35ರ ಆಂಟಿಯ ವೈಯಾರದ ಮಾತಿಗೆ ಬಲೆಗೆ ಬಿದ್ದ ಯುವಕ! ಲಕ್ಷ ಲಕ್ಷ ಹಣ ಕಳೆದುಕೊಂಡವ ಕೊನೆಗೇನಾದ?

Latest Karnataka crime news young man commits suicide in Kodagu because of 35 years old woman in kodagu

Kodagu: ಪ್ರೀತಿ ಕುರುಡು ಎಂಬ ಮಾತಿನಂತೆ ಪ್ರೀತಿಯ ಬಲೆಯಲ್ಲಿ ಸಿಲುಕಿ ಕೊನೆಗೆ ಮೋಸ ಹೋಗಿ, ಸಾವಿನ ಕದ ತಟ್ಟಿದ ಅದೆಷ್ಟೋ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೆ ರೀತಿ, ಸುರ ಸುಂದರಾಂಗ ಯುವಕನೊಬ್ಬ ಪ್ರೀತಿಯ ಬಲೆಯಲ್ಲಿ ಬಿದ್ದವನು ಬೀದಿ ಹೆಣವಾಗಿ ಹೋಗಿದ್ದಾನೆ.

ಪ್ರೀತಿಯ ಬಲೆಯಲ್ಲಿ ಸಿಲುಕಿದವನಿಗೆ ತಾನು ಪ್ರೀತಿಸಿದ್ದು ಯುವತಿಯನ್ನಲ್ಲ, ಮದುವೆಯಾಗಿ ಮಗುವಿರುವ ಆಂಟಿಯನ್ನು ಎಂಬ ಸತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮದಲ್ಲಿ, ಮೃತಪಟ್ಟ ಯುವಕನನ್ನು ಅಜಿತ್ ಗಣಪತಿ ಎನ್ನಲಾಗಿದೆ.

ಸರೋಜ ಅವರ ಮುದ್ದಿನ ಕಿರಿಯ ಮಗನಾದ ಅಜಿತ್ ಗಣಪತಿ ಗೋಣಿಕೊಪ್ಪಲಿನ ಖಾಸಗಿ ಬಸ್ಸಿನ ಚಾಲಕನಾಗಿ ಕೆಲಸ ಮಾಡುತಿದ್ದ. ಗೋಣಿಕೊಪ್ಪಲಿನಿಂದ ಹುದಿಕೇರಿ, ಬಿರುನಾಣಿ ಮತ್ತು ಶ್ರೀಮಂಗಲ ಮಾರ್ಗದಲ್ಲಿ ನಾಲ್ಕು ವರ್ಷಗಳಿಂದ ಬಸ್ಸು ಓಡಿಸುತ್ತಿದ್ದನಂತೆ. ಈ ಮಾರ್ಗದಲ್ಲಿ ಬಸ್ಸು ಓಡಿಸುತ್ತಿರುವ ಸಂದರ್ಭ ಬಿರುನಾಣಿ ಸಮೀಪದ ಪೂಕೊಳ ಗ್ರಾಮದ ಬಿನ್ಯ ಬೋಜಮ್ಮನ ಎಂಬ ಮಹಿಳೆಯ ಪರಿಚಯವಾಗಿದ್ದು, ಆ ಬಳಿಕ ಪರಿಚಯ ಪ್ರೀತಿಗೆ ತಿರುಗಿದೆ.

ಈ ನಡುವೆ ಯಾವ ಮಟ್ಟಿಗೆ ಯುವತಿಯನ್ನು ಪ್ರೀತಿಸುತ್ತಿದ್ದ ಎಂಬುದಕ್ಕೆ ಸಾಕ್ಷಿ ಎಂಬಂತೆ ತಾನು ಸಂಪಾದಿಸಿದ ಹಣವನ್ನೆಲ್ಲ ಆಕೆಗೆ ಧಾರೆ ಎರೆದು ಆಕೆಯೇ ತನ್ನ ಸರ್ವಸ್ವ ಎಂದು ನಂಬಿದ್ದ. ತನ್ನ ಮನೆಗೆ ಕಿಂಚಿತ್ತೂ ಹಣ ನೀಡದೆ ಎಲ್ಲ ಹಣವನ್ನೂ ಆಕೆಗೆ ನೀಡುತ್ತಿದ್ದ. ಆಕೆಯೇ ತನ್ನ ಜೀವ ಎಂದುಕೊಂಡು 35ರ ಹರೆಯದ ಆಂಟಿಯ ಸುಳ್ಳು ಪ್ರೀತಿಯ ಅರಿವಿರದೆ ಯುವಕ 10 ಲಕ್ಷಕ್ಕೂ ಹೆಚ್ಚು ಹಣ, ಆಸ್ತಿ, ಚಿನ್ನಾಭರಣವನ್ನು ಕಳೆದುಕೊಂಡಿದ್ದಾನೆ.

