೆ ಮನುವನ್ನು ದುಷ್ಕರ್ಮಿಗಳು ಕಿಡ್ನ್ಯಾಪ್‌ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಕೈ ಕಾಲು ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾರೆ. ಈ ಘಟನೆ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಮನು ಚಿಕಿತ್ಸೆ ಪಡೆಯುತ್ತಿದ್ದು, ಕೇಸ್‌ ದಾಖಲಾಗಿದೆ.

Leave A Reply

Your email address will not be published.