Chitradurga: ಮಲಗಿದ್ದ 13 ದಿನದ ಹಸುಗೂಸಿನ ಮೇಲೆ ಕೋತಿಯಿಂದ ಮಾರಣಾಂತಿಕ ದಾಳಿ!

Latest Karnataka news Fatal attack by a monkey on a sleeping 13-day-old baby in Chitradurga

Chitradurga: ಇಂದು ಅಭಿವೃದ್ಧಿ ಹೆಸರಿನಲ್ಲಿ ಕಟ್ಟಡಗಳು ತಲೆ ಎತ್ತುತ್ತಿದ್ದು, ಕಾಡುಗಳೆಲ್ಲ ನಾಶವಾಗಿ ಪಟ್ಟಣ ಬೆಳೆಯುತ್ತಿದೆ. ಹೀಗಾಗಿ, ಕಾಡನ್ನು ನಂಬಿದ್ದ ಅದೆಷ್ಟೋ ಜೀವಿಗಳು ಆಹಾರದ ಕೊರತೆಯಿಂದ ಕಾಡು ತೊರೆದು ಪಟ್ಟಣದ ಕಡೆಗೆ ವಲಸೆ ಬರುತ್ತಿವೆ. ಹೀಗೆ ವಲಸೆ ಬಂದ ಸಂದರ್ಭದಲ್ಲಿ ಆಹಾರ ಸಿಗದೇ ಇದ್ದಾಗ ತೋಟ, ಮನೆ, ಮನುಷ್ಯರ ಮೇಲೆ ದಾಳಿ ನಡೆಸುವ ಅನೇಕ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಇದೇ ರೀತಿಯ ಘಟನೆ ಚಿತ್ರದುರ್ಗದಲ್ಲಿ ವರದಿಯಾಗಿದೆ.

ಚಿತ್ರದುರ್ಗ( Chitradurga) ಜಿಲ್ಲೆಯಲ್ಲಿ ಕೋತಿಗಳ ಹಾವಳಿ ಹೆಚ್ಚಾಗುತ್ತಿದ್ದು, ಮನೆಯಲ್ಲಿ ಮಲಗಿದ್ದ 13 ದಿನದ ಪುಟ್ಟ ಕಂದಮ್ಮನ ಮೇಲೆ ಕೋತಿ ದಾಳಿ ಮಾಡಿರುವ ಘಟನೆ ವರದಿಯಾಗಿದೆ. ತೊರೆಕೋಮನಹಳ್ಳಿಯಲ್ಲಿ ಕೋತಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಗ್ರಾಮಸ್ಥರು ಕೋತಿ ಕಾಟ ತಡೆಯುವಂತೆ ಅರಣ್ಯಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತೊರೆಕೋಲಮನಹಳ್ಳಿಯ ಮಂಜುಳಾ ಹಾಗೂ ಸಿದ್ದೇಶ್ ದಂಪತಿಗಳ 13 ದಿನದ ಮಗುವಿನ ಮೇಲೆ ಕೋತಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಕೋತಿಯ ದಾಳಿಯ ಪರಿಣಾಮ ಮಗುವಿನ ಹಣೆ ಮತ್ತು ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಗಾಯಗೊಂಡಿರುವ ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ವೀಳ್ಯದೆಲೆಯಲ್ಲಿ ಅಡಗಿದೆ ನಿಮಗೆ ಗೊತ್ತಿರದ ಅನೇಕ ಪ್ರಯೋಜನ; ಏನದು?

Leave A Reply

Your email address will not be published.