ತನ್ನ ದುಡಿಮೆಯ ಹಣ ಸಾಲದೇ ಮನೆಯಲ್ಲಿದ್ದ ಚಿನ್ನ, ಆಸ್ತಿ ಪತ್ರಗಳನ್ನು ಗಿರಿವಿಟ್ಟು ಆಕೆಗೆ ಹಣ ನೀಡುತ್ತಿದ್ದನಂತೆ. ಅಜಿತ್ ಗಣಪತಿ ಬೆಂಗಳೂರಿನಲ್ಲಿದ್ದ ಸಂದರ್ಭ ಖರೀದಿ ಮಾಡಿದ್ದ ಕಾರನ್ನು ಇತ್ತೀಚೆಗೆ ಮಾರಾಟ ಮಾಡಿದ್ದು, ಆಕೆಗಾಗಿ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಒಡವೆಗಳನ್ನು ಕೊಂಡೊಯ್ದು ಗಿರಿವಿ ಅಂಗಡಿಗಳಿಗೆ ಇಟ್ಟಿದ್ದಾನೆ. ಅಜಿತ್ ಎಷ್ಟರಮಟ್ಟಿಗೆ ಆಕೆಯ ಪ್ರೀತಿಗೆ ಮರುಳಾಗಿದ್ದ ಎಂದರೆ ಆಕೆಗಾಗಿ ತನ್ನ ಹಣ ಖರ್ಚು ಮಾಡಿದ್ದು ಸಾಲದೆಂಬಂತೆ ಸಾಲ ಮಾಡಿ ಸ್ನೇಹಿತರ , ನೆಂಟರ ಬಳಿ ಸುಮಾರು 50 ಸಾವಿರ, ಲಕ್ಷದಷ್ಟು ಸಾಲ ಮಾಡಿದ್ದ. ತನ್ನ ಬಳಿ ಇದ್ದ ಸ್ಮಾರ್ಟ್ ಫೋನನ್ನು ಕೂಡ ಮಾರಾಟ ಮಾಡಿ ಕೊನೆಗೆ ತನ್ನ ತಾಯಿಯ ಬಳಿ ಇದ್ದ ಕೀ ಪ್ಯಾಡ್ ಫೋನನ್ನು ಬಳಸುವ ಹಂತಕ್ಕೆ ತಲುಪಿ ಎಲ್ಲವನ್ನು ಕಳೆದುಕೊಂಡು ತನ್ನ ಜೀವವನ್ನು ಕೂಡ ಬಲಿ ಕೊಡುವಂತೆ ಮಾಡಿದೆ ಈ ಪ್ರೀತಿ.

ಈ ನಡುವೆ ಅಜಿತ್ ಗಣಪತಿ ಇದ್ದಕ್ಕಿದ್ದಂತೆ ಜುಲೈ 2 ರಂದು ರಾತ್ರಿ ಗೋಣಿಕೊಪ್ಪದ ಮಾರುಕಟ್ಟೆ ಬಳಿ ವಿಷ ಸೇವಿಸಿ ಸಾಯಲು ಮುಂದಾಗಿದ್ದಾನೆ. ಈ ವಿಚಾರ ತಿಳಿದು ಆತನ ಅಣ್ಣ ಅಜಿತ್ ನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಅಜಿತ್ ತನ್ನ ಸಹೋದರ ಭರತ್ ಸೋಮಯ್ಯನಿಗೆ ನನ್ನನ್ನು ಬದುಕಿಸಬೇಡಿ. ಬದುಕಿಸಿದರೂ ನಾಳೆ ಕಿರಣ್ ಗೌಡ ನನ್ನನ್ನು ಕೊಚ್ಚಿ ಕೊಲೆ ಮಾಡುತ್ತಾನೆ ಎಂದು ಸಾಯುವ ಕೊನೆ ಕ್ಷಣದಲ್ಲಿ ಕೂಡ ಭಯ ಬೀಳುತ್ತಿದ್ದ ಎನ್ನಲಾಗಿದೆ.

ಹೀಗಾಗಿ, ಅಜಿತ್ ನನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಆತ ಜೀವ ಬಿಟ್ಟಿದ್ದಾನೆ.ಈ ರೀತಿ ಸಾಯಲು ಮುಂದಾಗಲು ಕಾರಣವೇನು ಎಂದು ಎಲ್ಲರು ಯೋಚಿಸುವಾಗ ಅಜಿತ್ ಬರೆದು ತನ್ನ ಜೇಬಿನಲ್ಲಿಟ್ಟಿಕೊಂಡಿದ್ದ ಡೆತ್ ನೋಟ್ ಸಿಕ್ಕಿದೆ. ಅಜಿತ್ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ವಿಚಾರ ಡೆತ್ ನೋಟ್ ಮೂಲಕ ಬಯಲಾಗಿದೆ. ಅಜಿತ್ ಗಣಪತಿ ಬರೆದಿದ್ದ ಡೆತ್ ನೋಟ್ ಮತ್ತು ಗಣಪತಿ ಅವರ ಕುಟುಂಬದವರು ನೀಡಿದ ದೂರನ್ನು ಆಧರಿಸಿ ಗೋಣಿಕೊಪ್ಪ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಅಜಿತ್ ಪ್ರೀತಿಸುತ್ತಿದ್ದ ಮಹಿಳೆ ಬಿನ್ಯ ಬೋಜಮ್ಮ ಮತ್ತು ಕಿರಣ್ ಗೌಡನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಅಜಿತ್ ಗಣಪತಿ ಸಾವಿಗೆ ನೈಜ ಕಾರಣವೇನು ಎಂಬ ವಿಚಾರ ತನಿಖೆಯ ಬಳಿಕವಷ್ಟೇ ಹೊರ ಬರಬೇಕಾಗಿದೆ

ಇದನ್ನೂ ಓದಿ: ಜೋಡಿಯೊಂದು ಲಾಡ್ಜ್ ನಲ್ಲಿ ಜಾಲಿ ಮೂಡಲಿದ್ದಾಗ ಕಾದಿತ್ತೊಂದು ಶಾಕ್!!!

Leave A Reply

Your email address will not be published.